ವಿಜಯಪುರದಲ್ಲಿ 47 ಜನರಿಗೆ ಮಹಾಮಾರಿ ಕೊರೋನಾ ಅಂಟಿಸಿದ ವೃದ್ಧೆ, ಬಾಲಕ..!

Kannadaprabha News   | Asianet News
Published : May 10, 2020, 02:14 PM ISTUpdated : May 18, 2020, 05:50 PM IST
ವಿಜಯಪುರದಲ್ಲಿ 47 ಜನರಿಗೆ ಮಹಾಮಾರಿ ಕೊರೋನಾ ಅಂಟಿಸಿದ ವೃದ್ಧೆ, ಬಾಲಕ..!

ಸಾರಾಂಶ

ವಿಜಯಪುರದಲ್ಲಿ ವೃದ್ಧೆ, ಬಾಲಕ ಸೂಪರ್‌ ಸ್ಪ್ರೆಡರ್‌| ಚಪ್ಪರಬಂದ ಬಡಾವಣೆಯ 60 ವರ್ಷದ ವೃದ್ಧೆಯೇ ಸೂಪರ್‌ ಸ್ಪ್ರೆಡರ್‌| ಪಿ.221 ವೃದ್ಧೆಯಿಂದ ಇದುವರೆಗೆ ಒಟ್ಟು 36 ಜನರಿಗೆ ಕೊರೋನಾ ಸೋಂಕು ತಗುಲಿದೆ|. ತನ್ನ ಕುಟುಂಬದ 28 ಜನರಿಗೆ ಸೋಂಕು ತಗುಲಿಸಿದ ವೃದ್ಧೆ| ಇನ್ನೊಂದು ಕುಟುಂಬಕ್ಕೆ ಸೂಪರ್‌ ಸ್ಪ್ರೆಡರ್‌ ಆದ ಬಾಲಕ ಪಿ.228| ಈತನಿಂದ ಒಟ್ಟು 11 ಮಂದಿಗೆ ಕೊರೋನಾ ಸೋಂಕು ಹರಡಿದೆ|

ವಿಜಯಪುರ(ಮೇ.10): ನಗರದಲ್ಲಿ ಕೊರೋನಾ ಒಬ್ಬ ವೃದ್ಧೆ ಹಾಗೂ ಬಾಲಕನಿಂದ ಕೊರೋನಾ ಹಬ್ಬಿದ್ದು, ಇವರಿಬ್ಬರೂ ಸೂಪರ್‌ ಸ್ಪ್ರೆಡರ್‌ ಆಗಿದ್ದಾರೆ.

ನಗರದ ಚಪ್ಪರಬಂದ ಬಡಾವಣೆಯ 60 ವರ್ಷದ ವೃದ್ಧೆಯೇ ಸೂಪರ್‌ ಸ್ಪ್ರೆಡರ್‌ ಆಗಿದ್ದಾಳೆ. ಪಿ.221 ವೃದ್ಧೆಯಿಂದ ಇದುವರೆಗೆ ಒಟ್ಟು 36 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ವೃದ್ಧೆ ತನ್ನ ಕುಟುಂಬದ 28 ಜನರಿಗೆ ಸೋಂಕು ತಗುಲಿಸಿದ್ದಾಳೆ. ಜತೆಗೆ ವೃದ್ಧೆಯ ಪತಿ ಕೊರೋನಾ ರೋಗಕ್ಕೆ ಬಲಿಯಾಗಿದ್ದಾನೆ. 28 ಜನರಿರುವ ಈ ವೃದ್ಧೆಯ ಕುಟುಂಬದಲ್ಲಿ ಎಲ್ಲರಿಗೂ ಸೋಂಕು ತಗುಲಿದೆ.

ಅಪ್ಪ, ಅಮ್ಮನ ವಿಡಿಯೋ ಕಾಲ್‌ನಲ್ಲಿ ನೋಡಿ ಬಿಕ್ಕಿ ಬಿಕ್ಕಿ ಅಳುತ್ತೆ ಕಂದಮ್ಮ..! ಎಂಥವರನ್ನೂ ಭಾವುಕವಾಗಿಸುತ್ತೆ ಈ ವಿಡಿಯೋ

ಇನ್ನೊಂದು ಕುಟುಂಬಕ್ಕೆ ಸೂಪರ್‌ ಸ್ಪ್ರೆಡರ್‌ ಆದ ಬಾಲಕ ಪಿ.228. ಈತನಿಂದ ಒಟ್ಟು 11 ಮಂದಿಗೆ ಕೊರೋನಾ ಸೋಂಕು ಹರಡಿದೆ. ಈ ಬಾಲಕನಿಗೆ ಮಹಾರಾಷ್ಟ್ರದ ಪುಣೆಯಲ್ಲಿದ್ದ ತನ್ನ ತಾಯಿಯಿಂದ ಸೋಂಕು ತಗುಲಿದೆ. ಈ ಬಾಲಕ ಪುಣೆಯಿಂದ ವಿಜಯಪುರಕ್ಕೆ ಬಂದು ಇಲ್ಲಿಯೇ ನೆಲೆಸಿದ್ದ. ಈ ಬಾಲಕನಿಂದ ಮನೆ ಮಂದಿಗೆಲ್ಲ ಕೊರೋನಾ ಸೋಂಕು ಹರಡಿದೆ. ಈ ಇಬ್ಬರು ಜಿಲ್ಲೆಯ ಸೂಪರ್‌ ಸ್ಪ್ರೆಡರ್‌  ಆಗಿದ್ದು, ಈ ಇಬ್ಬರಿಂದ ಒಟ್ಟು 47 ಜನರಿಗೆ ಕೊರೋನಾ ಹರಡಿದೆ.
 

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು