ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿಯಾಗ್ತಾರೆ: ವಿನಯ್ ಗುರೂಜಿ

By Girish Goudar  |  First Published Feb 2, 2024, 9:10 PM IST

ತಮಿಳುನಾಡಿನಲ್ಲಿ ಒಂದು ದಿನ ಅಣ್ಣಾಮಲೈ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನಾನೂ ನೋಡುತ್ತೇನೆ. ನೀವು ನೋಡುತ್ತೀರಿ. ಇದನ್ನು ಭವಿಷ್ಯ ಎನ್ನುವುದಕ್ಕಿಂತ ಸಮ್ಯ ಜ್ಞಾನ ಎಂದು ಹೇಳೋಣ ಎಂದ ಅವದೂತ ವಿನಯ್ ಗುರೂಜಿ 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.02):  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿ ಗದ್ದೆ ದತ್ತಾಶ್ರಮದ ಅವದೂತ ವಿನಯ್ ಗುರೂಜಿ ತಮಿಳುನಾಡಿನ ರಾಜಕೀಯ ಭವಿಷ್ಯವನ್ನು ಹೇಳಿದ್ದಾರೆ. ಇಂದು(ಶುಕ್ರವಾರ) ಚಿಕ್ಕಮಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ತಮಿಳುನಾಡಿನಲ್ಲಿ ಒಂದು ದಿನ ಅಣ್ಣಾಮಲೈ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನಾನೂ ನೋಡುತ್ತೇನೆ. ನೀವು ನೋಡುತ್ತೀರಿ. ಇದನ್ನು ಭವಿಷ್ಯ ಎನ್ನುವುದಕ್ಕಿಂತ ಸಮ್ಯ ಜ್ಞಾನ ಎಂದು ಹೇಳೋಣ ಎಂದರು. 

Tap to resize

Latest Videos

undefined

ಖಾಕಿ ತೊರೆದು ಖಾದಿ ತೊಡುತ್ತಾರೆ ಎಂದು ಹೇಳಿದ್ದೆ: 

ಅಣ್ಣಾಮಲೈ ಚಿಕ್ಕಮಗಳೂರು ಎಸ್ಪಿ ಆಗಿ ಬಂದಿದ್ದಾಗಲೇ ಕೊಪ್ಪಾದ ಬೊಮ್ಲಾಪುರಕ್ಕೆ ಬಂದಿದ್ದಾಗಲೇ ಅವರಿಗೊಂದು ಸೇಬು ಹಣ್ಣು ನೀಡಿ ಇನ್ನು ಅವರು ಖಾಕಿ ತೊರೆದು ಖಾದಿ ತೊಡುತ್ತಾರೆ ಎಂದು ಹೇಳಿದ್ದೆ ಎಂದರು.ಜ್ಞಾನ ಚಕ್ಷುವಿನಲ್ಲಿ ಯಾರೇ ಆದರೂ ಧ್ಯಾನ ಮಾಡಿದಾಗ ಅವನಿಗೆ ಕಾಲದ ಒಂದಷ್ಟು ಘಟನೆಗಳನ್ನು ತಿಳಿದುಕೊಳ್ಳಲು ಆಗುತ್ತದೆ. ಅದು ನನಗಷ್ಟೇ ಅಲ್ಲ. ಸಣ್ಣ ಮಗುವಿಗೂ ಅದು ಸಾಧ್ಯತೆ ಇರುತ್ತದೆ. ಪತ್ರಕರ್ತರು, ಆಡಳಿತ ಕ್ಷೇತ್ರದಲ್ಲಿರುವವರು ದಯಮಾಡಿ ಪ್ರಜಾಪ್ರಭುತ್ವಕ್ಕೆ ಬರುವ ಪ್ರಯತ್ನ ಮಾಡಬೇಕು. ಅವರೆಲ್ಲಾ ವಿಧಾನ ಸೌಧದೊಳಗಿದ್ದು ಕೆಲಸ ಮಾಡಿದಾಗ ಸಾಮಾನ್ಯ ಜನರಿಗೆ ಸಹಾಯವಾಗಲಿದೆ ಎಂದರು.

