ಉತ್ತರಕನ್ನಡ: ಇದ್ದೂ ಇಲ್ಲದಂತಾದ ಅಧಿಕಾರಿಗಳು, ರಸ್ತೆ ಗುಂಡಿ ಮುಚ್ಚುವ ವೃದ್ಧ..!

By Girish Goudar  |  First Published Oct 7, 2023, 12:00 AM IST

ಹಬ್ಬುವಾಡ ರಸ್ತೆಯಲ್ಲಿ ಪ್ರತಿನಿತ್ಯ ಗುಂಡಿ ತಪ್ಪಿಸಲು ಹೋಗಿ ವಾಹನಗಳ ಸವಾರರು ಅಪಘಾತದಿಂದ ಸಾವು- ನೋವುಗಳಿಗೆ ತುತ್ತಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸ್ಥಳೀಯರ ಒತ್ತಾಯವಿದ್ದರೂ, ಅಧಿಕಾರಿಗಳ ಗಮನಕ್ಕಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾತ್ರ ಆಗುತ್ತಿಲ್ಲ. ಇದನ್ನ ಗಮನಿಸಿದ ಬಾಂಡಿಶಿಟ್ಟಾ ನಿವಾಸಿ ಜಾನ್ ಎಂಬಬರು ಈ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಉತ್ತರಕನ್ನಡ(ಅ.07):  ಸಂಪೂರ್ಣ ಗುಂಡಿಮಯವಾಗಿರುವ ಕಾರವಾರದ ಹಬ್ಬುವಾಡ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸುವ ಮೂಲಕ ವೃದ್ಧರೋರ್ವರು ವರ್ಷಗಳಿಂದ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಹಬ್ಬುವಾಡ ರಸ್ತೆಯಲ್ಲಿ ಪ್ರತಿನಿತ್ಯ ಗುಂಡಿ ತಪ್ಪಿಸಲು ಹೋಗಿ ವಾಹನಗಳ ಸವಾರರು ಅಪಘಾತದಿಂದ ಸಾವು- ನೋವುಗಳಿಗೆ ತುತ್ತಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸ್ಥಳೀಯರ ಒತ್ತಾಯವಿದ್ದರೂ, ಅಧಿಕಾರಿಗಳ ಗಮನಕ್ಕಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾತ್ರ ಆಗುತ್ತಿಲ್ಲ. ಇದನ್ನ ಗಮನಿಸಿದ ಬಾಂಡಿಶಿಟ್ಟಾ ನಿವಾಸಿ ಜಾನ್ ಎಂಬಬರು ಈ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

Tap to resize

Latest Videos

undefined

ಉತ್ತರಕನ್ನಡ: ಅನ್ನದಾತನಿಗೆ ಏಟಿನ ಮೇಲೆ ಏಟು, ಬೆಳೆಗೆ ರೋಗ ಕಾಟ, ಸಂಕಷ್ಟದಲ್ಲಿ ರೈತರು..!

ಬೆಳ್ಳಂಬೆಳಿಗ್ಗೆಯೇ ಸೈಕಲನ್ನೇರಿ, ಆ ಸೈಕಲನ್ನು ರಸ್ತೆಯಲ್ಲಿ ಅಡ್ಡ ನಿಲ್ಲಿಸಿ, ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಇಳಿಯುತ್ತಾರೆ. ಮನೆಯಿಂದಲೇ ಬುಟ್ಟಿ, ಗುದ್ದಲಿಗಳ ಸಮೇತ ಆಗಮಿಸಿ, ಕಲ್ಲು- ಮಣ್ಣನ್ನು ಗುಂಡಿಗೆ ತುಂಬಿ ತಾತ್ಕಾಲಿಕವಾಗಿ ರಸ್ತೆಗಳನ್ನ ದುರಸ್ತಿ ಪಡಿಸುವ ಕಾರ್ಯ ಈ ವೃದ್ಧ ನಡೆಸುತ್ತಾರೆ. ಯಾವುದೇ ಸ್ವಾರ್ಥವಿಲ್ಲದೇ, ನಿಸ್ವಾರ್ಥವಾಗಿ ವಾಹನ ಸವಾರರಿಗಾಗಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಈ ವೃದ್ಧನ ವಿಡಿಯೋವನ್ನು ಇದೀಗ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ವೃದ್ಧನ ಸಮಾಜ ಸೇವೆಗೆ ಬಾಂಡಿಶಿಟ್ಟಾ ನಿವಾಸಿ ಜಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

click me!