ಮಲೆನಾಡಲ್ಲಿ ನಿಲ್ಲದೆ ಮಳೆ: ದಾವಣಗೆರೆಯಲ್ಲಿ ಆತಂಕ, ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ 

By Girish Goudar  |  First Published Jul 9, 2022, 5:45 AM IST

*  ಉಕ್ಕಿ ಹರಿಯುತ್ತಿರುವ ತುಂಗಾಭದ್ರಾ 
*  ಜಿಟಿಜಿಟಿ ಮಳೆಯಿಂದ ಹಲವು ಕಡೆ ಮನೆ ಕುಸಿತ
*  ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು ಮಳೆ 


ವರದಿ: ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ದಾವಣಗೆರೆ  

ದಾವಣಗೆರೆ(ಜು.09): ಬಿಡುವಿಲ್ಲದೆ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ತುಂಗಾಭದ್ರಾ ನದಿ ಪಾತ್ರದಲ್ಲಿ 10 ಮೀಟರ್ ನೀರಿನ ಹರಿವಿದ್ದು ಕೆಲವಡೆ ರಸ್ತೆ ಸಂಪರ್ಕ ಕಡಿತವಾಗಿದ್ದು  ಬೆಳೆಯು ಸಹ  ಮುಳುಗಡೆಯಾಗಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ದಾವಣಗೆರೆ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Videos

undefined

ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು ಮಳೆ ಜಲಾಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.  ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಪರಿಣಾಮದಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿದೆ ಹೊಲ ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ ಹಿನ್ನೆಲೆಯಲ್ಲಿ ಹರಿಹರ ತಾಲ್ಲೂಕಿನ ನದಿ ಪಾತ್ರದಲ್ಲಿರುವ ಎತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದು ನದಿ ಪಾತ್ರದಲ್ಲಿ ಜನ ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸುವುದಕ್ಕೆ ಎಸಿ ದುರ್ಗಶ್ರೀ ನೇತೃತ್ವದಲ್ಲಿ  ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ

ದಾವಣಗೆರೆ ಪಾಲಿಕೆ ದುರಾಡಳಿತದ ವಿರುದ್ಧ ಕಾಂಗ್ರೆಸ್ ಆಕ್ರೋಶ

ತುಂಗಭದ್ರಾ ನದಿಯ ನೀರಿನ ಪ್ರಮಾಣ ಏರಿಕೆ ಆಗುವ ಮುನ್ನವೇ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಗಂಗಾನಗರ ಕೈಲಾಸನಗರ .ಬೆಂಕಿ ನಗರ ಹಲಸಬಾಳು ತಾಲ್ಲೂಕಿನ ನಗರ ಗ್ರಾಮೀಣ ಪ್ರದೇಶದ ನದಿ ಪಾತ್ರದಲ್ಲಿರುವಂತಹ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು ಇನ್ನೂ ಮಳೆ ಹೆಚ್ಚಾಗುವ ಪ್ರಮಾಣ ಕಂಡು ಬಂದರೆ ಈಗಾಗಲೇ ಕಾಳಜಿ ಕೇಂದ್ರವನ್ನು ತೆರೆಯಲಿಕ್ಕೆ  ಸಿದ್ಧತೆ ಮಾಡಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದೆ ಆದ್ದರಿಂದ ಸಾರ್ವಜನಿಕರು ನಾಗರಿಕರು ಎಚ್ಚರಿಕೆಯಿಂದ ಜಾಗ್ರತರಾಗಿ ಇರಬೇಕೆಂದು ತಾಲೂಕಾಡಳಿತ ತಿಳಿಸಿದೆ

ಉಕ್ಕಡಗಾತ್ರಿಯಲ್ಲಿ ದೇವಸ್ಥಾನದ ಸ್ನಾನಗಟ್ಟಗಳು ಮುಳುಗಡೆ

ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದೆ. ತುಂಗಾ ಭದ್ರಾ ನದಿ ನೀರು ಹೆಚ್ಚಾದಂತೆ ಉಕ್ಕಡಗಾತ್ರಿ ಕ್ಷೇತ್ರ ದ್ವೀಪದಂತಾಗಿದೆ. ಉಕ್ಕಡಗಾತ್ರಿ ಯ ಸ್ನಾನದ ಘಟ್ಟ ಮುಳುಗಡೆ , ದೇವಸ್ಥಾನದ ಕೆಳಮಹಡಿಗೆ ನೀರು ನುಗ್ಗಿದೆ.

ದಾವಣಗೆರೆ: ಜೆಸಿಬಿ ಟೈರ್ ಸ್ಫೋಟಗೊಂಡು ಯುವಕ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ದೇವಸ್ಥಾನದ ಕೆಳಗೆ ಹಾಕಲಾಗಿದ್ದ 20 ಕ್ಕೂ ಹೆಚ್ಚು ಪೂಜಾ ಸಾಮಾಗ್ರಿಗಳ ಅಂಗಡಿ ಮುಳುಗಡೆಯಾಗಿದೆ. ಕ್ಷೇತ್ರಕ್ಕೆ ಆಗಮಿಸುತ್ತಿರುವ  ಭಕ್ತರಿಗೆ ನದಿಪಾತ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತುಂಗಾ ಭದ್ರಾ ನದಿ ಆಪಾಯದ ಮಟ್ಟ ಮೀರುವ ಎಲ್ಲಾ ಸಾಧ್ಯತೆಗಳಿದ್ದು ಉಕ್ಕಡಗಾತ್ರಿಗೆ ಭಕ್ತರಿಗೆ ಬರುವ ಮುನ್ನಚ್ಚೆರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಜಿಟಿಜಿಟಿ ಮಳೆಯಿಂದ ಹಲವು ಕಡೆ ಮನೆ ಕುಸಿತ

ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ದಾವಣಗೆರೆ ಜಿಲ್ಲೆ ಜನತೆ ಹೈರಾಣಾಗಿದ್ದಾರೆ. ತಾಲ್ಲೂಕಿನ ತೋಳಹುಣಸೆ ಗ್ರಾಮದಲ್ಲಿ ಇರುವ ಮಂಜುಳ ಎಂಬುವವರ ಕರಿ ಹಂಚಿನ ಮನೆ ಕುಸಿದಿದೆ.ಮನೆಯ ಒಂದು ಭಾಗ ಕುಸಿದು ಬಿದ್ದಿದೆ, ಸಂಪೂರ್ಣ ಮನೆ ಕುಸಿದು ಬೀಳುವ ಆತಂಕ ಎದುರಾಗಿದೆ. ಜಿಲ್ಲಾಡಳಿತದ ಸಹಾಯಕ್ಕೆ  ಕುಟುಂಬದವರ ಮನವಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಾದ್ಯಂತ 10 ಕ್ಕು ಹೆಚ್ಚು ಮನೆ ಕುಸಿತ ಆಗಿದ್ದು  ಮನೆ ಕಳೆದುಕೊಂಡ ಕುಟುಂಬಗಳಿಂದ  ಸೂಕ್ತ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ‌.
 

click me!