ಬಾದಾಮಿ: ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಆಹಾರ, ಔಷಧಿಯಿಲ್ಲದೆ ವೃದ್ಧೆಯ ಪರದಾಟ..!

By Suvarna News  |  First Published May 14, 2020, 11:49 AM IST

ಔಷಧಿ, ಆಹಾರ ವ್ಯವಸ್ಥೆಗೆ ಅಜ್ಜಿಯ ಮೊರೆ| ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋನಾಳ ಗ್ರಾಮದಲ್ಲಿರುವ ವೃದ್ಧೆ| ಆಹಾರ, ಔಷಧಿಯಿಲ್ಲದೆ ಅಜ್ಜಿ ಪರದಾಟ| ಗ್ರಾಮದಲ್ಲಿ ಯಾರಾದರೂ ಆಹಾರ ಕೊಟ್ರೆ ಮಾತ್ರ ಅಜ್ಜಿಗೆ ಊಟ, ಇಲ್ಲದಿದ್ದರೆ ಇಡೀ ದಿನ ಉಪವಾಸ|


ಬಾಗಲಕೋಟೆ(ಮೇ.14): ಲಾಕ್‌ಡೌನ್ ಎಫೆಕ್ಟ್‌ನಿಂದ ಆಹಾರ, ಔಷಧಿಯಿಲ್ಲದೆ ವೃದ್ಧೆಯೊಬ್ಬಳು ಪರದಾಡುತ್ತಿರುವ ಘಟನೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಶಾಂತಮ್ಮ ಹಿರೇಮಠ್ ಎಂಬಾಕೆಯೇ ಆಹಾರ, ಔಷಧಿಯಿಲ್ಲದೆ ಪರದಾಡುತ್ತಿರುವ ಅಜ್ಜಿಯಾಗಿದ್ದಾಳೆ.

ಪ್ಯಾರಲಿಸಿಸ್‌ನಿಂದ ಬಳಲುತ್ತಿರುವ ಅಜ್ಜಿಗೆ ಸೂಕ್ತ ಸಮಯದಲ್ಲಿ ಔಷಧಿ ಇಲ್ಲದೇ ಮತ್ತಷ್ಟು ಕೈಕಾಲು ಹಿಡಿದುಕೊಂಡು ಮೇಲೇಳಲೂ ಸಹ ಆಗುತ್ತಿಲ್ಲ. ಎಲ್ಲ ತನ್ನ ಕೆಲಸಗಳನ್ನ ಕುಳಿತಲ್ಲೇ ಕುಳಿತುಕೊಂಡ ಮಾಡಿಕೊಳ್ಳುತ್ತಿದ್ದಾಳೆ. 

Tap to resize

Latest Videos

ಪೊಲೀಸರ ಕಣ್ಣು ತಪ್ಪಿಸಿ ಬೆಳಗಾವಿಗೆ ಎಂಟ್ರಿ ಕೊಟ್ಟವರು ಸಿಕ್ಕಿ ಬಿದ್ದಿದ್ದು ಹೀಗೆ..!

ಅತ್ತ ಆಹಾರವೂ ಇಲ್ಲ, ಇತ್ತ ಔಷಧಿಯೂ ಸಿಗದಿದ್ದರಿಂದ ವೃದ್ಧೆಯ ಬದುಕು ಅಕ್ಷರಶಃ ಅತಂತ್ರವಾಗಿದೆ. ಗ್ರಾಮದಲ್ಲಿ ಯಾರಾದರೂ ಆಹಾರ ಕೊಟ್ರೆ ಮಾತ್ರ ಅಜ್ಜಿಗೆ ಊಟ, ಇಲ್ಲದಿದ್ದರೆ ಇಡೀ ದಿನ ಉಪವಾಸದಲ್ಲೇ ವೃದ್ಧೆ ಕಾಲ ಕಳೆಯುತ್ತಿದ್ದಾರೆ. ಈ ಬಡಪಾಯಿ ಅಜ್ಜಿಯ ನೆರವಿಗೆ ಧಾವಿಸುವ ಅಗತ್ಯತೆ ಇದೆ. 
 

click me!