Koppal News: ಬುದ್ಧಿಮಾಂದ್ಯ ಮಗುವಿಗೆ ಸ್ಥಳದಲ್ಲೇ ಆಧಾರ್‌ ನೋಂದಣಿ

By Kannadaprabha News  |  First Published Oct 16, 2022, 12:50 PM IST
  • ಬುದ್ಧಿಮಾಂದ್ಯ ಮಗುವಿಗೆ ಸ್ಥಳದಲ್ಲೇ ಆಧಾರ್‌ ನೋಂದಣಿ
  • ಬಂಡಿಹರ್ಲಾಪುರ ಗ್ರಾಮದಲ್ಲಿ ಗ್ರಾಮವಾಸ್ತವ್ಯ
  • ಆಧಾರ್‌ ನೋಂದಣಿ ಮಾಡಿಸಿದ ತಹಸೀಲ್ದಾರ್‌

ಕೊಪ್ಪಳ (ಅ.16) : ತಾಲೂಕಿನ ಬಂಡಿಹರ್ಲಾಪುರ ಸಮೀಪದ ಬಸಾಪುರ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಮನೆ ಬಾಗಿಲಿಗೆ ಸರ್ಕಾರ ಯೋಜನೆಯಡಿ ಶನಿವಾರ ಕೊಪ್ಪಳ ತಹಸೀಲ್ದಾರ್‌ ಗ್ರಾಮ ವಾಸ್ತವ್ಯ ಮಾಡಿ, ಜನರ ಅಹವಾಲು ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ ಕಾಟ್ರಳ್ಳಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ನಂತರ ಅರಣ್ಯ ಅಧಿಕಾರಿಗಳ ಜೊತೆ ಸಸಿ ನೆಡುವ ಕಾರ್ಯಕ್ರಮ, ಪಶುಗಳಿಗೆ ಗಂಟು ರೋಗ ಬಂದಿರುವುದರಿಂದ ಹಸುವಿಗೆ ಲಸಿಕೆ ಹಾಕುವುದರ ಮೂಲಕ ಜಾಗೃತಿ ಮೂಡಿಸಿದರು.

ಶಾಲೆ ಬಿಟ್ಟಿದ್ದ ಬಾಲಕ; ಜಿಲ್ಲಾಧಿಕಾರಿ ವಿಶೇಷ ಕಾಳಜಿಯಿಂದ ಮತ್ತೆ ಶಾಲೆಗೆ!

Tap to resize

Latest Videos

undefined

ಕಾರ್ಯಕ್ರಮ ಬಳಿಕ ಮಾತನಾಡಿದ ತಹಸೀಲ್ದಾರ್‌ ಅಮರೇಶ ಬಿರಾದಾರ, ಮಕ್ಕಳು ಶಿಕ್ಷಣವಂತರಾಗಬೇಕು. ಅಂದಾಗ ಮಾತ್ರ ಗ್ರಾಮದ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ ಕೇಳಲು ಸಾಧ್ಯ. ಕನಿಷ್ಠ ಪದವಿ ವರೆಗೆ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿ. ಅವರಿಗೆ ಬೇರೆ ಕೆಲಸ ಹಚ್ಚಬೇಡಿ ಎಂದರು.

13 ವರ್ಷವಾದರೂ ಆಧಾರ್‌ ಕಾರ್ಡ್‌ ಇಲ್ಲದ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಲಂಕೇಶ್‌ ಅವರ ಮಗಳು ಅಂಜಲಿ ಅಂಗವಿಕಲೆಯಾಗಿದ್ದು, ಹಲವು ಕಚೇರಿ ತಿರುಗಾಡಿದರೂ ಆಧಾರ ಕಾರ್ಡ್‌ ಆಗುತ್ತಿಲ್ಲ ಎಂದು ಅವರ ತಂದೆ ಅಳಲು ತೋಡಿಕೊಂಡರು. ಕೂಡಲೇ ಸ್ಥಳದಲ್ಲಿಯೇ ಬುದ್ಧಿಮಾಂದ್ಯ ಮತ್ತು ಅಂಗವಿಕಲ ಅಂಜಲಿ ಎಂಬ ಮಗುವಿಗೆ ಆಧಾರ್‌ ಕಾರ್ಡ್‌ ಮಾಡಿಸಿಕೊಟ್ಟರು.

