ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್ ನ್ಯೂಸ್, ಇಲ್ಲಿದೆ ಕಾರಣ

By Gowthami KFirst Published Feb 2, 2024, 7:38 PM IST
Highlights

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌  ಗುಡ್ ನ್ಯೂಸ್ ನೀಡಿದೆ. ಭಾನುವಾರ ಬೆಳಗ್ಗೆ 4.30ರಿಂದ ಮೆಟ್ರೋ ಸೇವೆ ಆರಂಭವಾಗಲಿದೆ. ಕಾರಣ ಇಲ್ಲಿದೆ.

ಬೆಂಗಳೂರು (ಫೆ.2): ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌  ಗುಡ್ ನ್ಯೂಸ್ ನೀಡಿದೆ. ಭಾನುವಾರ ವಿಶ್ವಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ವಾಕ್ ಮತ್ತು XL Runathon  ಇವೆಂಟ್ ಆಯೋಜನೆ ಮಾಡಿದ್ದು, ಈ ಇವೆಂಟ್ ನಲ್ಲಿ ನಗರದ ಸಾಕಷ್ಟು ಜನ ಸಾರ್ವಜನಿಕರು ಭಾಗಿಯಾಗೋ ಸಾಧ್ಯತೆ ಇದೆ. ಈ ಹಿನ್ನೆಲೆ ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಬೆಳಿಗ್ಗೆ 4.30 ಕ್ಕೆ ಮೆಟ್ರೋ ಸೇವೆ ಆರಂಭವಾಗಲಿದೆ. ಭಾನುವಾರದಂದು ನಾರ್ಮಲ್ ಆಗಿ ಬೆಳಗ್ಗೆ 7 ಗಂಟೆಗೆ ಬಿಎಂಆರ್‌ಸಿಎಲ್‌ ಮೆಟ್ರೋ ಸೇವೆ ಆರಂಭವಾಗುತ್ತಿತ್ತು. ಸದ್ಯ ಫೆಬ್ರವರಿ 4 ರಂದು ಎರಡುವರೆ ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಆರಂಭವಾಗಲಿದೆ.

ಲೈಂಗಿಕ ಕಿರುಕುಳ  ₹500 ಇದ್ದ ದಂಡವನ್ನು ₹10,000ಕ್ಕೆ ಹೆಚ್ಚಳ: ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ದಂಡದ ಮೊತ್ತವನ್ನು ಬರೋಬ್ಬರಿ 20 ಪಟ್ಟು ಹೆಚ್ಚಿಸಿದೆ. ಅಸಭ್ಯ ವರ್ತನೆಗೆ ಈ ಮೊದಲು ₹500 ಇದ್ದ ದಂಡವನ್ನು ₹10,000ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಇದರ ಮಧ್ಯೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಕಳೆದ ತಿಂಗಳು (ಜ.2) ವರದಿಯಾಗಿತ್ತು. ಈ ವೇಳೆ ತಪ್ಪಿತಸ್ಥನಿಗೆ ಮೆಟ್ರೋ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಆ್ಯಕ್ಟ್ ಸೆಕ್ಷನ್‌ 59, 60, 64ರ ಅಡಿ ₹10,000 ದಂಡ ವಿಧಿಸಲಾಗಿತ್ತು.

click me!