Mudbidri Road: ಕುಸಿವ ಭೀತಿಯಲ್ಲಿ ತೋಡು, ಕೊಳಚೆ ಹರಿವ ರೋಡು!

By Kannadaprabha News  |  First Published Oct 20, 2022, 7:46 AM IST

ಲಾವಂತ ಬೆಟ್ಟು ರಸ್ತೆಯ ಅಮರಶ್ರೀ ಟಾಕೀಸಿನ ಮುಂಭಾಗದ ಏಕ ಮುಖ ರಸ್ತೆಯಲ್ಲಿ ಬಸ್ಸುಗಳೂ ಸೇರಿದಂತೆ ಜನ ವಾಹನ ದಟ್ಟಣೆ ಮಾಮೂಲು. ಈಗ ಸಿನಿಪ್ರಿಯರ ವಾಹನಗಳೂ ಸಾಲು ಗಟ್ಟಿನಿಲ್ಲುತ್ತವೆ. ಎರಡೂ ಬದಿ ಚರಂಡಿಗಳಿದ್ದರೂ ಕೊಳಚೆ ತುಂಬಿ ತುಳುಕುತ್ತಿದೆ. ವಸತಿ ಸಮುಚ್ಛಯಗಳ ಕೊಳಚೆ ನೀರು ಘಮ್ಮೆಂದು ಚರಂಡಿಗಳಲ್ಲಿ ಒಡಾಡಲಾಗದೇ ರಸ್ತೆಗಿಳಿದು ಬರುತ್ತಿದೆ.


ಮೂಡುಬಿದಿರೆ (ಅ.20) :ಇಲ್ಲಿನ ಪೇಟೆಯ ಏಕೈಕ ಚಿತ್ರಮಂದಿರ ಅಮರಶ್ರೀ ಇರುವ ಲಾವಂತ ಬೆಟ್ಟು ರಸ್ತೆಯ ಪರಿಸರವೀಗ ಸದಾ ಜನ ವಾಹನ ಜಂಗುಳಿಯ ತಾಣ. ಕಾಂತಾರದ ಕರೆಗೆ ‘ಓ..’ಗೊಟ್ಟು ಹರಿದು ಬರುವ ಊರ ಪರವೂರ ಸಿನಿಪ್ರಿಯರು ಹತ್ತಿರದ ರಸ್ತೆಯ ಬದಿಯಲ್ಲೆಲ್ಲ ವಾಹನಗಳನ್ನು ಪಾರ್ಕ್ ಮಾಡುವ, ಟಾಕೀಸಿಗೆ ಹೋಗಿ ಬರುವ ನೂಕು ನುಗ್ಗಲು ಮಾಮೂಲಾಗಿದೆ. ಜತೆಗೆ ಆಗಾಗ ಮಳೆಯೂ ಸುರಿಯುತ್ತಿದೆ. ಒಟ್ಟಿನಲ್ಲಿ ಈಗ ಬ್ಯುಸಿಯಾಗಿರುವ ಲಾವಂತ ಬೆಟ್ಟು ರಸ್ತೆಯನ್ನೊಮ್ಮೆ ಸೂಕ್ಷವಾಗಿ ಗಮನಿಸಿದವರಿಗೆ ಕುಸಿದ ರಸ್ತೆಯಂಚುಗಳು, ಕಾದಿರುವ ಅಪಾಯ, ಎಲ್ಲಕ್ಕಿಂತ ಮುಖ್ಯವಾಗಿ ರಸ್ತೆಗೆ ಹರಿದು ನಡೆದಾಡುವ ಜನ ವಾಹನಗಳಿಗೆ ಎರಚಲ್ಪಡುತ್ತಿರುವುದು ದುರ್ವಾಸನೆಯ ಕೊಳಚೆ ನೀರು ಎಂಬ ಅಘಾತ.