ಆಧಾರ್‌ ತಿದ್ದುಪಡಿ, ಜಾತಿ ಆದಾಯ ಪ್ರಮಾಣ ಪತ್ರ ಪಹಣಿ ಪತ್ರಕ್ಕೆ ಜನರು ಬೆಳಗ್ಗೆಯಿಂದ ಸಂಜೆವರೆಗೆ ಅರ್ಜಿ ಸಲ್ಲಿಸಿದರು. ಕೆಲ ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಲಾಯಿತು. ಕೆಲವೊಬ್ಬರಿಗೆ ಶೀಘ್ರವೇ ಸಮಸ್ಯೆ ಬಗೆಹರಿಸು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ತಾಲೂಕಾ ಶಿಕ್ಷಣಾಧಿಕಾರಿ ಮೈತ್ರಾದೇವಿ ಕೆಕ್‌ ಕತ್ತರಿಸುವ ಮೂಲಕ ಆಚರಿಸಿದರು. ಈ ಭಾಗದ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್‌ ಮತ್ತು ಉದ್ಯೋಗ ಖಾತರಿ ಪುಸ್ತಕ ವಿತರಿಸಿದರು. ಸಮಸ್ಯೆಗಳ ಕುರಿತು 92 ಅರ್ಜಿ ಬಂದಿದ್ದು, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು. ಇನ್ನುಳಿದ ಅರ್ಜಿಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಗ್ರಾಮ ವಾಸ್ತವ್ಯದಲ್ಲಿ ಶಾಸಕರ ಹಾಜರಿ ಕಡ್ಡಾಯ?: ಸಚಿವ ಅಶೋಕ್‌

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರೇಣುಕಾ ಯಮನೂರಪ್ಪ ಕುಣಿಕೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ರಾಜು, ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ದುಂಡೇಶ ತುರಾದಿ, ಆರೋಗ್ಯ ಅಧಿಕಾರಿ ಆಂಜನೇಯ, ಶಿಕ್ಷಣಾಧಿಕಾರಿ ಮೈತ್ರಾದೇವಿ, ಶಿಶು ಅಭಿವೃದ್ಧಿ ಅಧಿಕಾರಿ ಜಯಶ್ರೀ, ಗ್ರೇಡ್‌ 2 ತಹಸಿಲ್ದಾರ್‌ ರವಿ ಸಿದ್ದಪ್ಪ , ಸಹಕಾರಿ ಇಲಾಖೆ ಅಧಿಕಾರಿ ವೆಂಕಟ್‌ ರೆಡ್ಡಿ, ಪಶು ಇಲಾಖೆ ಅಧಿಕಾರಿ ಸುನಿಲ್‌ ಕುಮಾರ, ವಲಯ ಅರಣ್ಯಾಧಿಕಾರಿ ಪ್ರಕಾಶ, ಆರೋಗ್ಯ ಅಧಿಕಾರಿ ಮಂಜುಳಾ ಶರ್ಮಾ, ಪಿಡಿಒ ಮಂಜುಳಾ ಪಾಟೇಲ…, ಸದಸ್ಯರಾದ ಯಮನೂರಪ್ಪ ವಡ್ಡರ, ದಸ್ತಗಿರಿ, ಹೈದರ್‌ ಅಲಿ, ಹನುಮಂತಪ್ಪ ಕರಡಿ, ಆಂಜನೇಯ, ಮದಾರಬೀ, ಕಾವ್ಯ ವಸಂತ, ಶಿಕ್ಷಣ ಇಲಾಖೆ ಲಕ್ಷರ್‌ ನಾಯ್ಕ, ನೀರಾವರಿ ಇಲಾಖೆ ನಿರ್ದೇಶಕ, ಅಮರೇಶ ಮುಖಂಡರಾದ ಲಕ್ಮಣ, ಮಾನ್ವಿ ನರಸಿಂಹಲು ಸೇರಿದಂತೆ ಉಮೇಶ್‌ ಪೂಜಾರ ಉಪಸ್ಥಿತರಿದ್ದರು.

click me!