SSLC ಪರೀಕ್ಷೆ: ಮೇಲ್ವಿಚಾರಕರ ಯಡವಟ್ಟು, ಪ್ರಶ್ನೆ ಪತ್ರಿಕೆ ಅದಲು ಬದಲು

By Kannadaprabha NewsFirst Published Jul 2, 2020, 11:41 AM IST
Highlights

ಹೆಚ್ಚುವರಿ ಸಮಯ ನೀಡಿ ಲೋಪ ಸರಿಪಡಿಸಿದ ಮೇಲ್ವಿಚಾರಕರು| ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಅದಲು ಬದಲು ನೀಡಿ ಯಡವಟ್ಟು ಮಾಡಿಕೊಂಡ ಅಧಿಕಾರಿಗಳು| ಈ ಕುರಿತು ಬಿಇಒ ತನಿಖೆ ಆರಂಭ, ಬಿಇಒ ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ: ತಹಸೀಲ್ದಾರ್‌ ಮೋಹನಕುಮಾರಿ|

ವಿಜಯಪುರ(ಜು.02): ಕೊರೋನಾತಂಕದ ಮಧ್ಯೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಅದಲು ಬದಲು ನೀಡಿ ಯಡವಟ್ಟು ಮಾಡಿಕೊಂಡ ಪ್ರಸಂಗ ಬುಧವಾರ ನಗರದ ದರಬಾರ ಹೈಸ್ಕೂಲ್‌ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಪರೀಕ್ಷೆಗೆ ಹಾಜರಾಗಿದ್ದ ಹಳೆ ವಿದ್ಯಾರ್ಥಿಗಳಿಗೆ ಎ ವರ್ಷನ್‌ ಪ್ರಶ್ನೆ ಪತ್ರಿಕೆ ನೀಡಬೇಕಾಗಿತ್ತು. ಆದರೆ ಮೇಲ್ವಿಚಾರಕರು, ಬಿ ವರ್ಷನ್‌ ಪ್ರಶ್ನೆ ಪತ್ರಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಈ ಲೋಪ ಸರಿಪಡಿಸಲು ಪರೀಕ್ಷಾರ್ಥಿಗಳಿಗೆ ಹೆಚ್ಚುವರಿ ಸಮಯ ನೀಡಿ ಉತ್ತರ ಪತ್ರಿಕೆಗಳನ್ನು ಬರೆಸಿದ್ದಾರೆ.ಆದರೆ ಪರೀಕ್ಷಾ ಅವಧಿ ಮುಗಿದು ನಾಲ್ಕು ಗಂಟೆಗಳು ಕಳೆದರೂ ಪರೀಕ್ಷಾ ಸಿಬ್ಬಂದಿ ಉತ್ತರ ಪತ್ರಿಕೆ ಕಳುಹಿಸದೇ ಮತ್ತೆ ಪರೀಕ್ಷೆ ಬರೆಸಿದ್ದು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟು ನಡೆದ ವಿಚಾರ ತಿಳಿದ ತಕ್ಷಣ ಬಿಇಒ ಶರೀಫ್‌ ನದಾಫ್‌, ತಹಶೀಲ್ದಾರ ಮೋಹನಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅಧಿಕಾರಿಗಳ ಭೇಟಿ ಬಳಿಕ ಉತ್ತರ ಪತ್ರಿಕೆಗಳನ್ನು ವಾಹನದಲ್ಲಿ ರವಾನಿಸಲಾಗಿದೆ.

ಆಲಮಟ್ಟಿ: ACB ದಾಳಿ, ಲಂಚ ಸಮೇತ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿ

ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಬಿಇಒ ತನಿಖೆ ನಡೆಸುತ್ತಿದ್ದಾರೆ. ಬಿಇಒ ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಮೋಹನಕುಮಾರಿ ತಿಳಿಸಿದ್ದಾರೆ.

ಹಳೆ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವರ್ಷನ್‌ ಅದಲು ಬದಲಾಗಿತ್ತು. ವಿಷಯ ಗೊತ್ತದ ತಕ್ಷಣ ಹೆಚ್ವುವರಿ ಸಮಯ ನೀಡಿ ಪರೀಕ್ಷೆ ಬರೆಸಿದ್ದೇವೆ. ಎಲ್ಲವೂ ಸರಿಪಡಿಸಲಾಗಿದೆ ಎಂದು ಡಿಡಿಪಿಐ ಸಿ. ಪ್ರಸನ್ನಕುಮಾರ ತಿಳಿಸಿದ್ದಾರೆ.

click me!