ರಾಯಚೂರು: ಒಪೆಕ್‌ನಿಂದ ಕ್ಯಾನ್ಸರ್‌ ಡೇ ಕೇರ್‌ ಸೆಂಟರ್ ಶುರು!

Published : Feb 06, 2025, 12:41 PM IST
ರಾಯಚೂರು: ಒಪೆಕ್‌ನಿಂದ ಕ್ಯಾನ್ಸರ್‌ ಡೇ ಕೇರ್‌ ಸೆಂಟರ್ ಶುರು!

ಸಾರಾಂಶ

ಕ್ಯಾನ್ಸರ್‌ ಕಾಯಿಲೆಗೆ ಮೂರು ರೀತಿಯಲ್ಲಿ ಚಿಕಿತ್ಸೆ ಒದಗಿಸುವ ಪದ್ಧತಿಯಿದೆ. ಇದರಲ್ಲಿ ಶಸ್ತ್ರಚಿಕಿತ್ಸಕ ಆಂಕೊಲಾಜಿ, ಮೆಡಿಕಲ್‌ ಆಂಕೊಲಾಜಿ (ಕಿಮೋ ಥೆರಪಿ), ರೇಡಿಯೇಷನ್ ಆಂಕೊಲಾಜಿ ಮುಖಾಂತರ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಕಾಯಿಲೆ ಕಂಡ ಬಳಿಕ ಶಸ್ತ್ರಚಿಕಿತ್ಸೆ, ರೇಡಿಯೇಷನ್‌ ಮುಖಾಂತರ ಒಂದು ಬಾರಿ ಚಿಕಿತ್ಸೆ ನೀಡಲಾಗುತ್ತದೆ ನಂತರ ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಅವುಗಳ ಹಂತಗಳನ್ನಾಧರಿಸಿ ರೋಗಿಗಳು ತಿಂಗಳಿಗೊಮ್ಮೆ ಕಿಮೋ ಥೆರಪಿಗೊಳಪಡಬೇಕಾಗುತ್ತದೆ.

ರಾಮಕೃಷ್ಣ ದಾಸರಿ

ರಾಯಚೂರು(ಫೆ.06): ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ಯಾನ್ಸರ್‌ ಬಾಧಿತರಿಗಾಗಿ ಡೇ ಕೇರ್‌ ಸೆಂಟರ್‌ ಆರಂಭಿಸಲು ಉದ್ದೇಶಿಸಿರುವ ಈ ಸಮಯದಲ್ಲಿಯೇ ರಾಯಚೂರು ಜಿಲ್ಲೆಯ ರಾಜೀವ್‌ ಗಾಂಧಿ ಆತ್ಯಾಧುನಿಕ ಆಸ್ಪತ್ರೆ (ಒಪೆಕ್)ಯ ಆಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಡೇ ಕೇರ್‌ ಸೆಂಟರ್‌ ಆರಂಭಿಸಿ ಅಚ್ಚರಿ ಮೂಡಿಸಿದೆ.

ಹಲವು ವರ್ಷಗಳಿಂದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್‌) ಸಂಚಾಲಿತ ಒಪೆಕ್‌ ಆಸ್ಪತ್ರೆ ಬಡ-ಮಧ್ಯಮ ವರ್ಗದವರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಿಕೊಡುವಲ್ಲಿ ವಿಫಲಕಂಡಿತ್ತು. ಇದೀಗ ಹಂತಹಂತವಾಗಿ ಸುಧಾರಣೆ ಕಾಣುತ್ತಿರುವ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಕ್ಯಾನ್ಸರ್‌ ಕಾಯಿಲೆ ಸಂಬಂಧಿಸಿದಂತೆ ಸುಮಾರು ಒಂದು ಸಾವಿರ ಶಸ್ತ್ರಚಿಕಿತ್ಸೆಗಳನ್ನು (ಶಸ್ತ್ರಚಿಕಿತ್ಸಾ ಆಂಕೊಲಾಜಿ) ಮಾಡಲಾಗಿದೆ. ಇದೀಗ ಆರಂಭಗೊಂಡಿರುವ( ಇಪ್ಪತ್ತು ದಿನಗಳ ಹಿಂದೆ) ಡೇ ಕೇರ್‌ ಸೆಂಟರ್ ನಲ್ಲಿ ಕಿಮೋ ಥೆರಪಿ ಸೇವೆಯನ್ನು ನೀಡುತ್ತಿದ್ದು, ಇಲ್ಲಿ ತನಕ ಸುಮಾರು 22 ಜನರಿಗೆ ಕಿಮೋ ಥೆರಪಿ ನೀಡಿದ್ದು, ಇನ್ನು ಸುಮಾರು 15 ಜನರು ಕಿಮೋ ಥೆರಪಿ ಮಾಡಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಅವರೆಲ್ಲರಿಗೂ ಚಿಕಿತ್ಸೆಯೊಂದಿಗೆ, ಔಷಧಗಳನ್ನು ಒದಗಿಸಿಕೊಡಲಾಗುತಿದೆ.

ರಾಯಚೂರು: ಮರಳು ಗಣಿಗಾರಿಕೆಯಿಂದ ಹಿಂದೆ ಸರಿದ ಹಟ್ಟಿ ಗಣಿ ಕಂಪನಿ?

