Omicron Variant: ಜನ ದಟ್ಟಣೆ ಪ್ರದೇಶಗಳಲ್ಲಿ ಒಮಿಕ್ರಾನ್‌ ಬಗ್ಗೆ ಜಾಗೃತಿ

By Kannadaprabha NewsFirst Published Dec 5, 2021, 6:32 AM IST
Highlights
  • ರಾಜ್ಯಕ್ಕೆ ವ್ಯಾಪಿಸಿರುವ ಕೊರೋನಾ ರೂಪಾಂತರ ತಳಿ ಒಮಿಕ್ರಾನ್‌ನ್‌ ವೈರಸ್‌ 
  • ಅಧಿಕಾರಿಗಳ ತಂಡ ಸಂಚರಿಸಿ ಅರಿವು ಮೂಡಿಸಿದರು.

ಚಿಕ್ಕಬಳ್ಳಾಪುರ (ಡಿ.05):  ರಾಜ್ಯಕ್ಕೆ ವ್ಯಾಪಿಸಿರುವ ಕೊರೋನಾ (Corona) ರೂಪಾಂತರ ತಳಿ ಒಮಿಕ್ರಾನ್‌ನ್‌ ವೈರಸ್‌ ಬಗ್ಗೆ ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಶನಿವಾರ ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದರೆಡ್ಡಿ, ಆಯುಕ್ತ ಮಹಾಂತೇಶ್‌ ಹಾಗೂ ತಹಶೀಲ್ದಾರ್‌ ಗಣಪತಿಶಾಸ್ತ್ರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಂಚರಿಸಿ ಅರಿವು ಮೂಡಿಸಿದರು. ಕೋವಿಡ್‌ (Covid)  ಮೂರನೇ ಅಲೆ ಆತಂಕ ನಡುವೆಯೆ ಒಮಿಕ್ರಾನ್‌ನ್‌ ವೈರಸ್‌ ರಾಜ್ಯದಲ್ಲಿ ಪತ್ತೆ ಆಗಿರುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು, ಈ ಮೊದಲಿನಿಂದ ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಯನ್ನು ಜನ ಮರೆಯದೇ ಪಾಲಿಸಬೇಕೆಂದು ನಗರಸಭೆ ಅಧ್ಯಕ್ಷ ಆನಂದರೆಡ್ಡಿ ನಗರದ ಜನತೆಯಲ್ಲಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರ (Chikkaballapura) ನಗರಕ್ಕೆ ಅತ್ಯಂತ ಸಮೀಪದಲ್ಲಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸನಿಹದಲ್ಲಿದೆ. ಇತಂಹ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರದ ಜನತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು, ಒಮಿಕ್ರಾನ್‌ನ್‌ ವೈರಸ್‌ ತಡೆಗೆ ರಾಜ್ಯ ಸರ್ಕಾರ ರೂಪಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸುವ ಮೂಲಕ ನಗರಸಭೆಯೊಂದಿಗೆ ಕೈ ಜೋಡಿಸಬೇಕೆಂದ ಅವರು, ಅನವಶ್ಯಕವಾಗಿ ಜನ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಬಾರದು. ಮಾಸ್ಕ್‌ ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ದಿನಸಿ ಅಂಗಡಿ ಸೇರಿದಂತೆ ವಾಣಿಜ್ಯ ಅಂಗಡಿ ಮಾಲೀಕರು ಗ್ರಾಹಕರ ಆರೋಗ್ಯದ ಸುರಕ್ಷತೆ ಬಗ್ಗೆ ಗಮನ ಹರಿಸಿ ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕೆಂದ ತಹಶೀಲ್ದಾರ್‌ ಗಣಪತಿಶಾಸ್ತ್ರೀ ಹಾಗೂ ನಗರಸಭೆ ಆಯುಕ್ತ ಮಹಾಂತೇಶ್‌ ನಗರದ ಜನತೆಗೆ ಮನವಿ ಮಾಡಿದರು.

