ದಾವಣಗೆರೆ ಸಮೀಪದ ಹಳೇ ಕುಂದುವಾಡದಲ್ಲಿ ದೂಡಾದಿಂದ ಮೂರು ವರ್ಷದಿಂದಲೂ ಸುಮಾರು 53.19 ಎಕರೆ ಜಮೀನಿನಲ್ಲಿ ವಸತಿ ಯೋಜನೆ ಮಾಡಲು ಉದ್ದೇಶಿಸಿರುವ ಕ್ರಮಕ್ಕೆ ಹಳೇ ಕುಂದವಾಡದ ರೈತರು ಭೂಮಿ ಕೊಡದಿರಲು ನಿರ್ಧರಿಸಿದ್ದಾರೆ.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಸೆ.17): ದಾವಣಗೆರೆ ಸಮೀಪದ ಹಳೇ ಕುಂದುವಾಡದಲ್ಲಿ ದೂಡಾದಿಂದ ಮೂರು ವರ್ಷದಿಂದಲೂ ಸುಮಾರು 53.19 ಎಕರೆ ಜಮೀನಿನಲ್ಲಿ ವಸತಿ ಯೋಜನೆ ಮಾಡಲು ಉದ್ದೇಶಿಸಿರುವ ಕ್ರಮಕ್ಕೆ ಹಳೇ ಕುಂದವಾಡದ ರೈತರು ಭೂಮಿ ಕೊಡದಿರಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ರೈತ ಹೆಚ್. ಮಲ್ಲಿಕಾರ್ಜುನ್ ಅವರು 2019-20 ರಲ್ಲಿ ದೂಡಾದವರು ರೈತರಿಂದ ಜಮೀನು ಪಡೆದು ದೂಡಾ ಲೇಔಟ್ ಮಾಡುತ್ತೇವೆ ಎಂದು ತಿಂಗಳುಗಟ್ಟಲೇ ಸಭೆ ನಡೆಸಿ 53 ಎಕರೆಗೆ 2 ರಿಂದ 3 ತಿಂಗಳಲ್ಲಿ ಹಣ ನೀಡುತ್ತೇವೆ ಎಂದಿದ್ದರು ಆದರೆ ಮೂರು ವರ್ಷ ಕಳೆದರೂ ದೂಡಾದಿಂದ ಯಾವ ಪ್ರಕ್ರಿಯೆ ನಡೆಯಲಿಲ್ಲ.ಅಂದಿನ ಡಿಸಿ ಮಹಾಂತೇಶ್ ಬೀಳಗಿಯವರು ರೈತರೊಂದಿಗೆ ಸಭೆ ನಡೆಸಿ ಪ್ರತಿ ಎಕರೆಗೆ 1 ಕೋಟಿ 28 ಲಕ್ಷ ಹಾಗೂ ಒಂದು ಸೈಟ್ ನಿಗಧಿ ಮಾಡಿದ್ದರು ಇದಕ್ಕೆ ರೈತರೂ ಕೂಡ ಒಪ್ಪಿಗೆ ನೀಡಿದ್ದರು ಅಲ್ಲದೇ ಎರಡು ತಿಂಗಳಲ್ಲಿ ಈಪ್ರಕ್ರಿಯೆ ನಡೆಸಿ ರೈತರಿಗೆ ಹಣ ನೀಡುವುದಾಗಿ ತಿಳಿಸಿದ್ದರು ಆದರೆ ಮೂರು ವರ್ಷವಾದರೂ ಯಾವುದೇ ಪ್ರಕ್ರಿಯೆ ನಡೆಸಿಲ್ಲ ಇದರಿಂದ ನಾವು ಬೇಸತ್ತಿದ್ದು ಜಮೀನು ನೀಡದಿರಲು ನಿರ್ಧರಿಸಿದ್ದೇವೆ ಎಂದರು.
ಯಾದಗಿರಿ: ಹೆದ್ದಾರಿ ಪರಿಹಾರ, ಪ್ರಭಾವಿಗಳಿಗೆ ಬೆಣ್ಣೆ, ಬಡವರಿಗೆ ಸುಣ್ಣ!
