Janata Darshan: ಜೇನನ್ನು ವಿಷವೆಂದು ತೋರಿಸಿ ಸಿಎಂ ಮುಂದೆ ವೃದ್ಧನ ಹೈಡ್ರಾಮಾ..!

Published : Mar 19, 2022, 06:31 AM IST
Janata Darshan: ಜೇನನ್ನು ವಿಷವೆಂದು ತೋರಿಸಿ ಸಿಎಂ ಮುಂದೆ ವೃದ್ಧನ ಹೈಡ್ರಾಮಾ..!

ಸಾರಾಂಶ

*  ಜನತಾ ದರ್ಶನದ ವೇಳೆ ನಿವೇಶನದ ಹಣಕ್ಕೆ ಆಗ್ರಹ *  ಪೊಲೀಸರಿಂದ ಮೋಸ ಎಂದು ಆರೋಪ *  30 ಲಕ್ಷಕ್ಕೆ 30 ಲಕ್ಷ ಸೇರಿಸಿ ಕೊಡಿ

ಬೆಂಗಳೂರು(ಮಾ.19):  ಆರ್‌.ಟಿ.ನಗರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಖಾಸಗಿ ನಿವಾಸದ ಎದುರು ಜನತಾ ದರ್ಶನದಲ್ಲಿ(Janata Darshan) ವೃದ್ಧರೊಬ್ಬರು ನಿವೇಶನದ ವಿಚಾರದಲ್ಲಿ ನನಗೆ ಮೋಸವಾಗಿದೆ ಎಂದು ಹೇಳಿಕೊಂಡು ಜೇನು(Honey) ತುಪ್ಪದ ಬಾಟಲಿ ಹಿಡಿದು ಹೈಡ್ರಾಮಾ ಸೃಷ್ಟಿಸಿದ ಘಟನೆ ಶುಕ್ರವಾರ ಜರುಗಿದೆ.

ಸುಂಕದಕಟ್ಟೆ ನಿವಾಸಿ ಚಂದ್ರಶೇಖರ್‌ ಹೈಡ್ರಾಮಾ ಸೃಷ್ಟಿಸಿದ ವೃದ್ಧ(Od Age Man). ಮುಖ್ಯಮಂತ್ರಿಗಳ ನಿವಾಸದ ಬಳಿ ಜನತಾ ದರ್ಶನದಲ್ಲಿ ಭಾಗಿಯಾಗಲು ಬಂದಿದ್ದರು. ಪೊಲೀಸರು(Police) ಕೆಲ ವ್ಯಕ್ತಿಗಳ ಜತೆ ಸೇರಿಕೊಂಡು ನಿವೇಶನ ವಿಚಾರದಲ್ಲಿ ನನಗೆ ಲಕ್ಷಾಂತರ ರು. ಮೋಸ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರೇ ಕೆಲ ವ್ಯಕ್ತಿಗಳೊಂದಿಗೆ ಸೇರಿಕೊಂಡು ನನಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಬಳಿಕ ಜೇಬಿನಿಂದ ಬಾಟಲಿಯೊಂದನ್ನು ತೆಗೆದು ಮುಖ್ಯಮಂತ್ರಿಗಳಿಗೆ ತೋರಿಸಿ ಬಳಿಕ ಕುಡಿಯಲು ಯತ್ನಿಸಿದರು. ಈ ವೇಳೆ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ಕರೆದೊಯ್ದರು. ನಂತರ ಅದು ವಿಷದ ಬಾಟಲಿಯಲ್ಲ, ಜೇನುತುಪ್ಪ ಎಂಬುದು ತಿಳಿಯಿತು. ಪೊಲೀಸರು ಆತನಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದರು.

