ನಾಡಹಬ್ಬ ದಸರಾ ಜಂಬೂಸವಾರಿ ಸಿದ್ಧವಾಗುತ್ತಿರುವ ಗಜಪಡೆಯ ಸದಸ್ಯ ಧನಂಜಯ ಆನೆಗೆ ಗುರುವಾರ ಬೆಳಗ್ಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು.
ಮೈಸೂರು : ನಾಡಹಬ್ಬ ದಸರಾ ಜಂಬೂಸವಾರಿ ಸಿದ್ಧವಾಗುತ್ತಿರುವ ಗಜಪಡೆಯ ಸದಸ್ಯ ಧನಂಜಯ ಆನೆಗೆ ಗುರುವಾರ ಬೆಳಗ್ಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು.
ಧನಂಜಯ ಆನೆ ಮೈಮೇಲೆ ಗಾದಿ, ನಮ್ದಾ ಕಟ್ಟಿ ಅದರ ಮೇಲೆ ಮರದ ಅಂಬಾರಿ ಹೊರಿಸಲಾಯಿತು. ಅಲ್ಲದೆ, ಮರದ ಅಂಬಾರಿ ಒಳಗೆ ಮರಳು ಮೂಟೆಗಳನ್ನು ಇರಿಸಲಾಯಿತು. ಎಲ್ಲಾ ಸೇರಿದಂತೆ ಸುಮಾರು 1000 ಕೆ.ಜಿ ಬಾರವನ್ನು ಹೊತ್ತು ಧನಂಜಯ ಆನೆಯು ರಾಜಮಾರ್ಗದಲ್ಲಿ ಗಜಗಾಂಭೀರ್ಯ ಹೆಜ್ಜೆ ಹಾಕಿತು.
undefined
ಮರದ ಅಂಬಾರಿ ಹೊತ್ತು ಸಾಗಿದ ಧನಂಜಯ ಆನೆಯೊಂದಿಗೆ ಕುಮ್ಕಿ ಆನೆಗಳಾಗಿ ವರಲಕ್ಷ್ಮಿ ಮತ್ತು ವಿಜಯ ಸಾಗಿದವು. ಇವುಗಳೊಂದಿಗೆ ಅಭಿಮನ್ಯು, ಅರ್ಜುನ, ಮಹೇಂದ್ರ, ಭೀಮ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ ಮತ್ತು ಲಕ್ಷ್ಮಿ ಸಾಲಾನೆಗಳಾಗಿ ಸಾಗಿದವು.
ಬುಧವಾರ ಕುಶಾಲತೋಪು ಸಿಡಿಸಿ ಶಬ್ದ ಪರಿಚಯಿಸುವ ತಾಲೀಮು ವೇಳೆ ಗಲಿಬಿಲಿಗೊಂಡಿದ್ದ ರೋಹಿತ್ ಮತ್ತು ಹಿರಣ್ಯಾ ಆನೆ ಗುರುವಾರ ತಾಲೀಮಿನಲ್ಲಿ ಭಾಗವಹಿಸರಲಿಲ್ಲ. ಈ ಎರಡೂ ಆನೆಗಳಿಗೆ ಅರಮನೆ ಆವರಣದ ಬಿಡಾರದಲ್ಲೇ ವಿಶ್ರಾಂತಿ ಪಡೆಯುತ್ತಿದ್ದವು.
ಮೈಸೂರು ಅರಮನೆ ಆವರಣದಿಂದ ಹೊರಟ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪಕ್ಕೆ ತಲುಪಿದವು. ನಂತರ ಅದೇ ಮಾರ್ಗವಾಗಿ ಅರಮನೆಗೆ ಹಿಂದಿರುಗಿದವು.
ಈ ವೇಳೆ ಡಿಸಿಎಫ್ ಸೌರಭಕುಮಾರ್, ಪಶುವೈದ್ಯ ಡಾ. ಮುಜೀಬ್ ಉರ್ ರೆಹಮಾನ್, ಅರಮನೆ ಎಸಿಪಿ ಚಂದ್ರಶೇಖರ್ ಮೊದಲಾದವರು ಇದ್ದರು.
ಸಂಜೆ ನಡಿಗೆ ತಾಲೀಮು
ಇನ್ನೂ ಗುರುವಾರ ಸಂಜೆ ಸಹ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ನಡಿಗೆ ತಾಲೀಮು ನಡೆಯಿತು. ಅರಮನೆ ಆವರಣದಿಂದ ಹೊರಟ ಗಜಪಡೆಯು ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತಕ್ಕೆ ತಲುಪಿ ಅಲ್ಲಿಂದ ವಾಪಸ್ ಅರಮನೆಗೆ ಬಂದವು.
