Shivamogga: ಆಟವಾಡುತ್ತ ನೀರಿನ ಬಕೆಟ್‌ಗೆ ಬಿದ್ದು ಒಂದು ವರ್ಷದ ಗಂಡು ಮಗು ಸಾವು!

By Suvarna News  |  First Published Feb 28, 2023, 10:00 PM IST

ನೀರು ತುಂಬಿದ ಬಕೆಟ್‌ಗೆ ಬಿದ್ದು ಕೂಲಿ ಕೆಲಸಗಾರನ ಒಂದು ವರ್ಷದ ಗಂಡು ಮಗು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ಸೊನಲೆ ಗ್ರಾಮದ ಹೊಸಕೊಪ್ಪ ಎಂಬಲ್ಲಿ ನಡೆದಿದೆ. 


ಶಿವಮೊಗ್ಗ (ಫೆ.28): ನೀರು ತುಂಬಿದ ಬಕೆಟ್‌ಗೆ ಬಿದ್ದು ಒಂದು ವರ್ಷದ ಗಂಡು ಮಗು ಮೃತಪಟ್ಟಿರುವ ಘಟನೆ ಹೊಸನಗರ ತಾಲೂಕಿನ ಸೊನಲೆ ಗ್ರಾಪಂ ವ್ಯಾಪ್ತಿಯ ಸೊನಲೆ ಗ್ರಾಮದ ಹೊಸಕೊಪ್ಪ ಎಂಬಲ್ಲಿ ನಡೆದಿದೆ. ಕೂಲಿ ಕೆಲಸಗಾರರಾದ ಹರೀಶ್ ಹಾಗೂ ವೀಣಾ ದಂಪತಿಗಳ ಒಂದು ವರ್ಷ ಒಂದು ತಿಂಗಳ ಸಂಕೇತ್ ಎಂಬ ಮಗು ಮೃತಪಟ್ಟಿದೆ.‌ ಪೋಷಕರು ಬಕೆಟ್‌ನಲ್ಲಿ ನೀರು ಹಾಕಿ ಆಗಾಗ ಮಗುವಿಗೆ ಆಟವಾಡಿಸುವ ಅಭ್ಯಾಸ ಹೊಂದಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ದುರಂತವೆಂದರೆ ದನಗಳಿಗೆ ಕುಡಿಯಲು ಇಟ್ಟಿದ್ದ ಅರ್ಧ ಬಕೆಟ್ ನೀರಿನಲ್ಲಿ ಮಗು ತಲೆ ಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ತೋಟದ ಕೆಲಸಕ್ಕೆ ಪೋಷಕರು ಹೋದಾಗ ಈ ಘಟನೆ ನಡೆದಿದ್ದು ಅವರು ಬಂದು ನೋಡುವಷ್ಟರಲ್ಲಿ ಮಗು ಮೃತಪಟ್ಟಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌‌.

ನವೀನ ಛಲವಾದಿ ಕುಟುಂಬಕ್ಕೆ ವಿವಿಧ ಸಂಘಟನೆಗಳ ಮುಖಂಡರ ಸಾಂತ್ವನ
 ಶಿಗ್ಗಾಂವಿ: ತಾಲೂಕಿನ ಕೋಣನಕೇರಿಯಲ್ಲಿರುವ ವಿಐಎನ್‌ಪಿ ಡಿಸ್ಟಲರೀಸ್‌ ಸಕ್ಕರೆ ಕಾರ್ಖಾನೆ ಅವಘಡದಲ್ಲಿ ಮೃತಪಟ್ಟನವೀನ ಛಲವಾದಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದ್ದಾರೆ.

Tap to resize

Latest Videos

ತಾಲೂಕಿನ ದುಂಡಸಿಯಲ್ಲಿ ಮಂಗಳವಾರ ಡಿವೈಎಫ್‌ಐ, ಸಿಐಟಿಯು, ಎಸ್‌ಎಫ್‌ಐ, ರೈತ ಸಂಘಟನೆಗಳ ನಿಯೋಗವು ಮೃತ ನವೀನ ಛಲವಾದಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಮಾತನಾಡಿದರು.

