Udupi: ರಸ್ತೆ ಅಪಘಾತಗೊಂಡು, ಮೆದುಳು ನಿಷ್ಕ್ರೀಯ ಬಳಿಕ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

By Suvarna News  |  First Published Feb 28, 2023, 7:46 PM IST

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೊಡೇರಿ ಶಿಲ್ಪಾ ಮಾಧವ ಎಂಬವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆಯಲಾಗಿದೆ.


ಉಡುಪಿ (ಫೆ.28): 44 ವರ್ಷ ಪ್ರಾಯದ ಕೊಡೇರಿ ಶಿಲ್ಪಾ ಮಾಧವರವರಿಗೆ  ಬೈಂದೂರು  ತಾಲೂಕಿನ ಮರವಂತೆ  ಬಳಿ   ಫೆ.25 ರಂದು ಮದ್ಯಾಹ್ನ 1.30 ಗಂಟೆಗೆ ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ  ಫೆ.28 ರಂದು ಸಂಜೆ 4.58 ಕ್ಕೆ  ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ  ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸನ್ನ ಕುಮಾರ್ ಇವರ  ಪತ್ನಿ ಕೊಡೇರಿ ಶಿಲ್ಪಾ ಮಾಧವ ಅವರು ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು. ವೈದ್ಯರು ಕೊಡೇರಿ ಶಿಲ್ಪಾ ಮಾಧವ  ಅವರನ್ನು  ರಕ್ಷಿಸಲು ಪ್ರಯತ್ನಿಸಿದರೂ,  ಅವರು  ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.

ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಕೊಡೇರಿ ಶಿಲ್ಪಾ ಮಾಧವ  ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು  ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ  ಎಂದು ಘೋಷಿಸಿದರು. ಮೊದಲನೆಯದು ಫೆ.26 ರಂದು ಸಂಜೆ  6.29ಕ್ಕೆ  ಮತ್ತು ಎರಡನೆಯದು ಫೆ.27ರಂದು ಬೆಳಿಗ್ಗೆ 1.35 ಕ್ಕೆ ಖಾತ್ರಿಪಡಿಸಿಕೊಳ್ಳಲಾಯಿತು. ನಂತರ ಕೊಡೇರಿ ಶಿಲ್ಪಾ ಮಾಧವ ಅವರ ಪತಿ ಶ್ರೀ ಪ್ರಸನ್ನ ಕುಮಾರ್  ಮತ್ತು ಅವರ ಕುಟುಂಬ ಸದಸ್ಯರು ಇತರ  ರೋಗಿಗಳ ಜೀವ ಉಳಿಸಲು   ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. 

Latest Videos

undefined

ದಾನ ಮಾಡಿದ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ  ಮತ್ತು ಎರಡು ಕಾರ್ನಿಯಾಗಳು  6 ಜನರ ಜೀವ ಉಳಿಸಲು ಸಹಾಯವಾಗಿದೆ.
ಜೀವನ ಸಾರ್ಥಕತೆ ಪ್ರೋಟೋಕಾಲ್ ಗಳು ಮತ್ತು ನಿರ್ಧಾರಗಳ ಪ್ರಕಾರ, ಯಕೃತ್ ಅನ್ನು ಅಸ್ಟರ್ ಸಿ ಎಂ ಐ  ಆಸ್ಪತ್ರೆ ಬೆಂಗಳೂರು,  ಒಂದು ಮೂತ್ರಪಿಂಡವನ್ನು ಎ  ಜೆ ಆಸ್ಪತ್ರೆ ಮಂಗಳೂರು  ಮತ್ತು  ಎರಡು ಕಾರ್ನಿಯಾಗಳು,  ಒಂದು ಮೂತ್ರಪಿಂಡ ಹಾಗೂ  ಚರ್ಮ ವನ್ನು ಕಸ್ತೂರ್ಬಾ  ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ  ರೋಗಿಗಳಿಗೆ ಬಳಸಲಾಯಿತು.

ಕರ್ತವ್ಯನಿರತ ಟ್ರಾಫಿಕ್‌ ಎಎಸ್‌ಐಗೆ ಆಟೋ ಡಿಕ್ಕಿ: ಮೆದುಳು ನಿಷ್ಟ್ರಿಯಗೊಂಡು ಸಾವು

ಪ್ರಸನ್ನ  ಕುಮಾರ್ ಮತ್ತು ಕುಟುಂಬ ಸದಸ್ಯರು ಮಾತನಾಡಿ, ಅಂಗಒಂದು ಪುಣ್ಯದ ಕೆಲಸ.  ಶಿಲ್ಪಾ ಅವರು    ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದು ತಿಳಿಸಿದ್ದಾರೆ. ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಶ್ರೀಮತಿ ಕೊಡೇರಿ ಶಿಲ್ಪಾ ಮಾಧವ ಕುಟುಂಬದ ಈ ಅಂಗಾಂಗ ದಾನದ ಈ ಉದಾತ್ತನಿರ್ಧಾರವು  ಜನರ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ ಮತ್ತು ಇತರರು ಇದನ್ನು  ಅನುಕರಿಸುವ ಅಗತ್ಯವಿದೆ. ಎಂದು ಹೇಳಿದರು.

ನಿನ್ನಂಥಾ ಮಗಳು ಇಲ್ಲ..ಅಪ್ಪನಿಗೆ ಯಕೃತ್ತು ದಾನ ಮಾಡಿದ 17 ವರ್ಷದ ಮಗಳು

ದಾನ  ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ವರ್ಗಾಯಿಸಲಾಯಿತು.

click me!