ಸುವರ್ಣ ತ್ರಿಭುಜ ದುರಂತಕ್ಕೆ ವರ್ಷ, ಕಾಣೆಯಾದ ಕಡಲ ಮಕ್ಕಳ ಕಥೆ ನಿಗೂಢ

By Kannadaprabha NewsFirst Published Dec 15, 2019, 10:03 AM IST
Highlights

ಸುವರ್ಣ ತ್ರಿಭುಜ ಎಂಬ ಬೋಟು ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರು ಗೋವಾ ಸಮುದ್ರ ತೀರದಲ್ಲಿ ನಿಗೂಢವಾಗಿ ಕಾಣೆಯಾದ ಪ್ರಕರಣಕ್ಕೆ ಡಿ.15ಕ್ಕೆ ವರ್ಷ ತುಂಬಿದೆ. ದುರಂತ ನಡೆದ ಸಂದರ್ಭ ಪ್ರತಿ ನಿಮಿಷ ತಮ್ಮವರು ಬರುತ್ತಾರೆಂದು ಕಾದು ಕುಳಿತಿದ್ದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಉಡುಪಿ(ಡಿ.15): ಕರಾವಳಿಯ ಲಕ್ಷಾಂತರ ಮೀನುಗಾರರನ್ನು ತಲ್ಲಣಗೊಳಿಸಿದ, ರಾಜ್ಯವನ್ನೇ ಆತಂಕಕ್ಕೀಡು ಮಾಡಿದ, ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎಂಬ ಬೋಟು ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರು ಗೋವಾ ಸಮುದ್ರ ತೀರದಲ್ಲಿ ನಿಗೂಢವಾಗಿ ಕಾಣೆಯಾದ ಪ್ರಕರಣಕ್ಕೆ ಡಿ.15ಕ್ಕೆ ವರ್ಷ ತುಂಬಿದೆ.

2018 ಡಿ.13ರಂದು ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಈ ಬೋಟು ಡಿ. 15ರ ಮಧ್ಯರಾತ್ರಿಯವರೆಗೆ ಬಂದರಿನೊಂದಿಗೆ ಸಂಪರ್ಕದಲ್ಲಿತ್ತು. ನಂತರ ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಂಡಿತು. ನಂತರ 7 ಮಂದಿ ಮೀನುಗಾರರು ಸಹಿತ ಬೋಟು ನಾಪತ್ತೆಯಾಯಿತು. ಈ ಬೋಟು, ಮೀನುಗಾರರನ್ನು ಪತ್ತೆ ಮಾಡಲು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳದ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ, ಕೊನೆಗೆ ದೇಶದ ಗಡಿಗಳನ್ನು ಕಾಯುವ ನೌಕಾಸೇನೆಯೇ ಕಾರ್ಯಾಚರಣೆಗೆ ಇಳಿಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಾಪತ್ತೆಯಾದ ಮೀನುಗಾರರನ್ನು ತೋರಿಸಿ ಕೊಡುತ್ತೇನೆ ಎಂಬ ದೈವದ ಭರವಸೆ ಕೂಡ ಸತ್ಯವಾಗಲಿಲ್ಲ.

ಹಂಪಿ: ಹಿಂದೂ ಸಂಪ್ರದಾಯದಂತೆ ತಾಯಿ ಪಿಂಡ ಪ್ರದಾನಗೈದ ವಿದೇಶಿ ಯುವತಿ.

ಸರ್ಕಾರ, ಸುವರ್ಣ ತ್ರಿಭುಜ ಬೋಟು ಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರು ಮುಳುಗಿ ಮೃತಪಟ್ಟಿದ್ದೆ ಎಂದು ಘೋಷಿಸಿ, ಈ ಮೀನುಗಾರರ ಕುಟುಂಬಗಳಿಗೆ ಪರಿಹಾರವನ್ನು ನೀಡಿದೆ. ಆದರೆ ಈ ಸಾಹಸಿ ಮೀನುಗಾರರ ಮನೆಯವರು ಇವತ್ತಿಗೂ ಕಣ್ಣೀರಲ್ಲಿ ಕೈತೊಳೆಯುತ್ತಿವೆ.

ನೌಕಾಪಡೆ ಹೆಸರಿಗೆ ಕಪ್ಪುಚುಕ್ಕೆ:

