ನಗರಕ್ಕೆ 15 ರಿಂದ ಅರಮನೆಯ ಸುತ್ತಾ ಏಕಮುಖ ಸಂಚಾರ

By Kannadaprabha News  |  First Published Oct 13, 2023, 10:06 AM IST

ದಸರಾ ಸಂದರ್ಭದಲ್ಲಿ ನಗರದಲ್ಲಿ ಹೆಚ್ಚಾಗುವ ವಾಹನ ಸಂಚಾರದ ಹಿನ್ನಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಹನಗಳ ಏಕಮುಖ ಸಂಚಾರ ಮತ್ತು ವಾಹನಗಳ ನಿಲುಗಡೆ ನಿರ್ಬಂಧಗಳ ಸಂಬಂಧ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅಧಿಸೂಚನೆ ಹೊರಡಿಸಿದ್ದಾರೆ.


  ಮೈಸೂರು :  ದಸರಾ ಸಂದರ್ಭದಲ್ಲಿ ನಗರದಲ್ಲಿ ಹೆಚ್ಚಾಗುವ ವಾಹನ ಸಂಚಾರದ ಹಿನ್ನಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಹನಗಳ ಏಕಮುಖ ಸಂಚಾರ ಮತ್ತು ವಾಹನಗಳ ನಿಲುಗಡೆ ನಿರ್ಬಂಧಗಳ ಸಂಬಂಧ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅಧಿಸೂಚನೆ ಹೊರಡಿಸಿದ್ದಾರೆ.

ಅ.15 ರಿಂದ 24 ರವರೆಗೆ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 11 ಗಂಟೆಯವರೆಗೆ ಮೈಸೂರು ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.

Latest Videos

undefined

ಗನ್ ಹೌಸ್- ಕುಸ್ತಿ ಅಖಾಡ ಜಂಕ್ಷನ್- ಬಿ.ಎನ್. ರಸ್ತೆ- ಹಾರ್ಡಿಂಜ್ ವೃತ್ತ- ಆಲ್ಬರ್ಟ್ ವಿಕ್ಟರ್ ರಸ್ತೆ- ಚಾಮರಾಜ ವೃತ್ತ- ಕೆ.ಆರ್. ವೃತ್ತ- ನ್ಯೂ ಸಯ್ಯಾಜಿರಾವ್ ರಸ್ತೆ- ಪಾಲಿಕೆ ವೃತ್ತ- ಬಸವೇಶ್ವರ ವೃತ್ತ- ಗನ್ ಹೌಸ್ (ಪುರಂದರ ರಸ್ತೆಯನ್ನು ಒಳಗೊಂಡಂತೆ) ಈ ರಸ್ತೆಗಳಲ್ಲಿ ಅರಮನೆಯನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹಾಗೆಯೇ, ನಗರದ ವಿವಿಧ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ, ವಾಹನಗಳ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಬಸ್ ಗಳ ಸಂಚಾರ ಮಾರ್ಗಗಳನ್ನು ಸಹ ಬದಲಿಸಲಾಗಿದ್ದು, ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ದಸರಾಗೆ  ಕೌಂಟ್ಡೌನ್ 

ಮೈಸೂರು (ಅ.9) ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕೌಂಟ್ ಡೌನ್ ಶುರು ಹಿನ್ನೆಲೆ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಇಂದು ಮರದ ಅಂಬಾರಿ ತಾಲೀಮು ನಡೆಯಿತು.

ಶುಭ ಸೂಚನೆಯಂತೆ ಸುರಿದ ಮಳೆಯಲ್ಲೆ ನಡೆದ ಆನೆಗಳ ತಾಲೀಮು. ಎಡಬಿಡದೆ ಸುರಿಯುತ್ತಿರುವ ಮಳೆ. ಮಳೆಯಲ್ಲೂ ಗಜಪಡೆಗೆ ಮರದ ಅಂಬಾರಿ ಕಟ್ಟಿದ ಸಿಬ್ಬಂದಿ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಮೈಸೂರಿನ ಅರಮನೆ ಆವರಣ. ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ‌ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಗಜಪಯಣ ಮೂಲಕ ಕಾಡಿನಿಂದ ನಾಡಿಗೆ ಬಂದಿರುವ ದಸಾರ ಗಜಪಡೆಗಳು ಕಳೆದ ಒಂದುವರೆ ತಿಂಗಳಿನಿಂದ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದು ಜಂಬೂ ಸವಾರಿಗೆ ಭರ್ಜರಿ ತಾಲೀಮು ನಡೆಸಲಾಗುತ್ತಿವೆ. 

ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ವಂಚನೆ

ಈಗಾಗಲೇ ದಸರಾ ಗಜಪಡೆಗಳಿಗೆ ಮರಳು ಮೂಟೆ ತಾಲೀಮು ನೀಡಲಾಗಿದೆ. ಮರಳು ಮೂಟೆ ತಾಲೀಮು ಯಶಸ್ವಿಯಾಗಿ ಮುಗಿಸಿರುವ ಹಿನ್ನೆಲೆ ಇಂದಿನಿಂದ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ತಾಲೀಮು ಆರಂಭಿಸಲಾಗಿದೆ. ಮರದ ಅಂಬಾರಿ ಕಟ್ಟು ಮುನ್ನ ಸುರಿಯುವ ಮಳೆಯಲ್ಲೇ ದಸರಾ ಗಜಪಡೆಗಳಿಗೆ ಸಂಪ್ರದಾಯಕವಾಗಿ ಪೂಜೆ ಸಲ್ಲಿಸಲಾಯಿತು.  ರಾಜಮನೆತನದವರ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಅಭಿಮನ್ಯುವಿನ ಮೇಲೆ ಮರಳು ಮೂಟೆ ಮತ್ತು ಮರದ ಅಂಬಾರಿ ಇರಿಸಲಾಯಿತು. 

ಮೊದಲ ದಿನವಾದ ಇಂದು ಮಳೆ ನಡುವೆಯೂ ಅಂಬಾರಿ ಆನೆ ಅಭಿಮನ್ಯು 280 ಕೆ.ಜಿ. ತೂಕದ ಮರದ ಅಂಬಾರಿ, 400 ಕೆ.ಜಿ. ಮರಳಿನ ಮೂಟೆ ಸೇರಿದಂತೆ ಒಟ್ಟು 750 ಕೆಜಿಗೂ ಅಧಿಕ ಭಾರ ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಶಸ್ವಿಯಾಗಿ ಹೆಜ್ಜೆ ಹಾಕಿದೆ. ಅಭಿಮನ್ಯು ಮರದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಮುಂದೆ ನಡೆದರೆ, ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮೀ, ವಿಜಯಾ ಸಾಥ್ ನೀಡಿತ್ತು. 

ಎಡಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ರಾಜಪಥದಲ್ಲಿ ನಿಂತು ನೂರಾರು ಜನರು ಆನೆಗಳ ತಾಲೀಮನ್ನು ಕಣ್ತುಂಬಿಕೊಂಡರು.  ಅಭಿಮನ್ಯು ಬಳಿಕ ಮಹೇಂದ್ರ, ಧನಂಜಯ ಆನೆಗಳೂ ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸಲಿವೆ.

ಅ.16 ರಿಂದ 22 ರವರೆಗೆ ದಸರಾ ಚಲನಚಿತ್ರೋತ್ಸವ

ಒಟ್ಟಾರೆ ಅರಮನೆಯಿಂದ ಬನ್ನಿಮಂಟಪದವರೆಗೆ ಕೇವಲ 1 ಗಂಟೆ 10 ನಿಮಿಷದಲ್ಲಿ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ಎಲ್ಲರನ್ನೂ ಬೆರಗುಗೊಳಿಸಿದ. ಈ ಮೂಲಕ ಪ್ರಸಕ್ತ ವರ್ಷವೂ ಅಂಬಾರಿ ಹೊರಲು ತಾನು ಸಮರ್ಥನಿದ್ದೇನೆ ಎಂಬ ಸಂದೇಶ ನೀಡಿದೆ.

click me!