CM Janata Darshan : ಸಮಸ್ಯೆ ಹೇಳಲು ಬಂದ ಶಿಕ್ಷಕರಿಗೆ ಪೊಲೀಸರಿಂದ ಅಡ್ಡಿ

ಚಂದ್ರಶೇಖರ್‌ ಅವರ ಪುತ್ರ ಲತಾ ಎಂಬುವರ ಬಳಿ 35 ಲಕ್ಷಕ್ಕೆ ಸೈಟ್‌(Site)_ ಖರೀದಿಸಿದ್ದರು. ಈ ಸಂಬಂಧ 30 ಲಕ್ಷ ಪಾವತಿಸಿದ್ದರು. ಆದರೆ ಸೈಟ್‌ ಬಗ್ಗೆ ಕೋರ್ಟಲ್ಲಿ ತಕರಾರು ಇರುವ ವಿಷಯ ತಿಳಿದು ಸೈಟ್‌ ಬೇಡ ಎಂದಿದ್ದರು. ಲತಾ ಎಂಬುವರು 30 ಲಕ್ಷ ವಾಪಸ್‌ ನೀಡಿದ್ದರು. ಆದರೆ ಅಗ್ರಿಮೆಂಟ್‌ನಲ್ಲಿ ಕರಾರು ರದ್ದಾದರೆ 30 ಲಕ್ಷ ಹೆಚ್ಚುಹಣ ವಾಪಸ್‌ ಕೊಡಬೇಕು ಎಂದಿತ್ತು. ಅದರಂತೆ ಹಣ ಕೊಡಿಸುವಂತೆ ಚಂದ್ರಶೇಖರ್‌ ಒತ್ತಾಯಿಸಿದ್ದಾರೆ.

ಹಾನಗಲ್ ಬೈ ಎಲೆಕ್ಷನ್ ಸೋಲಿನ ನಂತರ ಶಾಸಕರಿಂದ ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮ

30 ಲಕ್ಷಕ್ಕೆ 30 ಲಕ್ಷ ಸೇರಿಸಿ ಕೊಡಿ

ಚಂದ್ರಶೇಖರ್‌ ಅವರ ಮಗ ರಾಮು ಅವರು ಲತಾ ಎಂಬ ಮಹಿಳೆ ಬಳಿ 35 ಲಕ್ಷ ರು.ಗೆ ನಿವೇಶನ ಖರೀದಿ ಮಾಡಿದ್ದರು. ಮುಂಗಡವಾಗಿ 30 ಲಕ್ಷ ರು. ಹಣ ನೀಡಿದ್ದರು. ಈ ನಿವೇಶನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುದ್ದಿನ ಪಾಳ್ಯದಲ್ಲಿದೆ. ಬಳಿಕ ಈ ನಿವೇಶನ ವಿಚಾರ ನ್ಯಾಯಾಲಯದಲ್ಲಿ(Court) ವ್ಯಾಜ್ಯವಿರುವ ಬಗ್ಗೆ ತಿಳಿದು ನಿವೇಶನ ನಮಗೆ ಬೇಡ, ಹಣ ಕೊಡಿ ಎಂದು ನಿವೇಶನ ಮಾಲಿಕರಾದ ಲತಾ ಅವರಿಗೆ ಕೇಳುತ್ತಿದ್ದರು. ಈ ಸಂಬಂಧ 2021ರ ಆಗಸ್ಟ್‌ನಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆಗೆ ದೂರು ನೀಡಿದ್ದರು.

ಬಳಿಕ ಪೊಲೀಸರ ಬಳಿ ನ್ಯಾಯ ಸಿಗುವುದಿಲ್ಲ ಎಂದು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. ಬಳಿಕ ಆಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಬಳಿಕ ಸಿಸಿಬಿ ಪೊಲೀಸರು(CCB Police) 2022ರ ಫೆಬ್ರವರಿಯಲ್ಲಿ ನಿವೇಶನ ಮಾಲಿಕರಾದ ಲತಾ ಅವರನ್ನು ಕರೆಸಿ 30 ಲಕ್ಷ ರು. ಹಣವನ್ನು ಮರುಪಾವತಿ ಮಾಡಿಸಿದ್ದರು. ಆದರೆ, ವೃದ್ಧ ಚಂದ್ರಶೇಖರ್‌ ಅವರು ನಿವೇಶನ ಅಗ್ರಿಮೆಂಟ್‌ ಪ್ರಕಾರ ನಮಗೆ ಈ ನಿವೇಶನ ಬೇಡ ಎಂದಾಗ 30 ಲಕ್ಷ ರು.ಗೆ 30 ಲಕ್ಷ ರು. ಸೇರಿಸಿ ಕೊಡಬೇಕು. ಇದೀಗ ನಿವೇಶನದ ಹಣ ವಾಪಸ್‌ ಕೊಟ್ಟಿದ್ದು, ಅಗ್ರಿಮೆಂಟ್‌ ಪ್ರಕಾರ ಬಾಕಿ 30 ಲಕ್ಷ ರು. ಕೊಟ್ಟಿಲ್ಲ. ಇದರಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