* ಕಾಂಗ್ರೆಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಶ್ರೀರಾಮುಲು ಉತ್ತರ
* ಪ್ರತಿ ಕಿ.ಮೀ.ಗೆ .51.67 ರಂತೆ ಬಿಎಂಟಿಸಿಯಿಂದ ಪಾವತಿ
* ಎಲೆಕ್ಟ್ರಿಕ್ ಬಸ್‌ಗಳಿಂದ ಸದ್ಯಕ್ಕೆ ಲಾಭ-ನಷ್ಟದ ಬಗ್ಗೆ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ
ಬೆಂಗಳೂರು(ಮಾ.19): ನಗರದಲ್ಲಿ ಸಂಚರಿಸುತ್ತಿರುವ ವಿದ್ಯುತ್ ಬಸ್‌ಗಳ ಗುತ್ತಿಗೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಸ್ಪಷ್ಟಪಡಿಸಿದರು.
ಕಾಂಗ್ರೆಸ್(Congress) ಸದಸ್ಯ ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿರುವ ಎಲೆಕ್ಟ್ರಿಕ್ ಬಸ್ 90 ಕಿ.ಮೀ. ಸಂಚರಿಸುತ್ತಿವೆ. 24 ಬಸ್‌ಗಳು ಸದ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿವೆ. ಅವುಗಳಲ್ಲಿ ಕೆಲವು 190 ಕಿ.ಮೀ. ವರೆಗೂ ಸಂಚಾರ ಮಾಡುತ್ತಿವೆ. ಪ್ರತಿ ಕಿ.ಮೀ.ಗೆ .51.67 ರಂತೆ ಬಿಎಂಟಿಸಿಯಿಂದ ಪಾವತಿ ಮಾಡಲಾಗುತ್ತಿದೆ, ಎಲೆಕ್ಟ್ರಿಕ್ ಬಸ್‌ಗಳಿಂದ ಸದ್ಯಕ್ಕೆ ಲಾಭ-ನಷ್ಟದ ಬಗ್ಗೆ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ ಎಂದರು.
Electric Bus ಶೀಘ್ರದಲ್ಲೇ KSRTCಗೆ 50 ಎಲೆಕ್ಟ್ರಿಕ್ ಬಸ್, ಜಿಲ್ಲೆ ಜಿಲ್ಲೆಗೆ ಸಂಚಾರ ಆರಂಭ!
ವಿದ್ಯುತ್ ಚಾಲಿತ ಬಸ್ಸುಗಳನ್ನು ಖರೀದಿ ಮಾಡಿಲ್ಲ. ಬದಲಾಗಿ ಗುತ್ತಿಗೆ ಆಧಾರದ ಮೇಲೆ 90 ಹವಾನಿಯಂತ್ರಣ ರಹಿತ 9 ಮೀಟರ್ ಇರುವ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಮೆ.ಎನ್.ವಿ.ಎನ್.ಸಂಸ್ಥೆಗೆ ಒಪ್ಪಿಗೆ ನೀಡಿದ್ದೇವೆ. ಬೆಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಬಿಎಂಟಿಸಿಗೆ ಒಟ್ಟಾರೆ .50 ಕೋಟಿ ಅನುದಾನವನ್ನು ನೀಡಲಿದ್ದು, ಸದರಿ ಅನುದಾನದಲ್ಲಿ ಪ್ರತಿ ಬಸ್ಸಿಗೆ .45 ಕೋಟಿ ಮೊತ್ತವನ್ನು ಮೆ.ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮಕ್ಕೆ ಪಾವತಿಸಲಾಗುವುದು. ಉಳಿದ ಮೊತ್ತವನ್ನು ಬಿಎಂಟಿಸಿ ಸಂಸ್ಥೆಯು ಚಾರ್ಜಿಂಗ್ ಘಟಕ ಸ್ಥಾಪನೆಗೆ ಬಳಕೆ ಮಾಡಲಿದೆ ಎಂದು ಉತ್ತರಿಸಿದರು.
ಬಿಎಂಟಿಸಿ ಪಾಲಿಗೆ ಬಿಳಿಯಾನೆಯಾದ ಎಲೆಕ್ಟ್ರಿಕ್ ಬಸ್!
