ರಾಜಕಾರಣಿಯ ಆಶ್ವಾಸನೆಗೆ ಸೀರೆ ಬೇಡ, ಸೂರು ಕೊಡಿಸಿ ಎಂದ ವೃದ್ಧೆ..!

By Kannadaprabha News  |  First Published Jul 16, 2022, 11:54 AM IST

ಶಾಸಕ ಡಿ.ಎಸ್‌. ಹೂಲಗೇರಿ ದುರಾಡಳಿತ ಮಿತಿ ಮೀರಿದೆ. ಬಡ ಮಹಿಳೆಯರಿಗೆ ಸೂರು ನೀಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ವೃದ್ಧೆ ಭಾಷಣದ ನಡುವೆ ಸೂರು ಕೇಳುತ್ತಿರುವುದೇ ಸಾಕ್ಷಿ ಎಂದ ಮಾನಪ್ಪ ವಜ್ಜಲ್‌ 


ಲಿಂಗಸುಗೂರು(ಜು.16):  ಕ್ಷೇತ್ರದ ಸಹೋದರಿಯರಿಗೆ ಮುಂದಿನ ದಿನಗಳಲ್ಲಿ ಸೀರೆ ಉಡಿಸಿ, ಉಡಿ ತುಂಬಿ ಮಹಿಳೆಯರನ್ನು ಸಂತೈಸಬೇಕೆಂಬ ಆಲೋಚನೆ ಇದೆ. ಕೆಲವೇ ದಿನಗಳಲ್ಲಿ ಆ ಕಾರ್ಯ ನೇರವೇರಿಸುವುದಾಗಿ ಮಾಜಿ ಶಾಸಕ, ಹಟ್ಟಿ ಚಿನ್ನದಗಣಿ ಕಂಪನಿ ಅಧ್ಯಕ್ಷ ಡಾ.ಮಾನಪ್ಪ ವಜ್ಜಲ್‌ ಹೇಳುತ್ತಿದ್ದಂತೆ ವೃದ್ದೆಯೋರ್ವರು ಸೋರುವ ಮನೆಯಲ್ಲಿ ಸಂಕಷ್ಟದ ಬದುಕು ದೂಡುತ್ತಿರುವೆ. ಸೀರೆ ಬದಲು ಸೂರು ಒದಗಿಸಿ ಎಂದು ಅಳಲು ತೋಡಿಕೊಂಡ ಪ್ರಸಂಗ ತಾಲೂಕಿನ ರೋಡಲಬಂಡಾ(ಯುಕೆಪಿ)ದಲ್ಲಿ ನಡೆ​ಯಿತು.

ಶುಕ್ರವಾರ ರೋಡಲಬಂಡಾ(ಯುಕೆಪಿ)ದಲ್ಲಿ ಬಿಜೆಪಿ ಸೇರ್ಪಡೆ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಡಾ.ಮಾನಪ್ಪ ವಜ್ಜಲ್‌ ಮಾತನಾಡುತ್ತಾ, ಕ್ಷೇತ್ರದಲ್ಲಿ ಶಾಸಕ ಡಿ.ಎಸ್‌. ಹೂಲಗೇರಿ ದುರಾಡಳಿತ ಮಿತಿ ಮೀರಿದೆ. ಬಡ ಮಹಿಳೆಯರಿಗೆ ಸೂರು ನೀಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ವೃದ್ಧೆ ಭಾಷಣದ ನಡುವೆ ಸೂರು ಕೇಳುತ್ತಿರುವುದೇ ಸಾಕ್ಷಿಯಾಗಿದೆ. 

Latest Videos

undefined

ತುಂಗಭದ್ರಾ ನದಿಗೆ ಸ್ನಾನಕ್ಕೆಂದು ಇಳಿದ ಅರ್ಚಕ ನೀರು ಪಾಲು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ

ಸರ್ಕಾರದ ಯೋಜನೆಗಳು ಸ್ಥಗಿತಗೊಂಡಿವೆ. ಇದರ ಮಧ್ಯೆ ಚುನಾವಣೆ ಬಂದಾಗ ಅಳುತ್ತಾ ಮತಕ್ಕಾಗಿ ಕಣ್ಣೀರು ಸುರಿಸಿ ನಾಟಕ ಮಾಡುವವರ ಮಾತಿಗೆ ಮರುಳಾಗಬೇಡಿ ಎಂದು ಪರೋಕ್ಷವಾಗಿ ಜೆಡಿಎಸ್‌ನ ಸಿದ್ದು ಬಂಡಿ ಹಾಗೂ ಶಾಸಕ ಹೂಲಗೇರಿ ವಿರುದ್ಧ ಹರಿಹಾಯ್ದುರು. ಈ ವೇಳೆ ಮುಖಂಡರು ಇದ್ದರು.

click me!