ಅಭಿಮನ್ಯು ಜೊತೆಗೆ ಅರ್ಜುನ, ಮಹೇಂದ್ರ, ಧನಂಜಯ, ಭೀಮ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ, ವರಲಕ್ಷ್ಮಿ, ವಿಜಯ ಮತ್ತು ಲಕ್ಷ್ಮಿ ಆನೆ ನಡಿಗೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ರೋಹಿತ್ ಮತ್ತು ಹಿರಣ್ಯಾ ಗೈರಾಗಿದ್ದವು.
ಅಂಬಾರಿ ಹೊತ್ತು ಆನೆಗಳ ತಾಲೀಮು
ಮೈಸೂರು (ಅ.9) ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕೌಂಟ್ ಡೌನ್ ಶುರು ಹಿನ್ನೆಲೆ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಇಂದು ಮರದ ಅಂಬಾರಿ ತಾಲೀಮು ನಡೆಯಿತು.
ಶುಭ ಸೂಚನೆಯಂತೆ ಸುರಿದ ಮಳೆಯಲ್ಲೆ ನಡೆದ ಆನೆಗಳ ತಾಲೀಮು. ಎಡಬಿಡದೆ ಸುರಿಯುತ್ತಿರುವ ಮಳೆ. ಮಳೆಯಲ್ಲೂ ಗಜಪಡೆಗೆ ಮರದ ಅಂಬಾರಿ ಕಟ್ಟಿದ ಸಿಬ್ಬಂದಿ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಮೈಸೂರಿನ ಅರಮನೆ ಆವರಣ. ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಗಜಪಯಣ ಮೂಲಕ ಕಾಡಿನಿಂದ ನಾಡಿಗೆ ಬಂದಿರುವ ದಸಾರ ಗಜಪಡೆಗಳು ಕಳೆದ ಒಂದುವರೆ ತಿಂಗಳಿನಿಂದ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದು ಜಂಬೂ ಸವಾರಿಗೆ ಭರ್ಜರಿ ತಾಲೀಮು ನಡೆಸಲಾಗುತ್ತಿವೆ.
ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ವಂಚನೆ
ಈಗಾಗಲೇ ದಸರಾ ಗಜಪಡೆಗಳಿಗೆ ಮರಳು ಮೂಟೆ ತಾಲೀಮು ನೀಡಲಾಗಿದೆ. ಮರಳು ಮೂಟೆ ತಾಲೀಮು ಯಶಸ್ವಿಯಾಗಿ ಮುಗಿಸಿರುವ ಹಿನ್ನೆಲೆ ಇಂದಿನಿಂದ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ತಾಲೀಮು ಆರಂಭಿಸಲಾಗಿದೆ. ಮರದ ಅಂಬಾರಿ ಕಟ್ಟು ಮುನ್ನ ಸುರಿಯುವ ಮಳೆಯಲ್ಲೇ ದಸರಾ ಗಜಪಡೆಗಳಿಗೆ ಸಂಪ್ರದಾಯಕವಾಗಿ ಪೂಜೆ ಸಲ್ಲಿಸಲಾಯಿತು. ರಾಜಮನೆತನದವರ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಅಭಿಮನ್ಯುವಿನ ಮೇಲೆ ಮರಳು ಮೂಟೆ ಮತ್ತು ಮರದ ಅಂಬಾರಿ ಇರಿಸಲಾಯಿತು.
ಮೊದಲ ದಿನವಾದ ಇಂದು ಮಳೆ ನಡುವೆಯೂ ಅಂಬಾರಿ ಆನೆ ಅಭಿಮನ್ಯು 280 ಕೆ.ಜಿ. ತೂಕದ ಮರದ ಅಂಬಾರಿ, 400 ಕೆ.ಜಿ. ಮರಳಿನ ಮೂಟೆ ಸೇರಿದಂತೆ ಒಟ್ಟು 750 ಕೆಜಿಗೂ ಅಧಿಕ ಭಾರ ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಶಸ್ವಿಯಾಗಿ ಹೆಜ್ಜೆ ಹಾಕಿದೆ. ಅಭಿಮನ್ಯು ಮರದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಮುಂದೆ ನಡೆದರೆ, ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮೀ, ವಿಜಯಾ ಸಾಥ್ ನೀಡಿತ್ತು.
ಎಡಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ರಾಜಪಥದಲ್ಲಿ ನಿಂತು ನೂರಾರು ಜನರು ಆನೆಗಳ ತಾಲೀಮನ್ನು ಕಣ್ತುಂಬಿಕೊಂಡರು. ಅಭಿಮನ್ಯು ಬಳಿಕ ಮಹೇಂದ್ರ, ಧನಂಜಯ ಆನೆಗಳೂ ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸಲಿವೆ.