ಖಾನಾಪುರ: ಸಾಲಬಾಧೆಗೆ ರೈತ ಆತ್ಮಹತ್ಯೆ

Kannadaprabha News   | Asianet News
Published : Aug 04, 2021, 03:35 PM IST
ಖಾನಾಪುರ: ಸಾಲಬಾಧೆಗೆ ರೈತ ಆತ್ಮಹತ್ಯೆ

ಸಾರಾಂಶ

* ಬೆಳಗಾವಿ ಜಿಲ್ಲೆಯ ತಾಲೂಕಿನ ಜುಂಜವಾಡ ಕೆಜಿ ಗ್ರಾಮದಲ್ಲಿ ನಡೆದ ಘಟನೆ * ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ 5.25 ಲಕ್ಷ ಸಾಲ ಪಡೆದಿದ್ದ ರೈತ * ಈ ಸಂಬಂಧ ನಂದಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಖಾನಾಪುರ(ಆ.04): ಸಾಲಬಾಧೆಯಿಂದಾಗಿ ರೈತರೊಬ್ಬರು ಮನನೊಂದು ನೇಣಿಗೆ ಶರಣಾದ ಘಟನೆ ತಾಲೂಕಿನ ಬೀಡಿ ಹೋಬಳಿಯ ಜುಂಜವಾಡ ಕೆಜಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಗ್ರಾಮದ ಮನೋಹರ ಲಕ್ಷ್ಮಣ ಬೀಡಿಕರ (62) ಮೃತ ರೈತ. 4.10 ಎಕರೆ ಜಮೀನು ಹೊಂದಿದ್ದ ಮನೋಹರ ಜಮೀನಿನಲ್ಲಿ ಭತ್ತ ಮತ್ತು ಕಬ್ಬು ಬೆಳೆದಿದ್ದಾರೆ. ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಸಲುವಾಗಿ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ಒಟ್ಟು 5.25 ಲಕ್ಷ ಸಾಲ ಪಡೆದಿದ್ದರು. 

ಹೊಟ್ಟೆನೋವು ತಾಳಲಾರದೆ ಸೊರಬದ ವಿದ್ಯಾರ್ಥಿನಿ ಸುಸೈಡ್

ಆದರೆ ಎರಡ್ಮೂರು ವರ್ಷಗಳ ಕಾಲ ಸತತ ಅತಿವೃಷ್ಟಿಯಿಂದಾಗಿ ಜಮೀನಿನಲ್ಲಿ ನಿರೀಕ್ಷಿತ ಫಸಲು ಸಿಗದೇ ಪಡೆದ ಸಾಲ ಮರುಪಾವತಿಸುವ ಸಲುವಾಗಿ ಚಿಂತಿತರಾಗಿದ್ದರು. ಮೃತರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ಈ ಕುರಿತು ನಂದಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