ದಾವಣಗೆರೆ (ಜ.05): ಬುದ್ಧಿಮಾಂದ್ಯ ಮಹಿಳೆಯೊಬ್ಬರನ್ನು (Woman) ಇಬ್ಬರು ಕಾಮಾಂಧರು ಹೊಲಕ್ಕೆ ಎಳೆದೊಯ್ದು ಮದ್ಯಪಾನ (Liquor) ಮಾಡಿಸಿ ಅತ್ಯಾಚಾರ ಎಸಗಿರುವ ಘಟನೆ ತಾಲೂಕಿನ ಮ್ಯಾಸ ಗೊಂಡನಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಮ್ಯಾಸ ಗೊಂಡನಹಳ್ಳಿ ಗ್ರಾಮದ ಮ್ಯಾಸರಹಳ್ಳಿ ಪ್ರಭು ಹಾಗೂ ಆತನ ಸ್ನೇಹಿತ ಕುಂದು ವಾಡ ಕಿರಣ್ ಅತ್ಯಾಚಾರದ ಆರೋಪಿಗಳಾಗಿದ್ದಾರೆ. ಮೂಲತಃ ದಾವಣಗೆರೆ (Davanagere) ನಗರದ ವಾಸಿಗಳಾದ ಗಂಡ, ಹೆಂಡತಿ ಈಗ್ಗೆ ಆರೇಳು ತಿಂಗಳ ಹಿಂದೆ ಮ್ಯಾಸಗೊಂಡನಹಳ್ಳಿ ಸೇರಿಕೊಂಡಿದ್ದರು. ಬುದ್ಧಿಮಾಂದ್ಯಳಾದ ಪತ್ನಿಯನ್ನು ನೋಡಿಕೊಂಡು ಆಕೆಯ ಪತಿ ಕೂಲಿ ಕೆಲಸ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದರು.
ತನ್ನ ಮೈಮೇಲೆ ಪ್ರಜ್ಞೆ ಇಲ್ಲದೆ ಗ್ರಾಮದ ಮುಂದೆ ನಿಂತಿದ್ದ 23 ವರ್ಷದ ಬುದ್ಧಿಮಾಂದ್ಯ ಮಹಿಳೆಯನ್ನು ಆರೋಪಿಗಳಾದ ಪ್ರಭು ಹಾಗೂ ಕಿರಣ ಒತ್ತಾಯದಿಂದ ಹೆದರಿಸಿ, ಆಕೆ ಕೈ ಹಿಡಿದುಕೊಂಡು ಗ್ರಾಮದ ಜಮೀನೊಂದಕ್ಕೆ (Land) ಎಳೆದೊಯ್ದಿದ್ದಾರೆ. ನಂತರ ಬೆದರಿಸಿ, ಒತ್ತಾಯದಿಂದ ಮದ್ಯ ಕುಡಿಸಿ, ಒಬ್ಬರ ನಂತರ ಒಬ್ಬರು ಅತ್ಯಾಚಾರ (Rape) ಎಸಗಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ 3 ಗಂಟೆಯಾದರೂ ಮಹಿಳೆ ಮನೆಗೆ ಬಾರದ್ದರಿಂದ ಮನೆ ಮಂದಿ ಎಲ್ಲ ಕಡೆ ಹುಡುಕಿದ್ದಾರೆ. ಆಗ ಪ್ರಭು, ಕಿರಣ ಎಂಬುವರು ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದರು ವಿಚಾರ ಗೊತ್ತಾಗಿದೆ. ಆಕೆಯನ್ನು ಹುಡುಕಿಕೊಂಡು ಹೋದಾಗ ಹೊಲದ ಮಧ್ಯದಿಂದ ಯಾರೋ ಜೋರಾಗಿ ಚೀರಾಡುವುದು, ಅಳುವುದು, ಕೇಳಿಸಿದೆ. ಸ್ಥಳಕ್ಕೆ ಹೋದಾಗ ಬುದ್ಧಿಮಾಂದ್ಯ ಮಹಿಳೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದುದನ್ನು ಕಂಡಿದ್ದಾರೆ. ಸಂತ್ರಸ್ತೆಯನ್ನು ತಕ್ಷಣವೇ ಸಂಬಂಧಿಗಳು ಆಟೋದಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆಗೆ (Hospital) ಕರೆದೊಯ್ದು ದಾಖಲಿಸಿದ್ದಾರೆ.
ಘಟನೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪೈಶಾಚಿಕ ಕೃತ್ಯ ಎಸಗಿದ ಇಬ್ಬರೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಪೊಲೀಸರು ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.
3 ಮಕ್ಕಳ ತಾಯಿ ಮೇಲೆ ಅತ್ಯಾಚಾರ :
ಕ್ಷುಲಕ ಕಾರಣಕ್ಕೆ ಕೊಲೆ (Murder) ಪ್ರಕರಣಗಳು ವರದಿಯಾಗುತ್ತಿರುವುದು ಹೊಸದೇನೂ ಅಲ್ಲ. ಅದೇ ಸಾಲಿಗೆ ಇನ್ನೊಂದು ಸೇರ್ಪಡೆ. ಗುಜರಾತ್‌ನ (Gujarat) ರಾಜ್‌ಕೋಟ್‌ನ ಶಾಪರ್ ವೆರಾವಲ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಇಬ್ಬರು ವ್ಯಕ್ತಿಗಳು 30 ವರ್ಷದ ಮಹಿಳೆಯನ್ನು(Woman) ಮನೆಯಿಂದ ಹೊರಗೆ ಎಳೆದು ತಂದು ಮನಸಿಗೆ ಬಂದಂತೆ ಥಳಿದಿದ್ದಾರೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಶಬ್ನಮ್ ಚೌಹಾಣ್ ಎಂದು ಗುರುತಿಸಲಾಗಿದೆ.
ನೆರೆ ಮನೆಯವರೇ ಇಂಥ ಕೃತ್ಯ ಮಾಡಿದ್ದಾರೆ. ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಬಿಹಾರ (Bihar)ಮೂಲದ ಮಹಿಳೆ ಗಂಡ (Husband) ಮತ್ತು ಮಕ್ಕಳೊಂದಿಗೆ (Children)ಚಿಕ್ಕ ಕೋಣೆಯಲ್ಲಿ ವಾಸವಿದ್ದಳು. ಮೂವರು ಮಕ್ಕಳು ಐದು ವರ್ಷಕ್ಕಿಂತ ಸಣ್ಣವರು. ಸೋನು ಮತ್ತು ಆತನ ಸಹೋದರ ಶಂಭು ಉತ್ತರ ಪ್ರದೇಶದವರಾಗಿದ್ದು ಪಕ್ಕದಲ್ಲಿ ವಾಸವಿದ್ದರು.
ಭಾನುವಾರ ಸಂಜೆ ಸೋನು ಶಬನಮ್ ಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮಹಿಳೆಯ ಗಂಡ ಕೆಲಸದ ಮೇಲೆ ಹೊರಗಡೆ ಹೋಗಿದ್ದರು. ಕಿಟಕಿಯಿಂದ ಇಣುಕಿ ನೋಡಿದ್ದು ಅಲ್ಲದೇ ಕೀಟಲೆ ಮಾಡಲು ಆರಂಭಿಸಿದ್ದಾನೆ. ಮಹಿಳೆ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆಕೆಯನ್ನು ಹೊರಗೆ ಎಳೆದು ತಂದು ಮನಸಿಗೆ ಬಂದ ಹಾಗೆ ಹಲ್ಲೆ ಮಾಡಲಾಗಿದೆ.
ಕೂದಲು ಹಿಡಿದು ಎಳೆದು ತಂದ ವಿಡಿಯೋ ಸಹ ವೈರಲ್ ಆಗಿದೆ. ಗಂಡ ಸಂತೋಷ್ ಬಂದು ನೋಡಿದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯತ್ನ ಮಾಡಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಮಹಿಳೆ ಮೃತಪಟ್ಟಿದ್ದರು.