ಒಂದು ತಿಂಗಳ ಕಾಲ ನಡೆದ ಹುಡುಕಾಟದಲ್ಲಿ ಸುವರ್ಣ ತ್ರಿಭುಜ ಬೋಟು ಮೀನುಗಾರರು ಪತ್ತೆಯಾಗದಿದ್ದಾಗ, ಅದು ಸಂಚರಿಸಿದ ದಾರಿ, ದೂರ, ವೇಗ, ವೇಳೆ, ಅಕ್ಷಾಂಶ, ರೇಖಾಂಶಗಳ ವೈಜ್ಞಾನಿಕ ಲೆಕ್ಕಾಚಾರಗಳಿಂದ, ಅದು ಮಹಾರಾಷ್ಟ್ರ ಮಾಲ್ವಾನ್ ತೀರದಲ್ಲಿ ಕಾಣೆಯಾಗಿದೆ ಎಂಬ ಮಾಹಿತಿ ಸಿಕ್ಕಿತು. ಅದೇ ವೇಳೆ ಅದೇ ದಾರಿಯಲ್ಲಿ ಇನ್ನೊಂದು ಬೃಹತ್ ಹಡಗು ಸಂಚರಿಸಿದ್ದು, ಅದು ಸುವರ್ಣ ತ್ರಿಭುಜ ಬೋಟಿಗೆ ಡಿಕ್ಕಿ ಹೊಡೆದಿದೆ ಎಂಬುದು ಪತ್ತೆಯಾಯಿತು.

ಲಕ್ಷ ದಾಟುತ್ತಿದ್ದ ವಿದ್ಯುತ್ ಬಿಲ್ ಸಾವಿರಕ್ಕಿಳಿಯಿತು..! ಸಕ್ಸಸ್ ಆಯ್ತು ವೈದ್ಯ ದಂಪತಿ ಪ್ಲಾನ್

ಈ ನಡುವೆ ಆ ದಾರಿಯಲ್ಲಿ ಅದೇ ವೇಳೆಯಲ್ಲಿ ಸಾಗಿದ್ದ ಹಡಗು ಭಾರತೀಯ ನೌಕಪಡೆಯ ಐಎನ್‌ಎಸ್ ಕೊಚ್ಚಿಯ ತಳಭಾಗಕ್ಕೆ ಹಾನಿಯಾಗಿರುವುದು ಬಹಿರಂಗವಾಗಿ, ಅದು ಸುವರ್ಣ ತ್ರಿಭುಜ ಬೋಟಿಗೆ ಡಿಕ್ಕಿಯಾದಾಗ ಆದ ಹಾನಿ ಎಂದೂ ಹೇಳಲಾಯಿತು. ನೌಕಾಪಡೆಯ ಹಡಗಿನಿಂದಾಗ ಈ ಅವಘಢದ ವಿವರಗಳು, ನೌಕಪಡೆಯ ಗೌರವದ ಪ್ರಶ್ನೆಯ ನೆಪದಲ್ಲಿ ಇಂದಿಗೂ ಪೂರ್ಣವಾಗಿ ಬಹಿರಂಗವಾಗಿಲ್ಲ.

ಬೋಟು ಸಮುದ್ರದ ತಳದಲ್ಲಿದೆ:

ಆಗಿನ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರ ಮುತುವರ್ಜಿಯಿಂದ ನೌಕಾಪಡೆ ಐಎನ್‌ಎಸ್ ಕೊಚ್ಚಿ, ಐಎನ್‌ಎಸ್ ನಿರೀಕ್ಷಕ್, ಐಎನ್‌ಎಸ್ ಮಕರ, ಐಎನ್‌ಎಸ್ ಸಟ್ಲೇಜ್‌ನಂತಹ ಯುದ್ಧ ನೌಕೆಗಳನ್ನು ಬಳಸಿ, ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಮುದ್ರ ತಳದಲ್ಲಿ ಶೋಧಿಸಿದಾಗ ಮಾಲ್ವಾನ್ ತೀರದಲ್ಲಿ ಸುವರ್ಣ ತ್ರಿಭುಜವನ್ನು ಪತ್ತೆ ಮಾಡಲಾಯಿತು.

ಗಗನಕ್ಕೇರಿದ್ದ ಈರುಳ್ಳಿ ಧಾರಣೆ ಧರೆಯತ್ತ!

ಅದಾಗಲೇ ಘಟನೆ ನಡದು 4 ತಿಂಗಳು ಕಳೆದಿದ್ದವು. ಈ ಬೋಟನ್ನು ಮೇಲೆತ್ತಬೇಕು ಎಂದು ಮೀನುಗಾರರು ಆಗ್ರಹಿಸಿದರಾದರೂ, ನೌಕಾಪಡೆ ಮುಂದೆ ಕಾರ್ಯಾಚರಣೆಯನ್ನು ನಡೆಸಲಿಲ್ಲ. ಬೋಟಿನಲ್ಲಿದ್ದ ೭ ಮಂದಿ ಮೀನುಗಾರರ ಬಗ್ಗೆ ಸುಳಿವು ಸಿಕ್ಕಿಲ್ಲವಾದರೂ, ಅವರೊಂದಿಗೆ ಬೋಟು ಸಾಗರತಳದಲ್ಲಿ ಸಮಾಧಿಯಾಗಿದೆ.

