ಚುನಾವಣೆ ಮುಗಿದ್ರೂ ಖಾಸಗಿ ವಾಹನ ಚಾಲಕರಿಗೆ ಬಾಡಿಗೆ ಪಾವತಿಸದ ಅಧಿಕಾರಿಗಳು!

By Govindaraj S  |  First Published Jul 29, 2023, 11:21 PM IST

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮೇ 10ಕ್ಕೆ ನಡೆದು ಮೇ 13ಕ್ಕೆ ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತ‌ ಸಾಧಿಸಿ ರಾಜ್ಯದಲ್ಲಿ ಆಡಳಿತ ಕೂಡಾ ಪ್ರಾರಂಭಿಸಿದೆ. 


ಉತ್ತರ ಕನ್ನಡ (ಜು.29): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮೇ 10ಕ್ಕೆ ನಡೆದು ಮೇ 13ಕ್ಕೆ ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತ‌ ಸಾಧಿಸಿ ರಾಜ್ಯದಲ್ಲಿ ಆಡಳಿತ ಕೂಡಾ ಪ್ರಾರಂಭಿಸಿದೆ. ಸರಕಾರ ಆಡಳಿತಕ್ಕೆ ಬಂದು ಇಷ್ಟು ದಿನಗಳಾದ್ರೂ ಚುನಾವಣೆ ವೇಳೆ‌ ಆರ್‌ಟಿಒ ಕಚೇರಿಯಲ್ಲಿ ಅಧಿಕಾರಿಗಳಿಗಾಗಿ 42 ದಿನಗಳ‌ ಕಾಲ ಕೆಲಸ‌ ಮಾಡಿದ್ದ ಖಾಸಗಿ ವಾಹನ ಚಾಲಕರಿಗೆ ಈವರೆಗೂ ಪಾವತಿಯೇ ಮಾಡಿಲ್ಲ.‌ ಚುನಾವಣೆ ವೇಳೆ ಟೋಕನ್ ಕೊಟ್ಟು ಕೇವಲ ಡೀಸೆಲ್ ಮಾತ್ರ ಹಾಕಿಸಿದ್ದು, ಈವರೆಗೂ ಬಾಡಿಗೆಯ ಬಿಡಿಗಾಸೂ ಕೊಟ್ಟಿಲ್ಲ. 

ಪ್ರತೀ ಬಾರಿ ವಾಹನ ಚಾಲಕರು ಕರೆ ಮಾಡಿದಾಗಲೂ ಬಿಲ್ ಕರೆಕ್ಷನ್ ಆಗಲು ಬಾಕಿಯಿದೆ ಅಂತಾ ಹೇಳುತ್ತಾರೆ ಹೊರತು ಬೇರೆ ಯಾವುದೇ ಉತ್ತರ ದೊರಕುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹಿಂದಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಜತೆಯೂ ವಿಚಾರ ಪ್ರಸ್ತಾಪಿಸಲಾಗಿದ್ದು, ಮಾತುಕತೆ ನಡೆಸುವ ಭರವಸೆ ನೀಡಿದ್ದರು. ಜಿಲ್ಲೆಯಿಂದ ಹಲವು ಖಾಸಗಿ ವಾಹನಗಳನ್ನು ಸೇವೆಗೆ ಬಿಡಲಾಗಿದ್ರೂ ಕಾರವಾರದಿಂದ ಕಾರು, ಮ್ಯಾಕ್ಸಿಕ್ಯಾಬ್ ಅಂತಾ 7 ವಾಹನಗಳನ್ನು ಸೇವೆಗೆ ಬಿಡಲಾಗಿತ್ತು. ಆದರೆ, ಇದೀಗ ಅಧಿಕಾರಿಗಳು ಕಿ.ಮೀ. ಲೆಕ್ಕದಲ್ಲಿ ಬಿಲ್ ಪಾವತಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. 

Tap to resize

Latest Videos

undefined

ಮೊಹರಂ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ವೇಳೆಯೇ ವ್ಯಕ್ತಿಗೆ ಹೃದಯಾಘಾತ: ಸಾವು

ದಿನಪೂರ್ತಿ ಇಲಾಖೆಯ ಕೆಲಸಕ್ಕೆ ವಾಹನ ಬಿಟ್ಟು ಇದೀಗ ಅಧಿಕಾರಿಗಳು ಓಡಾಡಿದ 30ಕಿ.ಮೀ.‌, 50ಕಿ.ಮೀ.ಮಾತ್ರ ಗಣನೆಗೆ ತೆಗೆದುಕೊಳ್ಳುವುದಾದಲ್ಲಿ ಖಾಸಗಿ ವಾಹನ ಚಾಲಕರಿಗೆ ಭಾರೀ ನಷ್ಟವಾಗುತ್ತದೆ. ಚುನಾವಣೆ ಸಮಯದಲ್ಲಿ ಹೊರಗಿನಿಂದ ವಾಹನ ಚಾಲಕರನ್ನು ಕರೆಯಿಸಿ ಅವರಿಗೆ ನೀಡಿದ ವೇತನದಷ್ಟು ಕೂಡಾ ಹಣ ನಮಗೆ ದೊರೆಯದಿದ್ದರೆ ನಾವು ವಾಹನಗಳ ಬ್ಯಾಂಕ್ ಲೋನ್ ಪಾವತಿಸುವುದಾದರೂ ಎಲ್ಲಿಂದ ..? ಈ ಹಿಂದೆ ತಿಳಿಸಿದ್ದ 2,800ರೂ. ಆದ್ರೂ ನೀಡಲಿ. ಅದರಲ್ಲೂ ಕಿ.ಮೀ. ಲೆಕ್ಕ ಹಾಕಿ ಹೋದಲ್ಲಿ ವಾಹನ ಚಾಲಕರಿಗೆ ನಷ್ಟವಾಗುತ್ತದೆ. ಕೂಡಲೇ ಅಧಿಕಾರಿಗಳು ಖಾಸಗಿ ವಾಹನ ಚಾಲಕರಿಗೆ ನಷ್ಟವಾಗದಂತೆ ಬಾಕಿಯಿರಿಸಿರುವ ಬಾಡಿಗೆಯನ್ನು ಪಾವತಿಸಬೇಕೆಂದು ಖಾಸಗಿ ವಾಹನ ಚಾಲಕರು ವಿನಂತಿಸಿಕೊಂಡಿದ್ದಾರೆ.

click me!