ದಂಡ ಹಾಕಲು ಸೂಚನೆ:  ಯಾರೇ ಕಾನೂನು ಮೀರಿ ಮಾಸ್ಕ್‌ ಧರಿಸದೇ ಹೋದರೆ ಅಥವ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋದರೆ ಸರ್ಕಾರದ ಸೂಚನೆಯಂತೆ ದಂಡ ವಿಧಿಸುವಂತೆ ನಗರಸಭೆ ನೇಮಿಸಿರುವ ಮಾರ್ಷಲ್‌ಗಳಿಗೆ ಆಯುಕ್ತರು ಸೂಚಿಸಿದರು. ಪ್ರತಿ ದಿನ ಮಾರ್ಷಲ್‌ಗಳು ನಗರದ ಜನದಟ್ಟಣೆ ಪ್ರದೇಶಗಳಲ್ಲಿ ವೀಕ್ಷಣೆ ಮಾಡಲಿದ್ದು ನಗರದ ಜನತೆ ಸಹಕರಿಸಬೇಕೆಂದ ಅವರು, ಮಹಾಮಾರಿ ಒಮಿಕ್ರಾನ್‌ನ್‌ ಹರಡದಂತೆ ನಗರದ ಜನತೆ ಸಹಕರಿಸಬೇಕು, ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕೆಂದು ಮನವಿ ಮಾಡಿ ನಗರದ ವಿವಿಧಡೆಗಳಲ್ಲಿ ಸಂಚರಿಸಿ ಜನತೆಗೆ ಅರಿವು ಮೂಡಿಸಲಾಯಿತು.

ಒಂದೇ ದಿನ  89 ಸಾವಿರ ಲಸಿಕೆ : 

ಒಮಿಕ್ರೋನ್‌(Omicron) ವೈರಾಣು ಪತ್ತೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು, ಶನಿವಾರ ಬರೋಬ್ಬರಿ 89 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ನಗರದ ಕೆ.ಆರ್‌.ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಸಿಂಗಸಂದ್ರ, ಅಮೃತಹಳ್ಳಿ, ಬೇಗುರು, ಮಲ್ಲತ್ತಹಳ್ಳಿ, ಕೆ.ಎಸ್‌.ಲೇಔಟ್‌, ತಣಿಸಂದ್ರ, ಪುಟ್ಟೇನಹಳ್ಳಿ, ಕೋಣನಕುಂಟೆ, ಉಲ್ಲಾಳು, ರಾಜಾಜಿನಗರ, ಲಗ್ಗೆರೆ, ಮಹಮ್ಮದ್‌ಸಾಬ್‌ ಪಾಳ್ಯ, ಗೊಟ್ಟಿಗೆರೆ ಸರ್ಕಾರಿ ಶಾಲೆ, ಮಹಾಲಕ್ಷ್ಮಿ ಲೇಔಟ್‌, ರಾಜ್‌ಗೋಪಾಲ ನಗರ, ಕಾಮಾಕ್ಷಿಪಾಳ್ಯ, ದೊಡ್ಡಕನಹಳ್ಳಿ ಸರ್ಕಾರಿ ಶಾಲೆ, ಕಾಡುಗೋಡಿ ನ್ಯೂ ಬಿಬಿಎಂಪಿ ಕಚೇರಿ, ಹೊಂಗಸಂದ್ರ ಸರ್ಕಾರಿ ಶಾಲೆ, ಕೊತ್ತನೂರು ನಾರಾಯಣಪುರ, ಮನ್ವರ್ತಪೇಟೆ ಸೇರಿದಂತೆ ವಿವಿಧ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 400ಕ್ಕಿಂತ ಹೆಚ್ಚು ಡೋಸ್‌ಗಳನ್ನು ವಿತರಿಸಲಾಗಿದೆ.

ಒಮಿಕ್ರೋನ್‌ ವೈರಾಣು ಭೀತಿಯಿಂದ ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿರುವ ಜನರು ಲಸಿಕೆಗಾಗಿ(Vaccine) ಮುಗಿಬಿದ್ದಿದ್ದಾರೆ. ಶನಿವಾರ ಒಂದೇ ದಿನ 89,440 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ 1,43,14,925 ಡೋಸ್‌ ಲಸಿಕೆ ನೀಡಲಾಗಿದ್ದು, 81,62,614 ಮೊದಲ ಡೋಸ್‌, 61,52,311 ದ್ವಿತೀಯ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

click me!