ಕಾರ್ಮಿಕರಿಗೆ ಸುರಕ್ಷಿತ ಕ್ರಮಕೈಗೊಳ್ಳದೆ ಇರುವುದರಿಂದಾಗಿಯೇ ಯುವ ಕಾರ್ಮಿಕ ನವೀನ ಮೃತಪಟ್ಟಿದ್ದಾನೆ. ಇದಕ್ಕೆ ಕಾರ್ಖಾನೆಯ ಮಾಲೀಕರೇ ನೇರ ಹೊಣೆ ಎಂದು ಅವರು ಆರೋಪಿಸಿದರು. ಮೃತ ಕಾರ್ಮಿಕನ ಕುಟುಂಬಕ್ಕೆ ಕಾರ್ಖಾನೆಯ ಆಡಳಿತ ಮಂಡಳಿ ತಕ್ಷಣ ಕನಿಷ್ಠ . 50 ಲಕ್ಷ ಪರಿಹಾರ ಒದಗಿಸಬೇಕು. ಮೃತರ ಕುಟುಂಬದವರಿಗೆ ಕಾರ್ಖಾನೆಯಲ್ಲಿ ಕಾಯಂ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕು ಕೇಂದ್ರದಲ್ಲೇ ಇದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಮೃತರ ಮನೆಗೆ ಭೇಟಿ ನೀಡದಿರುವುದು ನೋವು ತಂದಿದೆ ಎಂದರು.

Belagavi: ಉಪಟಳ ತಾಳಲಾರದೆ ಆಯುಧದಿಂದ ಹೊಡೆದು ಮಗನನ್ನೇ ಕೊಂದ ತಂದೆ!

ಕಾರ್ಖಾನೆ ಮಾಲೀಕ ಸೇರಿದಂತೆ 6 ಜನರ ಮೇಲೆ ಐಪಿಸಿ ಕಲಂ 300 ಮತ್ತು 304ರಡಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು. ಕಾರ್ಮಿಕರಿಗೆ ಸುರಕ್ಷತೆ ನೀಡದ ಕಾರ್ಖಾನೆಯ ಮೇಲೆಯೂ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಕಾರ್ಮಿಕ ಇಲಾಖೆಯಿಂದ ಅಗತ್ಯ ಸೌಲಭ್ಯಗಳನ್ನು ಮೃತನ ಕುಟುಂಬಕ್ಕೆ ಒದಗಿಸಬೇಕು. ಇಲ್ಲವಾದಲ್ಲಿ ಡಿವೈಎಫ್‌ಐ, ಸಿಐಟಿಯು, ಎಸ್‌ಎಫ್‌ಐ, ರೈತ ಸಂಘಟನೆ, ದಲಿತ ಸಂಘಟನೆ ಹಾಗೂ ಸಮಾನ ಮನಸ್ಕ ಸಂಘಟನೆಗಳೊಡಗೂಡಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೋರಿಯಲ್ಲಿ ಸಿಲುಕಿ ಕಾರ್ಮಿಕ ಸಾವು, 9 ದಿನಗಳ ಬಳಿಕ ಶವ ತೆಗೆಯಲು ಮುಂದಾದ ಬಿಬಿಎಂಪಿ

ಸಿಐಟಿಯು ಜಿಲ್ಲಾ ಮುಖಂಡರಾದ ಅಂದಾನೆಪ್ಪ ಹೆಬಸೂರ, ರಾಜ್ಯ ರೈತ ಸಂಘಟನೆ ಜಿಲ್ಲಾ ಮುಖಂಡರಾದ ಮುತ್ತಣ್ಣ ಗುಡಿಗೇರಿ ಮಾತನಾಡಿದರು. ನಿಯೋಗದಲ್ಲಿ ಮುಖಂಡರಾದ ರವಿ ಬಂಕಾಪುರ, ಶಿವು ನೆಲ್ಲೂರು, ಶಂಭು ಎನ್‌., ರೈತ ಸಂಘಟನೆ ಮುಖಂಡರಾದ ಈರಣ್ಣ ಸಮಗೊಂಡ ಉಪಸ್ಥಿತರಿದ್ದರು.

click me!