ಬೆಂಗಳೂರು: ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ನಷ್ಟಕ್ಕೆ ಸಿಲುಕಿ ಸಿಬ್ಬಂದಿಗೆ ವೇತನ ಪಾವತಿಗೂ ಸರ್ಕಾರದ ಮೊರೆ ಹೋಗಿದ್ದ ಬಿಎಂಟಿಸಿಗೆ(BMTC) ನೂತನವಾಗಿ ಆಗಮಿಸಿರುವ ಎಲೆಕ್ಟ್ರಿಕ್ ಬಸ್‌ಗಳು ಬಿಳಿಯಾನೆಯಾಗಿ ಪರಿಣಮಿಸಿದೆ.
ನಗರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್(NTPCL)ನಿಂದ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದೆ. ಆದರೆ, ಈ ಬಸ್‌ಗಳ ಚಾರ್ಜಿಂಗ್ ಮಾಡುವುದಕ್ಕಾಗಿ ನಗರದಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಪರಿಣಾಮ ಬಸ್‌ಗಳು ಸಂಚರಿಸದಿದ್ದರೂ ಒಪ್ಪಂದದಂತೆ ನಿಗದಿತ ಮೊತ್ತ ಪಾವತಿ ಮಾಡಬೇಕಾಗಿದೆ. ಇದು ಬಿಎಂಟಿಸಿಗೆ ನಷ್ಟದ ಬಾಬ್ತು ಆಗಿದೆ.
ಬೆಂಗ್ಳೂರಿಂದ 6 ನಗರಕ್ಕೆ ಎಲೆಕ್ಟ್ರಿಕ್ ಬಸ್ ಸಂಚಾರ
ಪ್ರತಿ ಕಿ.ಮೀ.ಗೆ 51.67:
ಸುಮಾರು 1.5 ಕೋಟಿ ಬೆಲೆಯ ಈ ಬಸ್‌ಗಳಿಗೆ ಸ್ಮಾರ್ಟ್‌ಸಿಟಿ(Smartcity) ಯೋಜನೆ ಅಡಿ ಪ್ರತಿ ಬಸ್‌ಗೆ ತಲಾ 50 ಲಕ್ಷ ರು. ನೀಡಲಾಗಿದೆ. ಇನ್ನುಳಿದ ಮೊತ್ತವನ್ನು ಎನ್‌ಟಿಪಿಸಿಎಲ್ ವಿನಿಯೋಗಿಸಿದೆ. ಆದರೆ, ಈ ಬಸ್‌ಗಳು ದಿನವೊಂದಕ್ಕೆ 180 ಕಿ.ಮೀ. ಸಂಚರಿಸಬೇಕು. ಇದಕ್ಕಾಗಿ ಕಿ.ಮೀ.ಗೆ 51.67 ರು. ಎನ್‌ಟಿಪಿಸಿಎಲ್‌ಗೆ ಪಾವತಿಸಬೇಕು ಎಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜತೆಗೆ, ದಿನವೊಂದರಲ್ಲಿ ಒಂದು ಕಿಲೋ ಮೀಟರ್ ಸಂಚರಿಸಿದರೂ 180 ಕಿ.ಮೀ.ನ ಸಂಪೂರ್ಣ ಮೊತ್ತ ಪಾವತಿಸಬೇಕು ಎಂಬುದಾಗಿ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೇವಲ 80 ಕಿ.ಮೀ. ದೂರ ಸಂಚರಿಸಿ ನಿಂತು ಹೋಗುತ್ತಿರುವ ಬಸ್‌ಗಳಿಗೂ ಸಂಪೂರ್ಣ ಮೊತ್ತ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಎಲೆಕ್ಟ್ರಿಕ್ ಬಸ್‌ಗಳು(Electric Bus) ಸರಾಗವಾಗಿ ಹಾದು ಹೋಗುವ ರಸ್ತೆಗಳಲ್ಲಿ ಹೆಚ್ಚು ಕಿಲೋ ಮೀಟರ್ ಸಂಚರಿಸಲಿವೆ. ಆದರೆ, ಬೆಂಗಳೂರು(Bengaluru) ನಗರದ ರಸ್ತೆಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ ಎರಡು ರಸ್ತೆ ಉಬ್ಬುಗಳು ಇರಲಿದ್ದು, ರಸ್ತೆ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಜತೆಗೆ, ಹೊಸ ಬಸ್‌ಗಳನ್ನು ಚಾಲನೆ ಮಾಡಲು ಬಿಎಂಟಿಸಿ ಚಾಲಕರಿಗೆ ಅನುಭವದ ಕೊರತೆಯಿದೆ. ಇದರಿಂದ ನಿಗದಿತ ಪ್ರಮಾಣದ ಕಿಲೋ ಮೀಟರ್ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.