ಬ್ಲಾಕ್‌ಮೇಲ್ ಅಲ್ಲದೇ ಮತ್ತೇನು, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

ಸದ್ಯದಲ್ಲೇ ಮೋದಿ ಪಟ್ಟಾಭಿಷೇಕ : 

ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ನೋಡಿ ಆಗಿದೆ. ಸದ್ಯದಲ್ಲಿ ನರೇಂದ್ರ ಮೋದಿಯವರ ಪಟ್ಟಾಭಿಷೇಕವನ್ನು ನಾವೆಲ್ಲರೂ ನೋಡುತ್ತೇವೆ ಎಂದರು. ಕಳೆದ ಬಾರಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಮೋದಿ ಅವರಿಗೆ ವಿನಯ್ ಗುರೂಜಿ ಅವರು ರಾಮನ ಧನಸ್ಸುಯನ್ನು ಉಡುಗೂರೆಯಾಗಿ ನೀಡಿದ್ದರು.  

ಡಿ.ಕೆ. ಸುರೇಶ್ ಹೇಳಿಕೆಗೆ ಕಿಡಿ : 

ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ. ಮಹಮದ್ ಜಿನ್ನಾ ಈ ತಪ್ಪು ಮಾಡಿದ್ದರು. ಗಾಂಧೀಜಿ  ಅದನ್ನ ಬರೆದಿಡುತ್ತಾರೆ. ನೆಹರೂ-ಜಿನ್ನಾ ಇಬ್ಬರನ್ನೂ ಕೂರಿಸಿಕೊಂಡು ಮಹಾತ್ಮ ಗಾಂಧಿ, ನಾನಿರುವವರೆಗೂ ನನ್ನನ್ನ ಭಾಗ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೆ, ಆವತ್ತು ಗಾಂಧಿ ಮಾತನ್ನ ಯಾರೂ ಕೇಳಲಿಲ್ಲ. ಗಾಂಧೀಜಿ ಅಂದೇ ಹೇಳಿದ್ದರು,ಇಂದಿನ ಹಿಂದೂ-ಮಸ್ಲಿಂ ಗಲಾಟೆ, ಹಳ್ಳಿ-ಹಳ್ಳಿಯಲ್ಲೂ ಪ್ರತಿಬಿಂಬಿಸುತ್ತೆ ಅಂತ ಹೇಳಿದ್ರು. ಇವತ್ತು ದೇಶದಲ್ಲಿ ಆಗ್ತಿರೋದು ಅದೇ ಎಂದು ಆತಂಕ ಹೊರಹಾಕಿದ್ದಾರೆ. 

ದೇಶದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲೋದು ಕಷ್ಟ: ಸಿ.ಟಿ.ರವಿ

ನಮ್ಮ ಅಧಿಕಾರದ ಆಸೆಗೆ ಜಾತಿ-ಧರ್ಮವನ್ನ ಬದಿಗಿಡಬೇಕು. ನಿಮ್ಮ ರಾಜಕೀಯವನ್ನ ಕೆಲಸ-ಟ್ಯಾಲೆಂಟ್ ನಲ್ಲಿ ತೋರಿಸಿ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದ್ದಾರೆ. ಅವರಿವರನ್ನ ಬೈದುಕೊಂಡೇ ವಿಧಾನಸಭೆ ಕಲಾಪ ಮುಗಿಸ್ತೀರಾ. ಜನರ ಸಮಯ, ದುಡ್ಡು, ಟ್ಯಾಕ್ಸ್ ನಿಂದ ರಾಜಕಾರಣಿ, ಅಧಿಕಾರಿಗಳ ಸಂಬಳ ನಡೆಯುತ್ತಿದೆ. ಎಲ್ಲರೂ ಆ ಪರಿಜ್ಞಾನ ಇಟ್ಟುಕೊಳ್ಳಬೇಕು, ಆಗ ಇಂತಹಾ ಭಾಷಣ ಮಾಡಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ.ನಾನು-ನೀನು ಅನ್ನೋ ಭೇದ ಹಿಂಸೆ, ನಾನು-ನೀನು ಒಂದು ಅನ್ನೋದು ಅಹಿಂಸೆ ಎಂದಿದ್ದಾರೆ.

ಮೂರೂ ಪಕ್ಷದವರು ಆಶ್ರಮಕ್ಕೆ ಪರಿಚಯ ಇರುವವರೇ ಅವರಿಗೆಲ್ಲ ನನ್ನ ಮನವಿ ಇಷ್ಟೆ. ನೀವು ನಿಮ್ಮ ರಾಜಕಾರಣವನ್ನ ಜ್ಞಾನ, ಕೆಲಸದಿಂದ ತೋರಿಸಿ. ಪಕ್ಷಗಳನ್ನು ಪರಸ್ಪರ ನಿಂಧಿಸುವುದರಲ್ಲೇ ವಿಧಾನಸಭೆ ಕಲಾಪಗಳು ಮುಗಿದು ಹೋಗುವುದು ಬೇಡ ಎಂದರು.

click me!