ರೈತರು ಸೆ.5 ರಂದು ದೂಡಾ, ಎಸಿ ಭೂ ಸ್ವಾಧೀನಾಧಿಕಾರಿಗಳಿಗೆ ಆಕ್ಷೇಪಣಾ ಸಲ್ಲಿಕೆ ಮಾಡಿ ಜಮೀನು ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದೇವೆ, ಈ ವಿಚಾರ ಗೊತ್ತಿದ್ದರು . ಮೊಂಡುತನದಿಂದ ದೂಡಾ ಇಲಾಖೆ ಸಚಿವ ಸಂಪುಟ ಒಪ್ಪಿಗೆ ಪಡೆದು ಮತ್ತೆ ವ್ಯರ್ಥ ಪ್ರಯತ್ನ ಮುಂದುವರೆಸಿದೆ ಅದರೂ ಸಹ ನಾವುಗಳು ಮಾತ್ರ ಒಂದು ಇಂಚೂ ಜಮೀನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇಲಾಖೆಯವರು ಮೂರು ವರ್ಷದಿಂದಲೂ ಒಂದಿಲ್ಲೊಂದು ಸಮಸ್ಯೆ ಉದ್ಭವ ಮಾಡಿದ್ದರು , ಎಲ್ಲಾ ರೈತರನ್ನು ಆಹ್ವಾನಿಸದೇ ಬ್ರೋಕರ್ ಗಳ ಜೊತೆಗೆ ಒಂದಿಬ್ಬರು ರೈತರೊಂದಿಗೆ ಸೇರಿ ದರ ನಿಗದಿ ಮಾಡಿದ್ದರು , ಬಳಿಕ ರೈತರಿಂದ ಆಕ್ರೋಶ ವ್ಯಕ್ತವಾದ ಹಿನ್ನಲೆ ಆ ಆದೇಶ ವಾಪಾಸ್ ಪಡೆದಿದ್ದರು.
ಕೊಪ್ಪಳದಲ್ಲಿ ಸರ್ಕಾರಿ ಯೋಜನೆಗಳಿಗೆ ಜಾಗವೇ ಇಲ್ಲ!
ಇದರಿಂದ ನಾವುಗಳು ಬೇಸತ್ತಿದ್ದೇವೆ ಜೊತೆಗೆ ಇಲ್ಲಿ ಜಮೀನು ಮಾರಾಟ ಮಾಡಿ ಬೇರೆಡೆ ಖರೀದಿಸಿ ಕೃಷಿ ಮಾಡಲು ಕಷ್ಟಕರವಾಗಿದೆ, ಎರಡು ಮೂರು ವರ್ಷದ ಹಿಂದೇ ಬೇರೆಡೆ ಜಮೀನು ಕಡಿಮೆ ದರ ಇತ್ತು ಈಗ ಎಲ್ಲೆಡೆ ಜಮೀನು ದರ ದುಪ್ಪಟ್ಟಾಗಿದೆ.ಆದ್ದರಿಂದ ಯಾವ ಕಷ್ಟ ಎದುರಾದರು ನಾವುಗಳು ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ, ಆದರೂ ಸಹ ಮತ್ತೆ ಮತ್ತೆ ವ್ಯರ್ಥ ಪ್ರಯತ್ನ ಮುಂದುವರೆಸಿ ರೈತರಿಗೆ ತೊಂದರೆ ನೀಡಿದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ಗ್ರಾಮಸ್ಥರಾದ ಸೋಮಶೇಖರ್ , ಎನ್,ಹೆಚ್ ಎನ್ ಗುರುನಾಥ್, ಹೆಚ್.ಜಿ ಗಣೇಶಪ್ಪ, ನರಸಪ್ಪರ ಶಿವಣ್ಣ, ಮಹಾಂತೇಶ್.ಜೆ ಆರ್ ಇದ್ದರು.