30 ವರ್ಷಗಳಿಂದ ಕಡೆಗಣಿಸಲ್ಪಟ್ಟಿದ್ದ ಚನ್ನಸಂದ್ರ ಕೆರೆಗೆ ಪುನರ್ಜನ್ಮ, ಈಗ ತ್ಯಾಜ್ಯ ಮುಕ್ತ

Published : Jun 15, 2025, 09:23 PM IST
bengaluru Channasandra lake

ಸಾರಾಂಶ

ಮೂರು ದಶಕಗಳ ಕಾಲ ಕಸದ ತಾಣವಾಗಿದ್ದ ಬೆಂಗಳೂರಿನ ಚನ್ನಸಂದ್ರ ಕೆರೆ, ಸಮುದಾಯ ಮತ್ತು ಸಿಎಸ್‌ಆರ್ ನೆರವಿನಿಂದ ಪುನರುಜ್ಜೀವನಗೊಂಡಿದೆ. ವನಮಹೋತ್ಸವದ ಸಂದರ್ಭದಲ್ಲಿ ಸ್ಥಳೀಯರ ನೇತೃತ್ವದಲ್ಲಿ ಆರಂಭವಾದ ಈ ಯೋಜನೆ, ಕೆರೆಯನ್ನು ಹೊಸ ರೂಪದಲ್ಲಿ ಮರುಸ್ಥಾಪಿಸಿದೆ.

ಬೆಂಗಳೂರು: ಕಸ್ತೂರಿನಗರದ ಬಿ. ಚನ್ನಸಂದ್ರ ಕೆರೆ, ಮೂರು ದಶಕಗಳಿಗೂ ಹೆಚ್ಚು ಕಾಲ ಕಸ ಸುರಿಯುವ ಸ್ಥಳವಾಗಿ ದುರ್ವಾಸನೆ ಹರಡುತ್ತಿದ್ದಾಗ, ಸಮುದಾಯದ ಬದ್ಧತೆ ಮತ್ತು ಸಿಎಸ್‌ಆರ್ ನೆರವಿನಿಂದ ಕೊನೆಗೂ ಹೊಸ ರೂಪ ಪಡೆದುಕೊಂಡಿದೆ. ಶನಿವಾರ ಈ ಕೆರೆ ಅನ್ನು ಅಧಿಕೃತವಾಗಿ ಪುನರ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರು ಸಂತೋಷದಿಂದ ಚಪ್ಪಾಳೆ ತಟ್ಟಿದ್ರು, ಕೆಲವರು ಕಣ್ಣೀರು ಹಾಕಿದರು.

ಈ ಹೊಸ ಹೆಜ್ಜೆಯ ಮೂಲ 2023ರ ವನಮಹೋತ್ಸವದ ಸಂದರ್ಭ. ಕಸ್ತೂರಿನಗರ ನಿವಾಸಿಗಳ ಕಲ್ಯಾಣ ಸಂಘ (KRWA) ಸದಸ್ಯರು ಕಾರ್ಯಕ್ರಮ ನಡೆಸಲು ಸ್ಥಳ ಹುಡುಕಿದಾಗ, ಬಳಕೆಯಲ್ಲಿದ್ದ ಸಾರ್ವಜನಿಕ ಜಾಗವೇ ಇಲ್ಲ ಎನ್ನುವ ಅಂಶ ಕಂಡುಬಂದಿತು. ಇದರಿಂದಲೇ ಸ್ಥಳೀಯರ ನೇತೃತ್ವದ ಪುನರು ನಿರ್ಮಾಣದ ಪ್ರಯಾಣ ಪ್ರಾರಂಭವಾಯಿತು.

ಒಮ್ಮೆ 19 ಎಕರೆ ವಿಸ್ತೀರ್ಣ ಹೊಂದಿದ್ದ ಈ ಕೆರೆ, ಅತಿಕ್ರಮಣದಿಂದ 6.5 ಎಕರೆಗೆ ಇಳಿದಿತ್ತು. ಹಾಡಿ ಬಿದ್ದಿದ್ದ ಸ್ಥಳದ ಭವಿಷ್ಯವನ್ನು ಗುರುತಿಸಿದ ಸ್ಥಳೀಯರು ಮೊದಲು ತಮ್ಮಿಂದಲೇ ನಿಧಿ ಸಂಗ್ರಹಿಸಿದರು. ನಂತರ ಹ್ಯಾಂಡ್ಸ್ ಆನ್ ಸಿಎಸ್‌ಆರ್ ಸಂಸ್ಥೆಯ ಸಂಪರ್ಕಕ್ಕೆ ಬಂದು, ಟೆಕ್ ಕಂಪನಿ ಸಿಜಿಐನ ಸಿಎಸ್‌ಆರ್ ಸಹಕಾರವನ್ನು ಪಡೆದುಕೊಂಡರು.