ಏನಿದು ಡೇ ಕೇರ್‌ ಸೆಂಟರ್ ? :

ಕ್ಯಾನ್ಸರ್‌ ಕಾಯಿಲೆಗೆ ಮೂರು ರೀತಿಯಲ್ಲಿ ಚಿಕಿತ್ಸೆ ಒದಗಿಸುವ ಪದ್ಧತಿಯಿದೆ. ಇದರಲ್ಲಿ ಶಸ್ತ್ರಚಿಕಿತ್ಸಕ ಆಂಕೊಲಾಜಿ, ಮೆಡಿಕಲ್‌ ಆಂಕೊಲಾಜಿ (ಕಿಮೋ ಥೆರಪಿ), ರೇಡಿಯೇಷನ್ ಆಂಕೊಲಾಜಿ ಮುಖಾಂತರ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಕಾಯಿಲೆ ಕಂಡ ಬಳಿಕ ಶಸ್ತ್ರಚಿಕಿತ್ಸೆ, ರೇಡಿಯೇಷನ್‌ ಮುಖಾಂತರ ಒಂದು ಬಾರಿ ಚಿಕಿತ್ಸೆ ನೀಡಲಾಗುತ್ತದೆ ನಂತರ ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಅವುಗಳ ಹಂತಗಳನ್ನಾಧರಿಸಿ ರೋಗಿಗಳು ತಿಂಗಳಿಗೊಮ್ಮೆ ಕಿಮೋ ಥೆರಪಿಗೊಳಪಡಬೇಕಾಗುತ್ತದೆ. ಅದಕ್ಕಾಗಿ ಬೆಂಗಳೂರು, ಹೈದರಾಬಾದ್‌, ಮುಂಬಾಯಿ ಸೇರಿದಂತೆ ಇತರೆ ದೂರದ ಊರುಗಳಿಗೆ ಪ್ರಯಾಣಿಸಬೇಕಾಗುತ್ತದೆ ಅಷ್ಟೇ ಅಲ್ಲದೇ ಈ ದುಬಾರಿಯೂ ಆಗಿದೆ.

ಸಿಎಂ ಬದಲಾವಣೆ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ಇಲ್ಲ: ಸಚಿವ ಬೋಸರಾಜು

ಮೊದಲ ಪ್ರಯತ್ನ: 

ಕಾನ್ಸರ್‌ ಬಾಧಿತರು, ಅವರ ಸಂಬಂಧಿಗಳು ದೂರದ ಕ್ಯಾನ್ಸರ್ ಆಸ್ಪತ್ರೆ ಹಾಗೂ ಡೇ ಕೇರ್‌ ಸೆಂಟರ್‌ಗಳಿಗೆ ಪ್ರತಿ ತಿಂಗಳು ಹೋಗಿ ಬರುವುದನ್ನು ತಪ್ಪಿಸುವ ಉದ್ದೇಶದಿಂದ ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ಈಗಾಗಲೇ ಶಸ್ತ್ರಚಿಕಿತ್ಸಾ ಆಂಕೊಲಾಜಿ ವ್ಯವಸ್ಥೆ ಇರುವುದರಿಂದ ಇಡೀ ರಾಜ್ಯದಲ್ಲಿಯೇ ಮೊದಲ ಡೇ ಕೇರ್‌ ಸೆಂಟರ್ ಆರಂಭಿಸಿ, ಅರೆ ಕಾಲಿಕವಾಗಿ ಮೆಡಿಕಲ್‌ ಆಂಕೊಲಾಜಿಸ್ಟ್‌ ಅವರನ್ನು ನೇಮಿಸಿಕೊಂಡು, ತಿಂಗಳಿಗೊಮ್ಮೆ ಪ್ರಿಡಿಯಾಟ್ರಿಕ್‌ ಆಂಕೊಲಾಜಿಸ್ಟ್‌ ಅವರು ಆಸ್ಪತ್ರೆಗೆ ಬರುವ ವ್ಯವಸ್ಥೆಯನ್ನು ಮಾಡಿ ಕಿಮೋ ಥೆರಪಿ (ಡೈಗ್ನೋಸ್ಟಿಕ್‌) ಯನ್ನು ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರೇಡಿಯೇಷನ್ ಆಂಕೊಲಾಜಿಯನ್ನು ಸಹ ಆರಂಭಿಸಿ, ಕ್ಯಾನ್ಸರ್‌ ಕಾಯಿಲೆಗೆ ಅಗತ್ಯವಾದ ಎಲ್ಲ ರೀತಿಯ ಚಿಕಿತ್ಸೆ ಕಲ್ಪಿಸುವ ಸದುದ್ದೇಶವನ್ನು ಹೊಂದಲಾಗಿದೆ.

ರಾಯಚೂರಿನಲ್ಲಿರುವ ರಾಜೀವ್‌ ಗಾಂಧಿ ಆತ್ಯಾಧುನಿಕ (ಒಪೆಕ್‌ ) ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿದಂತೆ ಡೇ ಕೇರ್ ಸೆಂಟರ್‌ ಆರಂಭಿಸಿದ್ದು, ಅಗತ್ಯವಾದ ತಜ್ಞರನ್ನು ಸಹ ನಿಯೋಜಿಸಲಾಗಿದೆ. ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಕ್ಯಾನ್ಸರ್‌ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಸೇವೆಯನ್ನು ಆರಂಭಿಸಲಾಗುವುದು ಎಂದು ರಾಯಚೂರು ಒಪೆಕ್‌ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಮೇಶ ಸಾಗರ್‌ ತಿಳಿಸಿದ್ದಾರೆ.  

PREV
Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: Aadi Lakshmi Purana Serial - ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