ಚಿಕ್ಕಮಗಳೂರು ತಾಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

By Suvarna NewsFirst Published Jan 24, 2024, 8:17 PM IST
Highlights

ಚಿಕ್ಕಮಗಳೂರು  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ, ಪ್ರತೀ ಕೊಠಡಿಯನ್ನೂ ವೀಕ್ಷಣೆ ಮಾಡಿ ತಾಲೂಕು ಆಡಳಿತದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.  

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್     

ಚಿಕ್ಕಮಗಳೂರು (ಜ.24): ಚಿಕ್ಕಮಗಳೂರು  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ಇಂದು ಬೆಳಗ್ಗೆ ಚಿಕ್ಕಮಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ, ಪ್ರತೀ ಕೊಠಡಿಯನ್ನೂ ವೀಕ್ಷಣೆ ಮಾಡಿ ತಾಲೂಕು ಆಡಳಿತದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.  ಚಿಕ್ಕಮಗಳೂರು ತಾಲೂಕು ಕಚೇರಿಗೆ ಇಂದು  ಬೆಳಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಆಗಮಿಸುತ್ತಿದ್ದಂತೆ ಕಚೇರಿಯ ಸಿಬ್ಬಂದಿಗಳಿಗೆ ಸರ್ಪ್ರೈಸ್ ಕಾದಿತ್ತು. 

ಬೆಳ್ಳಂಬೆಳಗ್ಗೆ ಕಚೇರಿ ಆರಂಭ ವಾಗುತ್ತಿದ್ದಂತೆ ದಿಢೀರ್ ಭೇಟಿ ನೀಡಿದವರೇ. ಮೊದಲು ಅರ್ಜಿ ಸ್ವೀಕಾರ ಕೇಂದ್ರಕ್ಕೆ ತೆರಳಿ ಅಲ್ಲಿನ ವ್ಯವಸ್ಥೆ ಬಗ್ಗೆ ಸಿಬ್ಬಂದಿಗಳಿಗೆ ಪ್ರಶ್ನಿಸಿದರು. ನಂತರ ರೆಕಾರ್ಡ್ ರೂಂ ಗೆ ತೆರಳಿ ಕಂದಾಯ ಇಲಾಖೆ ಕಡತಗಳ ಡಿಜಿಟಲೀಕರಣದ ನಡೆಯುತ್ತಿರುವುದನ್ನು ಪರಿಶೀಲಿಸಿದರು. ನಂತರ ಭೂಮಿ ಕೇಂದ್ರ, ಆಹಾರ ಶಾಖೆ, ಸಾಂಖ್ಯಿಕ ಶಾಖೆ, ಚುನಾವಣಾ ಶಾಖೆ, ಆರ್.ಆರ್.ಟಿ ಶಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಾಖೆ, ಸರ್ವೇ ವಿಭಾಗ ಸೇರಿದಂತೆ ಪ್ರತಿ ಕೊಠಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಯಚೂರಿನ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ಸಿಗುತ್ತೆ ನಿಗಮ ಮಂಡಳಿ ಭಾಗ್ಯ!

ತಹಶೀಲ್ದಾರ್ ಸುಮಂತ್ ಗೆ ಖಡಕ್ ಸೂಚನೆ : 
ನಗರದ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಉಸುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ತಾಲೂಕು ಕಚೇರಿಯ ಎಲ್ಲ ಕೊಠಡಿಗಳಲ್ಲೂ ಇರುವ ನಿರುಪಯುಕ್ತ ವಸ್ತುಗಳನ್ನು ಕೂಡಲೇ ತೆರವುಗೊಳಿಸಿ ಕೊಠಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಬೇರೆ ಬೇರೆ ವಿಭಾಗದ ಕಚೇರಿಗೆ ಅವಕಾಶ ಕಲ್ಪಿಸಿಕೊಡಬೇಕು. ಮುಂದಿನ ಬಾರಿ ಭೇಟಿ ನೀಡುವುದರ ಒಳಗಾಗಿ ಎಲ್ಲ ಕೊಠಡಿಗಳೂ ಅಚ್ಚುಕಟ್ಟಾಗಿರಬೇಕು ಎಂದು ತಹಶೀಲ್ದಾರ್ ಸುಮಂತ್ ಗೆ ಖಡಕ್ ಸೂಚನೆ ನೀಡಿದರು.

