* ಸಿದ್ರಾಮಯ್ಯ ಭೇಟಿ ವೇಳೆಯೇ ಭೂಕಂಪನ
* ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಮತ್ತೆ ಕಂಪನ
* ಕೂಡಲೇ ಕಂದಾಯ ಸಚಿವರ ಜೊತೆ ಸಿದ್ದರಾಮಯ್ಯ ಮಾತುಕತೆ
ಕಲಬುರಗಿ, (ಅ.12): ಕಳೆದ ಮೂರ್ನಾಲ್ಕು ದಿನಗಳಿಂದ ಕಲಬುರಗಿ (Kalaburagi) ಜಿಲ್ಲೆಯ ಹಲವೆಡೆ ಸತತವಾಗಿ ಭೂಕಂಪದ (Earthquak) ಅನುಭವ ಆಗುತ್ತಿದೆ. ಇದೀಗ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯನವರಿಗೂ ಭೂಕಂಪದ ಅನುಭವ ಆಗಿದೆ.
ಹೌದು...ಇಂದು (ಆ.12) ಜಿಲ್ಲೆಯ ಕಾಳಗಿ ತಾಲೂಕಿನ ಗಡಿಕೇಶ್ವರಕ್ಕೆ ಕಾಂಗ್ರೆಸ್ (Congress) ನಾಯಕ ಸಿದ್ದರಾಮಯ್ಯ (siddaramaiah) ಮತ್ತು ಶಾಸಕ ಡಾ ಅಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದರು. ಭೂಕಂಪನಕ್ಕೆ ಹೆದರಿ ಊರು ತೊರೆಯಲು ಸಿದ್ದರಾಗಿರುವ ಗಡಿಕೇಶ್ವರ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲು ಬಂದಾಗ ಈ ಅನುಭವ ಆಗಿದೆ. ಡಾ. ಶರಣಪ್ರಕಾಶ ಪಾಟೀಲ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯಿಂದ ಕೇಳಿ ಬಂದ ಭಾರಿ ಶಬ್ದ ಕೇಳಿ ಬಂದಿತು. ಶಬ್ದ ಗ್ರಹಿಸಿ ಇದು ಭೂಕಂಪನ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Earthquake| ಸತತ ಕಂಪನ, ಬೆಚ್ಚಿದ ಉತ್ತರ ಕರ್ನಾಟಕ: 7 ದಿನದಲ್ಲಿ 10 ಬಾರಿ ಭೂಕಂಪನ!
ಜಿಲ್ಲಾಧಿಕಾರಿಗೆ ಸಿದ್ದು ಕ್ಲಾಸ್
ಕಳೆದೊಂದು ವಾರದಿಂದ ಇಲ್ಲಿನ ಜನರು ಭೀತಿಯಲ್ಲಿ ಬದುಕುತ್ತಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳಿಗೆ ಗಮನವಿಲ್ಲ. ಆದರೆ, ಇಂದು ನಾನು ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂದು ಡಿಸಿ ಭೇಟಿ ನೀಡಿದ್ದಾರೆ. ಡಿಸಿ ಅಂದ್ರೆ ಏನು? ಜಿಲ್ಲೆಗೆ ದಂಡಾಧಿಕಾರಿ! ನಿಂತಲ್ಲೆ ಆದೇಶ ಮಾಡಿ ಪುನರ್ವಸತಿ ಕಾರ್ಯಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಅವರು ಸಮ್ಮನೆ ಬಂದು ಹೋಗಿದ್ದಾರೆ ಎಂದು ಜಿಲ್ಲಾಧಿಕಾರಿ ಜೋತ್ಸ್ನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಸಚಿವ ಅಶೋಕ್‌ಗೆ ಫೋನ್
ಭೂಕಂಪನ ಅನುಭವ ಆದ ಬಳಿಕ ಕೂಡಲೇ ಸಿದ್ದರಾಮಯ್ಯ ಅವರು ಕಂದಾಯ ಸಚಿವ ಆರ್. ಅಶೋಕ್‌ಗೆ ಫೋನ್ ಮಾಡಿದ್ದಾರೆ. ಗಡಿಕೇಶ್ವರ ಗ್ರಾಮದಲ್ಲಿ ಜನರು ಭಯಭೀತಿಗೊಳಗಾಗಿದ್ದಾರೆ. ಕೂಡಲೇ ಗ್ರಾಮದಲ್ಲಿ ಪುನರವಸತಿ ಕೇಂದ್ರ ಪ್ರಾರಂಭಿಸಿ. ಜನರಿಗೆ ಟೀನ್ ಶೆಡ್, ಬೆಡ್ ಸೀಟ್ ಕೊಡಲು ಹೇಳಿ. ಜಿಲ್ಲಾಧಿಕಾರಿ ಗೆ ಸೂಚನೆ ನೀಡಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಿ ಎಂದು ಅಶೋಕ್ ಹೇಳಿದ್ದಾರೆ.