ಆಡಳಿತ ಅರ್ಹತೆಯು ಅರಣ್ಯ ಇಲಾಖೆಯದ್ದಾಗಿದ್ದರೂ, 2006 ರಿಂದ ಕೆರೆಯ ನಿರ್ವಹಣೆ ಬಿಬಿಎಂಪಿಯ ಕೈಯಲ್ಲಿದೆ. "ನಿವಾಸಿಗಳು ಸಂಪರ್ಕಿಸಿದಾಗ ಅನುಮತಿ ನೀಡಿದ್ದೇವೆ. ತಮ್ಮದೇ ಆದ ಕೊಡುಗೆಗಳು ಹಾಗೂ ಸಿಎಸ್‌ಆರ್ ಬೆಂಬಲದೊಂದಿಗೆ ಕೆರೆಯನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂಬುದು ಹೆಮ್ಮೆ ಮಾಡುವ ವಿಷಯ" ಎಂದು ಬೆಂಗಳೂರು ಡಿಸಿಎಫ್ ಎನ್. ರವೀಂದ್ರ ಕುಮಾರ್ ಹೇಳಿದರು.

ಹ್ಯಾಂಡ್ಸ್ ಆನ್ ಸಿಎಸ್‌ಆರ್ ತಾಂತ್ರಿಕವಾಗಿ ಹೂಳು ತೆಗೆಯುವ, ತ್ಯಾಜ್ಯ ನಿವಾರಣಾ ಕಾರ್ಯ, ಡೈಕ್ ನಿರ್ಮಾಣ ಮತ್ತು ನೀರಿನ ಹರಿವಿನ ವ್ಯವಸ್ಥೆಗಳಲ್ಲಿ ಭಾಗವಹಿಸಿದೆ. “ಸೌಂದರ್ಯಿಕರಣಕ್ಕಿಂತ ಪರಿಸರ ಸುಧಾರಣೆಯ ಕಡೆ ಗಮನ ಹರಿಸಿದ್ದೇವೆ,” ಎನ್ನುತ್ತಾರೆ ಸಂಸ್ಥಾಪಕ ಗುರುನಂದನ್ ರಾವ್. ಭವಿಷ್ಯದ ಯೋಜನೆಗಳಲ್ಲಿ ಸ್ಥಳೀಯ ಜಾತಿಯ ಮರಗಳನ್ನು ಬಳಸಿಕೊಂಡು ಮಿನಿ ಅರಣ್ಯ ನಿರ್ಮಿಸುವ ಯೋಜನೆಯಿದೆ. 800 ಅಡಿಗಳ ಗಡಿ ಗೋಡೆ ನಿರ್ಮಿಸಲು ಸ್ಥಳೀಯರು ತಿಂಗಳಿಗೆ ₹1,000 ದಾನ ನೀಡಿ ಒಟ್ಟು ₹8 ಲಕ್ಷಕ್ಕೂ ಹೆಚ್ಚು ಮೊತ್ತ ಸಂಗ್ರಹಿಸಿದರು.

“ಈ ಸ್ಥಳದಲ್ಲಿ ಹಿಂದೆ ಮೃತದೇಹಗಳನ್ನು ವಿಸರ್ಜಿಸುತ್ತಿದ್ದರು. ನಾವು ವನಮಹೋತ್ಸವದಿಂದ ಆರಂಭಿಸಿ ಈ ಕೆರೆಯನ್ನು ಪುನಃ ಜೀವಂತಗೊಳಿಸಿದ್ದೇವೆ. ಕ್ರಮ ಕೈಗೊಂಡಿಲ್ಲದಿದ್ದರೆ ಉಳಿದ 6.5 ಎಕರೆ ಸಹ ನಾಶವಾಗುತ್ತಿದ್ದವು.” KRWA ಕಾರ್ಯದರ್ಶಿ ಸೋಮಶೇಖರ್ ಪಿ ಹೇಳಿದರು.

 “ಈಜುಹೊಂಡವಿದ್ದೆಂದೂ ನನಗೆ ಗೊತ್ತಿರಲಿಲ್ಲ. ಈಗ, ನಾನು ನನ್ನ ಹುಟ್ಟೂರಿನಲ್ಲಿ ಹೇಗೆ ಕೆರೆಯನ್ನು ಅನುಭವಿಸುತ್ತೇನೋ, ಹೀಗೆಯೇ ನನ್ನ ಬೆಂಗಳೂರಿನ ನೆರೆಮನೆಯ ಕೆರೆಯನ್ನೂ ಆನಂದಿಸಬಹುದು.” ಎಂದು 25 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಅರ್ಚನಾ ಶೇಖರ್ ಎಮೋಷನಲ್ ಆಗಿ ಹೇಳಿದರು.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್