ಚಿಕ್ಕಮಗಳೂರು ತಾಲೂ ಕಚೇರಿಗೆ ದಿಢೀರ್ ಭೇಟಿ ನೀಡಿದ ಕಟಾರಿಯಾ ಅವರು ಆರ್.ಆರ್.ಟಿ ಶಾಖೆಯೊಳಗೆ ಹೋಗುತ್ತಿದ್ದಂತೆ ಟೇಬಲ್ ಮೇಲಿದ್ದ ಫೈಲ್ ಗಳನ್ನು ಕಂಡು ಕೆಂಡಾ ಮಂಡಲವಾಗಿ, ಪ್ರತಿನಿತ್ಯ ಅಂದಿನ ಕಡತಗಳನ್ನು ಅಂದೇ ಕಂಪ್ಯೂಟರ್ನಲ್ಲಿ ನೋಂದಾಯಿಸಿ ಡೈಲಿ ರಿಪೋರ್ಟ್ ತೆಗೆದು ಕಡತಗಳನ್ನು ವಿಲೇವಾರಿ ಮಾಡಬೇಕು. ಹದಿನೈದು ದಿನಬಿಟ್ಟು ಮತ್ತೆ ಬರುತ್ತೇನೆ. ಅವತ್ತೂ ಕೂಡಾ ಇದೇ ರೀತಿ ಟೇಬಲ್ ಮೇಲೆ ಕಡತಗಳಿದ್ದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸಬ್ ರಿಜಿಸ್ಟ್ರಾರ್ ಕಛೇರಿ ಸ್ಥಳಾಂತರಕ್ಕೆ ಗಡುವು : 
ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಮೊದಲನೆ ಮಹಡಿ ಹಾಗೂ ಎರ್ಡನೇ ಮಹಡಿಗಳಲ್ಲಿ ಸಾಕಷ್ಟು ಕೊಠಡಿಗಳು ಖಾಲಿಯಿದ್ದರೂ ಕೂಡಾ ಸಬ್ ರಿಜಿಸ್ಟ್ರಾರ್ ಕೊಠಡಿ ಬಾಡಿಗೆ ಕೊಠಡಿಯಲ್ಲೇ ಇದೆ ಕೂಡಲೇ ಖಾಲಿ ಇರುವ ಹಾಗೂ ನಿರುಪಯುಕ್ತ ವಸ್ತುಗಳನ್ನು ತುಂಬಿರುವ ಕೊಠಡಿಗಳಿಗೆ ನೆಲ ಮಹಡಿಯಲ್ಲಿನ ಹೆಚ್ಚು ಜನ ಬಾರದ ಯಾವುದಾದರೂ ಕಚೇರಿಯನ್ನು ಸ್ಥಳಾಂತರ ಮಾಡಿ ಕೂಡಲೇ ಉಪನೋಂದಣಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಬೇಕು ಅದರೊಂದಿಗೆ ದಲ್ಲಾಳಿಗಳಿಗೆ ಕಡಿವಾಣ ಹಾಕು ಎಂದು ತಹಶೀಲ್ದಾರ್ ಸುಮಂತ್ ಗೆ ವಾರ್ನಿಂಗ್ ಕೊಟ್ಟರು.

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕ ಮೂರು ಸಿಟಿ ಸಂಚರಿಸಿ ಹೈದರಾಬಾದ್‌ನಲ್ಲಿ ಪತ್ತೆ!

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡತಗಳ ಡಿಜಿಟಲೀಕರಣ ಕಾರ್ಯ ಈಗಾಗಲೇ ಆರಂಭವಾಗಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿಯೂ ಜಿಲ್ಲೆಗೊಂದರಂತೆ ಕೇಂದ್ರ ಸ್ಥಾಪಿಸಿ ಕಡತಗಳನ್ನು ಸ್ಕಾನ್ ಮಾಡಿ ಡಿಜಿಟಲ್ ವಾಲೆಟ್ ನಲ್ಲಿ ಇಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!