ಕೋಲಾರ: ಸರ್ಕಾರಿ ಕಚೇರಿಯಲ್ಲೇ ಮಲಗಿ ವಿನೂತನ ಪ್ರತಿಭಟನೆ ನಡೆಸಿದ ಅಜ್ಜಿ..!

By Girish Goudar  |  First Published Jul 9, 2022, 6:00 AM IST

*  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಹಶೀಲ್ದಾರ್ ಕಚೇರಿ ನಡೆದ ಘಟನೆ
*  ಖಾತೆ ಬದಲಾವಣೆ ವಿಚಾರ ಸಂಬಂಧ ಅನಗತ್ಯ ವಿಳಂಬ ಮಾಡುತ್ತಿರುವ ಅಧಿಕಾರಿಗಳು 
*  ಒಂದು ತಿಂಗಳ ಕಾಲಾವಕಾಶ ಪಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟ ಅಜ್ಜಿ 


ಕೋಲಾರ(ಜು.09): ಖಾತೆ ಬದಲಾವಣೆಗಾಗಿ ತಾಲ್ಲೂಕು ಕಚೇರಿಗೆ ಅಲೆದು ಅಲೆದು ಸುಸ್ತಾದ ಅಜ್ಜಿ ಶ್ರೀನಿವಾಸಪುರ ತಹಶೀಲ್ದಾರ್ ಕಚೇರಿ ಬಾಗಿಲಲ್ಲಿ ಮಲಗಿ ಪ್ರತಿಭಟನೆ ಮಾಡಿದ ಘಟನೆ ನಿನ್ನೆ(ಶುಕ್ರವಾರ) ನಡೆದಿದೆ. 

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಖಾತೆ ಬದಲಾವಣೆ ವಿಚಾರ ಸಂಬಂಧ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೇಸತ್ತ ಅಜ್ಜಿ ತಾಲ್ಲೂಕು ಕಚೇರಿಯಲ್ಲೇ ಬಿಡಾರ ಹೂಡಿದ್ದಾರೆ.

Latest Videos

undefined

ಕೋಲಾರದಲ್ಲಿ ಅಗ್ನಿ ಪತ್ ತರಬೇತಿ ಆರಂಭ, ಸೇನಾಕಾಂಕ್ಷಿಗಳಿಂದ ಉತ್ತಮ ಪ್ರತಿಕ್ರಿಯೆ

ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಗ್ರಾಮದ ನರಸಮ್ಮ ತಾಲ್ಲೂಕು ಕಚೇರಿಯಲ್ಲಿ ಬಂದು ಮಲಗಿರುವ ಅಜ್ಜಿ. ತಹಶೀಲ್ದಾರ್ ಶರೀನ್ ತಾಜ್ ಅಜ್ಜಿ ಹಾಗೂ ಅವರ ಸಂಬಂಧಿಕರ ಮನವಿ ಸಲ್ಲಿಸಿದ್ರು ಪ್ರಯೋಜನವಾಗಿಲ್ಲ. ಕೊನೆಗೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಕೋಲಾರ ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾಗೆ ಮನವಿ ನೀಡಿ ತಹಶೀಲ್ದಾರ್ ಶರೀನ್ ತಾಜ್ ಹಾಗೂ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೊನೆಗೆ ಒಂದು ತಿಂಗಳ ಕಾಲಾವಕಾಶ ಪಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ವಾಪಸ್ಸಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಇದು ಎರಡನೇ ಘಟನೆಯಾಗಿದೆ, ಇತ್ತೀಚೆಗಷ್ಟೇ ಕೋಲಾರ ತಾಲ್ಲೂಕು ಕಚೇರಿಯಲ್ಲಿ ಕೆಲಸ ವಿಳಂಬ ಖಂಡಿಸಿ ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ, ಈ ಘಟನೆಯ ಬೆನ್ನಲ್ಲೇ ಇಂದು ಅಜ್ಜಿಯೊಬ್ಬಳು ಬಂದು ವಿನೂತನ ಪ್ರತಿಭಟನೆ ಮಾಡಿ ತಾಲ್ಲೂಕು ಕಚೇರಿ ಕಾರ್ಯವೈಖರಿ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
 

click me!