ಹೊಸಕೋಟೆ (ಆ.04): ಕೊರೋನಾ ಪ್ರಥಮ ಹಾಗೂ ದ್ವಿತೀಯ ಅಲೆಯಲ್ಲಿ ಆದ ಸಾವು ನೋವುಗಳಿಗೆ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಶರತ್ ಬಚ್ಚೇಗೌಡ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಇಲ್ಲಿನ ಜಡಗೇನಹಳ್ಳಿ ಹೋಬಳಿ ಹರಳೂರು ಗ್ರಾಮದಲ್ಲಿ ಬಡವರಿಗೆ ಕಾರ್ಮಿಕ ಇಲಾಖೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
undefined
ಪ್ರಪಂಚದ ಇತರೆ ದೇಶಗಳು ಕೊರೋನಾ ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ವೈದ್ಯಕೀಯ ಪರಿಕರಣಗಳ ವ್ಯವಸ್ಥೆ ಮಾಡಿಕೊಂಡು ಯಶಸ್ವಿಯಾಗು ನಿರ್ವಹಣೆ ಮಾಡಿಕೊಮಡವು. ಅದರೆ ನಮ್ಮ ದೇಶದಲ್ಲಿ ಸರ್ಕಾರ ಸೋಂಕು ಹೆಚ್ಚಾದ ಮೇಲೆ ಲಾಕ್ ಡೌನ್ ಮಾಡಿ ಜನರ ಜೀವನದಲ್ಲಿ ಆಟ ಆಡಿತು ಎಂದರು.
ಸಚಿವ ಎಂಟಿಬಿ - ಶರತ್ ಬಚ್ಚೇಗೌಡ ವಾರ್ : 'ದರ್ಪದಿಂದ ಏನು ಆಗಲ್ಲ'
ಶರತ್ ಭವಿಷ್ಯದಲ್ಲಿ ಸಿಎಂ : ಕಳೆದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಶಾಸಕ ಶರತ್ ಬಚ್ಚೇಗೌಡ ಅವರ ಉತ್ತಮ ವಾಗ್ಮಿಗಳಾಗಿದ್ದು ಹಿರಿಯ ಕಿರಿಯರನ್ನು ಗೌರವಿಸುವ ಮೂಲಕ ಸದ್ಗುಣಿಯಾಗಿದ್ದಾರೆ.
ಪ್ರಸ್ತುತ ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌ನ ಹಿರಿಯ ನಾಯಕರ ಜೊತೆಯೂ ಉತ್ತಮ ಭಾಂದವ್ಯ ಹೊಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲಿದ್ದು ಗೆಲುವು ಶತಸಿದ್ಧ. ಶರತ್ ಬಚ್ಚೇಗೌಡರು ಭವಿಷ್ಯದಲ್ಲಿ ಸಿಎಂ ಕೂಡ ಆಗುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚೀಮಂಡಹಳ್ಲಿ ಮುನಿಶಾಮಣ್ಣ ಭವಿಷ್ಯ ನುಡಿದರು.