Dakshina Kannada: ರಸ್ತೆ ಅಪಘಾತ: ಯಕ್ಷಗಾನ ಕಲಾವಿದ ವಾಮನ ಕುಮಾರ್ ದಾರುಣ ಸಾವು

Tap to resize

Latest Videos

ಲಾವಂತ ಬೆಟ್ಟು ರಸ್ತೆಯ ಅಮರಶ್ರೀ ಟಾಕೀಸಿನ ಮುಂಭಾಗದ ಏಕ ಮುಖ ರಸ್ತೆಯಲ್ಲಿ ಬಸ್ಸುಗಳೂ ಸೇರಿದಂತೆ ಜನ ವಾಹನ ದಟ್ಟಣೆ ಮಾಮೂಲು. ಈಗ ಸಿನಿಪ್ರಿಯರ ವಾಹನಗಳೂ ಸಾಲು ಗಟ್ಟಿನಿಲ್ಲುತ್ತವೆ. ಎರಡೂ ಬದಿ ಚರಂಡಿಗಳಿದ್ದರೂ ಕೊಳಚೆ ತುಂಬಿ ತುಳುಕುತ್ತಿದೆ. ವಸತಿ ಸಮುಚ್ಛಯಗಳ ಕೊಳಚೆ ನೀರು ಘಮ್ಮೆಂದು ಚರಂಡಿಗಳಲ್ಲಿ ಒಡಾಡಲಾಗದೇ ರಸ್ತೆಗಿಳಿದು ಬರುತ್ತಿದೆ. ಜತೆಗೆ ಮದ್ಯಪಾನಿಗಳೂ ಈ ಪರಿಸರದಲ್ಲಿ ಖರೀದಿಸಿದ್ದನ್ನು ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಖಾಲಿ ಬಾಟ್ಲಿಗಳನ್ನು ಎಲ್ಲೆಲ್ಲೂ ಎಸೆಯುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆ ಅವಕಾಶವಿದ್ದ ಸ್ಥಳಗಳೆಲ್ಲಲ್ಲ ಸುಲಭ ಶೌಚಾಲಯವಾಗುತ್ತಿವೆ. ದುರ್ವಾಸನೆಯ ನೀರಿನಲ್ಲೀಗ ಸೊಳ್ಳೆಗಳೂ ಬಿಡಾರ ಹೂಡಿವೆ. ಹಾಗಾಗಿ ಸ್ವಚ್ಛ ಸುಂದರ ಮೂಡುಬಿದಿರೆಯ ಕನಸಿಗೆ ಈ ಪರಿಸರ ಅಪಾಯಕಾರಿಯಾಗಿ ಬೆಳೆಯುತ್ತಿದೆ.

Arecanut Disease: ತೋಟಗಳಲ್ಲಿ ಅಡಕೆ ಅಕಾಲಿಕ ಹಣ್ಣಾಗುವ ರೋಗ ಪತ್ತೆ!

ಕೊಳಚೆ ನೀರು ನಿಂತಿರುವ ರಸ್ತೆಯಂಚು ಘನವಾಹನಗಳ ಭಾರಕ್ಕೆ ಕುಸಿಯುವ ಕ್ಷಣಗಣನೆಯಲ್ಲಿದೆ. ಅಪಾಯ ಎಂದಿದ್ದರೂ ಇಲ್ಲಿ ಕಟ್ಟಿಟ್ಟಬುತ್ತಿ. ಭಾರೀ ಮಳೆಗೆ ರಸ್ತೆ ಕೆರೆಯಂತಾಗುತ್ತದೆ. ಅಲ್ಲಿ ಹರಿವ ಕೊಳಚೆ ನೀರಿಗೆ ಮೈಯೊಡ್ಡಿ ನಡೆದಾಡುವ ದೌರ್ಭಾಗ್ಯ ನಾಗರಿಕರದ್ದು. ಸ್ವ ಹಿತಾಸಕ್ತಿಯಿಂದ ಸಾರ್ವಜನಿಕ ಹಿತಾಸಕ್ತಿ ಮರೆತವರಿಗೆ, ಜತೆಗೆ ಅಪಾಯದಲ್ಲಿರುವ ರಸ್ತೆಯ ಗೋಳನ್ನು ಪುರಸಭಾ ಆಡಳಿತವೀಗ ಆಲಿಸಿ ಅಗತ್ಯ ಕ್ರಮಕ್ಕೆ ಮುಂದಾಗಲಿದೆ ಎನ್ನುವ ವಿಶ್ವಾಸ ಈ ಲಾವಂತಬೆಟ್ಟು ರಸ್ತೆಯದ್ದು.

click me!