ಶಾರುಖ್ ಖಾನ್ ಪುತ್ರನ ಬಗ್ಗೆ ಸಿದ್ದು ಪುತ್ರನ ಸಾಫ್ಟ್ ಕಾರ್ನರ್.. ಕಾನೂನು ಎಲ್ಲರಿಗೂ ಒಂದೆ ಅಲ್ವಾ?

Published : Oct 12, 2021, 05:16 PM ISTUpdated : Oct 12, 2021, 05:18 PM IST
ಶಾರುಖ್ ಖಾನ್ ಪುತ್ರನ ಬಗ್ಗೆ ಸಿದ್ದು ಪುತ್ರನ ಸಾಫ್ಟ್ ಕಾರ್ನರ್.. ಕಾನೂನು ಎಲ್ಲರಿಗೂ ಒಂದೆ ಅಲ್ವಾ?

ಸಾರಾಂಶ

* ಶಾರುಖ್ ಖಾನ್ ಪುತ್ರನ‌ ಬಗ್ಗೆ ಡಾ. ಯತೀಂದ್ರ ಸಾಫ್ಟ್ ಕಾರ್ನರ್.! * ಶಾರುಖ್ ಮಗನ ಬಳಿ ಮಾದಕ ದ್ರವ್ಯ ಸಿಕ್ಕಿಲ್ಲ * ಸೇವನೆ ಮಾಡಿರುವ ಆಧಾರ ಕೂಡಾ ಇಲ್ಲ, ಆದ್ರೂ ಅವರನ್ನು ಕಸ್ಟಡಿಗೆ ನೀಡಲಾಗಿದೆ * ಕಾನೂನು ವ್ಯವಸ್ಥೆ ಅಧಿಕಾರದಲ್ಲಿರೋರಿಗೆ ಒಂದು ಸರ್ಕಾರದ ವಿರೋಧಿಗಳಿಗೆ ಒಂದು!

ಕೊಡಗು(ಅ. 12)  ಮುಂಬೈ ಸಮುದ್ರ ತೀರದ ಡ್ರಗ್ಸ್ (Drugs) ಪ್ರಕರಣದಲ್ಲಿ ಬಾಲಿವುಡ್ ನಾಯಕ ಶಾರುಖ್ ಖಾನ್ ಪುತ್ರನನ್ನು ಎನ್‌ಸಿಬಿ ಬಂಧಿಸಿದ್ದು ಆತನಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.  ಶಾರುಖ್ ಪುತ್ರನ(Shah Rukh Khan) ಬಂಧನದ ಬಗ್ಗೆ ನಟಿ ರಮ್ಯಾ(Ramya) ಅನುಮಾನ ವ್ಯಕ್ತಪಡಿಸಿದ್ದರು. ಈಗ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸರದಿ.

ಶಾರುಖ್ ಖಾನ್ ಪುತ್ರನ‌ ಬಗ್ಗೆ ಡಾ. ಯತೀಂದ್ರ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ ಶಾರುಖ್ ಮಗನ ಬಳಿ ಮಾದಕ ದ್ರವ್ಯ ಸಿಕ್ಕಿಲ್ಲ. ಸೇವನೆ ಮಾಡಿರುವ ಆಧಾರ ಕೂಡಾ ಇಲ್ಲ. ಆದ್ರೂ ಅವರನ್ನು ಕಸ್ಟಡಿಗೆ ನೀಡಲಾಗಿದೆ. ಕಾನೂನು ವ್ಯವಸ್ಥೆ ಅಧಿಕಾರದಲ್ಲಿರೋರಿಗೆ ಒಂದು.. ಸರ್ಕಾರದ ವಿರೋಧಿಗಳಿಗೆ ಒಂದು ರೀತಿ! ಎಂದು ಹೇಳಿದ್ದಾರೆ.

ಮಡಿಕೇರಿಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಯುವ ಘಟಕ ಪದಾಧಿಕಾರಿಗಳ ಪದಗ್ರಹಣ  ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ರೈತರ ಮೇಲೆ‌ ಜೀಪ್ ಹರಿಸಿದವರನ್ನು ಬಂಧಿಸೋಕೆ ಐದು ದಿನ ಆಯ್ತು.. ಕಾಂಗ್ರೆಸ್ ಪ್ರತಿಭಟನೆ ಬಳಿಕ ಅರೆಸ್ಟ್ ಮಾಡಲಾಯಿತು ಎಂದು ತಾಳೆ ಹಾಕಿದ್ದಾರೆ.

ಎನ್‌ಸಿಬಿ ಮೇಲೆಯೇ ಶುರುವಾಯ್ತು ಪತ್ತೆದಾರಿಕೆ

ಇನ್ನೊಂದು ಕಡೆ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಫ್ತಿ(Mehabooba Mufti) ಬಾಲಿವುಡ್(Bollywood) ನಟ ಶಾರೂಖ್ ಖಾನ್(Shah Rukh Khan) ಮಗ ಆರ್ಯನ್ ಖಾನ್(Aryan Khan) ಬೆಂಬಲಕ್ಕೆ ನಿಂತಿದ್ದಾರೆ.  ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಆರ್ಯನ್ ಖಾನ್ ಜೈಲಿನಲ್ಲಿದ್ದು ಸ್ಟಾರ್ ಕಿಡ್ ಪರವಾಗಿ ಮೆಹಬೂಬ ಅವರ ಟ್ವೀಟ್ ಮಾಡಿದ್ದಾರೆ. ತನ್ನ ಸರ್ ನೇಮ್ ಖಾನ್‌ನಿಂದಾಗಿ ಆರ್ಯನ್ ತನಿಖಾ ಸಂಸ್ಥೆಗಳಿಂದ ಟಾರ್ಗೆಟ್ ಆಗುತ್ತಿದ್ದಾನೆ ಎಂದು ಅವರು ಟ್ವೀಟ್(Tweet) ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಭಿನ್ನ  ಭಿನ್ನ ಅಭಿಪ್ರಾಯಗಳು ಹರಿದು ಬಂದಿವೆ.  ಶಾರುಖ್ ಖಾನ್ ಕಾಣಿಸಿಕೊಂಡಿದ್ದ ಜಾಹೀರಾತು ಸಹ ಚರ್ಚೆಗೆ ವೇದಿಕೆ ಮಾಡಿಕೊಟ್ಟಿತ್ತು. 

PREV
click me!

Recommended Stories

ಮೈಸೂರಲ್ಲಿ ಹೆಚ್ಚಾಯ್ತು ಕ್ರಿಮಿನಲ್‌ಗಳ ಉಪಟಳ: ಹಾಡಹಗಲೇ ಗನ್‌ ತೋರಿಸಿ 4 ಕೆಜಿ ಚಿನ್ನ ಲೂಟಿ!
ಜಲಮಂಡಳಿ ನೀರಿನ ಬಿಲ್ ಬಾಕಿದಾರರಿಗೆ 'ಬಂಪರ್ ಆಫರ್': ಅಸಲು ಪಾವತಿಸಿದರೆ ಶೇ.100 ರಷ್ಟು ಬಡ್ಡಿ ಮನ್ನಾ!