ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ: ಸಚಿವ ಸಂತೋಷ್‌ ಲಾಡ್ ಸೂಚನೆ

By Govindaraj SFirst Published Jan 25, 2024, 8:24 PM IST
Highlights

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರ ವಿದ್ಯುತ್ ಸಂಬಂಧಿಸಿದ ಅಹವಾಲುಗಳಿಗೆ ತಕ್ಷಣವೇ ಸ್ಪಂಧಿಸುವಂತೆ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
 

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜ.25): ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರ ವಿದ್ಯುತ್ ಸಂಬಂಧಿಸಿದ ಅಹವಾಲುಗಳಿಗೆ ತಕ್ಷಣವೇ ಸ್ಪಂಧಿಸುವಂತೆ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ವಿದ್ಯುತ್ ಸರಬರಾಜು ಸ್ಥಿತಿಗತಿ ಕುರಿತು ಹೆಸ್ಕಾಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.    ಜಿಲ್ಲೆಯಲ್ಲಿ ಟ್ರಾನ್ಸಫಾರ್ಮರ್‍ಗಳು ಸುಟ್ಟಾಗ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳತಕ್ಕದ್ದು. ರೈತರು ಅಹವಾಲು ಸಲ್ಲಿಸಲು 1912 ಟೋಲ್ ಫ್ರೀ ದೂರವಾಣಿಗೆ ಬರುವ ಅಹವಾಲುಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣವೇ ಸ್ಪಂಧಿಸುವಂತೆ ತಿಳಿಸಿದರು. 

Latest Videos

ಟ್ರಾನ್ಸಫಾರ್ಮರ್‍ಗಳು ಸುಟ್ಟ ತಕ್ಷಣವೇ ರೈತರೇ ಫೋನ್ ಮಾಡಿ ತಿಳಿಸುವುದಕ್ಕಿಂತ ಮುಂಚೆಯೇ ಹೆಸ್ಕಾಂ ಇಲಾಖೆಗೆ ನೇರವಾಗಿ ತಿಳಿಯುವಂತೆ ತಂತ್ರಜ್ಞಾನವನ್ನು ರೂಪಿಸುವಂತೆ ಸೂಚಿಸಿದರು. ಅಕ್ರಮ-ಸಕ್ರಮ ಪಂಪ್‍ಸೆಟ್ ಯೋಜನೆಯಡಿ ಟ್ರಾನ್ಸಫಾರ್ಮರ್‍ನಿಂದ 500 ಮೀ ಅಂತರದೊಳಗಿರುವ ಪಂಪ್‍ಸೆಟ್ ಮಾಲಿಕರು ರೂ.10 ಸಾವಿರ ತುಂಬಿದವರಿಗೆ ಸಕ್ರಮ ಮಾಡುವ ಯೋಜನೆಯ ಲಾಭ ರೈತರಿಗೆ ದೊರೆಯಲಿದೆ. 500 ಮೀ ಅಂತರ ಮೇಲ್ಪಟವರಿಗೆ ಸೋಲಾರ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು 8 ರಿಂದ 10 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆಂದು ಸಚಿವರು ತಿಳಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಅಟ್ಟಹಾಸ: ಕಾಡಾನೆ ತುಳಿತಕ್ಕೆ ಮತ್ತೊಬ್ಬ ರೈತ ಬಲಿ!

ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಹೆಸ್ಕಾಂ ಅಧಿಕಾರಿಗಳು ದಶಕಗಳ ಮುಂದಾಲೋಚನೆ ಇಟ್ಟುಕೊಂಡು ತಾಂತ್ರಿಕತೆಯನ್ನು ಬಳಸಬೇಕು. ವಿದ್ಯುತ್ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ತಾಂತ್ರಿಕ ಸಿಬ್ಬಂದಿಗಳು 24*7 ಸಿದ್ದರಿರಬೇಕೆಂದು ಅವರು ಸೂಚಿಸಿದರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಶನ್ ಅವರು ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಹುಬ್ಬಳ್ಳಿ ವಿಭಾಗವು ಅನೇಕ ರೀತಿಯಲ್ಲಿ ಚೇತರಿಸಿಕೊಂಡು ಅಭಿವೃದ್ಧಿಯ ಹಾದಿಯಲ್ಲಿದೆಯೆಂದು ತಿಳಿಸಿದರು. 

ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಒಳಚರಂಡಿ ಕಾಮಗಾರಿ, ಸ್ಮಾರ್ಟಸಿಟಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಬಿ.ಆರ್.ಟಿ.ಎಸ್ ವಿಭಾಗಗಳಿಂದ ಉಂಟಾಗುವ ವಿದ್ಯುತ್ ಸಂಬಂಧಿತ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ 18 ಸ್ಥಳಗಳಲ್ಲಿ ಲೋಪ ಕಂಡುಬಂದಿದ್ದು ರಿಪೇರಿ ಕಾರ್ಯ ಪ್ರಗತಿಯಲ್ಲಿದೆ ಎಂದರು.ಧಾರವಾಡದ ಜಿಲ್ಲಾಡಳಿತ, ಕೆಸಿಡಿ ಸುತ್ತಲಿನ ವ್ಯಾಪ್ತಿಯಲ್ಲಿ ಈಗಿರುವ 33 ಕೆವಿ ಸ್ಟೇಶನ್ ಲೋಡ್ ಹೆಚ್ಚಾಗಿದ್ದು 110 ಕೆ.ವಿ.ಸ್ಟೇಶನ್ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ಭೂಮಿ ನೀಡಿದ್ದು ಆಧುನಿಕ ತಂತ್ರಜ್ಞಾನದ ಸ್ಟೇಶನ್ ನಿರ್ಮಾಣ ಕುರಿತು ಯೋಚಿಸಲಾಗುತ್ತಿದೆ. 

ಸತ್ತ ಮೇಲು ಹೂಳಕ್ಕೂ ಜಾತಿ ಬೇಕಾ?: ಸಚಿವ ಕೃಷ್ಣ ಭೈರೇಗೌಡ

ಅವಳಿ ನಗರಳ ಕೆಲ ಲೇಔಟ್‍ಗಳಲ್ಲಿ ಎಲ್.ಟಿ ಮಾರ್ಗಗಳಲ್ಲಿ ಕೆಲವೆಡೆ ಲೋಪ ಕಂಡು ಬಂದಿದ್ದು ಸರ್ವೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದೆಂದರು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸಂಬಂಧಿಸಿದ ಮುಂಜಾಗ್ರತಾ ನಿರ್ವಹಣಾ ರೀಪೇರಿ ಕಾಮಗಾರಿಗಳನ್ನು 8 ಕೋಟಿರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ, ಸ್ಥಳೀಯ  ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದರು ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಹೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

click me!