ಇನ್ನಾದರೂ ರಕ್ಷಣೆ ಸಿಕ್ಕಿತೇ?:

ಸುವರ್ಣ ತ್ರಿಭುಜ ಬೋಟು ದುರಂತದ ಘಟನೆ, ಸಮುದ್ರದಲ್ಲಿ ಮೀನು ಹಿಡಿಯುವ ಮೀನುಗಾರರು ಎಂತಹ ಅಪಾಯಕ್ಕೆ ಎದೆಕೊಟ್ಟು ಮೀನು ಹಿಡಿಯುತ್ತಾರೆ, ಅವರ ಬದುಕು ಅದೆಷ್ಟು ಅನಿಶ್ಚಿತ, ಅವರ ವೃತ್ತಿ ಅದೆಷ್ಟು ಸಾಹಸಕಾರಿ ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟಿತು. ಆದರೆ ಈ ದುರಂತದ ನಂತರ ಸಮುದ್ರದಲ್ಲಿ ಮೀನುಗಾರರ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಅದಕ್ಕಾಗಿ ಸೂಕ್ತ ತಂತ್ರಜ್ಞಾನ ಅಭಿವೃದ್ಧಿಪಡಿಬೇಕು, ಬೋಟುಗಳಿಗೆ ಜಿಪಿಎಸ್ ಅಳವಡಿಸಬೇಕು, ಸ್ಯಾಟಲೈಟ್ ಮೂಲಕ ಬೋಟುಗಳ ಮೇಲೆ ನಿಗಾ ಇಡಬೇಕು ಇತ್ಯಾದಿ ಒತ್ತಾಯಗಳು ಕೇಳಿ ಬಂದವು. ಮೀನುಗಾರಿಕಾ ಇಲಾಖೆಯೂ ಈ ಬಗ್ಗೆ ಒಂದಷ್ಟು ಘೋಷಣೆಗಳನ್ನು ಮಾಡಿತು ಮತ್ತು ಮರೆತೂ ಬಿಟ್ಟಿತು.

ಈ ದುರಂತಕ್ಕೆ ಬಲಿಯಾದವರು 2+1 ಮೀನುಗಾರರು

ಉಡುಪಿ ಜಿಲ್ಲೆಯ ಬೋಟ್ ಮಾಲೀಕ ಮಲ್ಪೆಯ ಚಂದ್ರಶೇಖರ್ ಕೋಟ್ಯಾನ್ (40) ಮತ್ತು ದಾಮೋದರ (40), ಉತ್ತರಕನ್ನಡ ಜಿಲ್ಲೆಯ ಅಳ್ವೆಕೋಡಿಯ ರಮೇಶ ಮೊಗೇರ (35), ಬೆಳ್ನಿ ನಿವಾಸಿ ಹರೀಶ ಮೊಗೇರ (28), ಹೊಲನಗದ್ದೆಯ ಲಕ್ಷ್ಮಣ ಹರಿಕಂತ್ರ (45), ಮಾದನಗೇರಿ ಸತೀಶ (35) ಮತ್ತು ಮಂಕಿಯ ರವಿ (27). ಘಟನೆ ನಡೆದ ೫ ತಿಂಗಳ ನಂತರ ಮೃತ ಮೀನುಗಾರ ರಮೇಶ್ ಮೊಗೇರ ಅವರ ಸಹೋದರ ಚಂದ್ರಶೇಖರ (30) ಅವರು ಸಹೋದರನ ಅಗಲುವಿಕೆ ಸಹಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರಂತವೂ ನಡೆಯಿತು.

‘ದಿನವಿಡಿ ಕುಡಿಯುವ ನೀರು’ ಕಾಮಗಾರಿ ಶೀಘ್ರ ಆರಂಭ

ಕೇಂದ್ರದಿಂದ ಇನ್ನೂ ಚಿಕ್ಕಾಸು ಪರಿಹಾರ ಸಿಕ್ಕಿಲ್ಲ ಸಾಧಾರಣವಾಗಿ ಸಮುದ್ರದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರು. ಪರಿಹಾರ ನೀಡುತ್ತದೆಯಾದರೂ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಲಾ 11 ಲಕ್ಷ ರು. ಗಳನ್ನು ನೀಡಿದೆ. ಆದರೆ ಇದು ನೌಕಾಪಡೆಯ ಹಡಗಿನಿಂದ ಆಗಿರುವ ದುರಂತವಾದ್ದರಿಂದ ಕೇಂದ್ರ ಸರ್ಕಾರ ಪರಿಹಾರ ನೀಡುವ ಭರವಸೆ ಇತ್ತು, ಆದರೇ ಯಾವುದೇ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತ ಮೀನುಗಾರ ಕುಟುಂಬಗಳು ಬಹಳ ಕಷ್ಟದಲ್ಲಿವೆ. ಆದ್ದರಿಂದ ಡಿಸೆಂಬರ್ ಕೊನೆಯ ವಾರದಲ್ಲಿ ನವದೆಹಲಿಗೆ ನಿಯೋಗ ತೆರಳಿ ರಕ್ಷಣಾ ಸಚಿವರು, ಹಣಕಾಸು ಸಚಿವರಿಗೆ ಒತ್ತಾಯಿಸಲಾಗುವುದು ಎಂದು ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.  

click me!