ಒಡಿಶಾ ದುರ್ಘಟನೆ: ನಮಗೆ ಸನ್ಮಾನ ಬೇಡವೆಂದ ಖಂಡ್ರೆ, ರಹೀಂ ಖಾನ್

By Kannadaprabha NewsFirst Published Jun 4, 2023, 6:21 AM IST
Highlights

ರೈಲು ದುರಂತದಿಂದ ದೇಶ ಶೋಕ ಸಾಗರದಲ್ಲಿ ಇದ್ದಾಗ ನಮಗೆ ಸನ್ಮಾನ, ಸಂತಸ, ಮೆರವಣಿಗೆ ಬೇಡ, ನಾವೂ ಸಂತ್ರಸ್ತರ ದುಃಖದಲ್ಲಿ ಒಂದಾಗುತ್ತೇವೆಂದು ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌ ಹೇಳಿದರು.

ಬೀದರ್‌ (ಜೂ.4) : ರೈಲು ದುರಂತದಿಂದ ದೇಶ ಶೋಕ ಸಾಗರದಲ್ಲಿ ಇದ್ದಾಗ ನಮಗೆ ಸನ್ಮಾನ, ಸಂತಸ, ಮೆರವಣಿಗೆ ಬೇಡ, ನಾವೂ ಸಂತ್ರಸ್ತರ ದುಃಖದಲ್ಲಿ ಒಂದಾಗುತ್ತೇವೆಂದು ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌ ಹೇಳಿದರು.

ಜಿಲ್ಲೆಯ ಇಬ್ಬರು ನೂತನ ಸಚಿವರು ಪ್ರಥಮ ಬಾರಿಗೆ ಸಚಿವರಾಗಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭವ್ಯ ಸ್ವಾಗತ ಕೋರಲು ಶನಿವಾರ ಆಯೋಜಿಸಿದ್ದ ಅದ್ಧೂರಿ ಸ್ವಾಗತಕ್ಕೆ ಅನೇಕ ದೊಡ್ಡ ಹಾಗೂ ಸಾವಿರಾರು ಕಟೌಟ್‌ಗಳು ನಗರಾದ್ಯಂತ ರಾರಾಜಿಸುತ್ತಿದ್ದವು.

ಬೆಂಗಳೂರಿನಿಂದ ಹೈದ್ರಾಬಾದ್‌ಗೆ ಆಗಮಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ಅವರು ಸನ್ಮಾನ ಒಲ್ಲೆ ಎಂದು ಬೀದರ್‌ ಸಮೀಪಕ್ಕೆ ಬಂದು ಮರಳಿ ಮಾನವೀಯತೆ ಮೆರೆದಿದ್ದಾರೆ.

ಅರಣ್ಯ ಒತ್ತುವರಿ ತೆರವಿಗೆ ಚಿಂತನೆ: ಸಿದ್ಧಗಂಗಾ ಮಠಕ್ಕೆ ಸಚಿವ ಈಶ್ವರ ಖಂಡ್ರೆ

ಅಭಿನಂದನಾ ಸಮಾರಂಭ ಹಾಗೂ ನಗರದಲ್ಲಿ ಮೆರವಣಿಗೆಗಾಗಿ ವಿವಿಧ ಕಲಾವಿದರು, ವಿವಿಧ ವಾದ್ಯಗಳಾದ ಬಾಜಾ, ಭಜಂತ್ರಿ, ವಾಹನ, ಭವ್ಯವಾದ ಹೂ ಮಾಲೆ ಹೀಗೆ ವಿವಿಧ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು.

ಜಿಲ್ಲಾ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ಮುಖಂಡರಿಂ¨ ಲಕ್ಷಾಂತರ ರು. ಖರ್ಚು ಮಾಡಿ ಬೀದರ್‌ ನಗರದಲ್ಲಿ ಪಕ್ಷದ ಧ್ವಜ ಹಾಗೂ ಕಟೌಟ್‌ ಹಾಕುವ ಮೂಲಕ ಶೃಂಗಾರ ಮಾಡಲಾಗಿತ್ತು. ಗಣೇಶ ಮೈದಾನದಲ್ಲಿ ಲಕ್ಷಾಂತರ ವೆಚ್ಚದಲ್ಲಿ ಬೃಹತ್‌ ವೇದಿಕೆ ಕೂಡ ತಯಾರಾಗಿತ್ತು. ಆದರೆ ಎಲ್ಲಕ್ಕೂ ಮುಖ್ಯ ಮಾನವೀಯತೆ ಎಂದು ತಿಳಿದು ಇಬ್ಬರು ಸಚಿವರು ನಯವಾಗಿ ನಿರಾಕರಿಸಿದ್ದಾರೆ.

ಹೈದ್ರಾಬಾದ್‌ ರಸ್ತೆಯ ಮೂಲಕ ಇಬ್ಬರು ಸಚಿವರು ಬರಲಿದ್ದಾರೆ ಎಂದು ತಿಳಿದು ನೂರಾರು ಕಾಂಗ್ರೆಸ್‌ ಮುಖಂಡರು ಹೈದ್ರಾಬಾದ್‌ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಸ್ವಾಗತಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಸಚಿವರು ಸಂಜೆಯವರೆಗೆ ಹೈದ್ರಾಬಾದ್‌ನಲ್ಲಿಯೇ ಇದ್ದು ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ ಎನ್ನಲಾಗಿದೆ.

ಎಂಎಲ್‌ಸಿ ಕಚೇರಿಯಲ್ಲಿ ಮೌನಾಚರಣೆ:

ಅಭಿನಂದನಾ ಕಾರ್ಯಕ್ರಮದ ಸಂಯೋಜಕರು ಹಾಗೂ ಎಂಎಲ್‌ಸಿ ಅರವಿಂದ ಅರಳಿ ಅವರು ತಮ್ಮ ಕಚೇರಿಯಲ್ಲಿ ಮುಖಂಡರ ಸಭೆ ಕರೆದು ಒಡಿಶಾ ರೈಲು ದುರಂತದಲ್ಲಿ ನೂರಾರು ಜನರು ಮೃತಪಟ್ಟಿದ್ದು, ಸುಮಾರು ಜನರು ಗಾಯಗೊಂಡಿದ್ದಾರೆ. ಇದೊಂದು ರಾಷ್ಟಿ್ರಯ ದುರಂತ, ಮೃತರ ಆತ್ಮಕ್ಕೆ ಶಾಂತಿಕೊಡಲಿ. ಬೀದರ್‌ನಲ್ಲಿ ನಡೆಯಬೇಕಿದ್ದ ರಾಜ್ಯದ ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌ ಅವರ ಸನ್ಮಾನ ಸಮಾರಂಭ ಕಾರ್ಯಕ್ರಮ ತಾತ್ಕಾಲಿಕವಾಗಿ ಮೂಂದೂಡಲಾಗಿದೆ.

ಇದೇ ಸಂದರ್ಭದಲ್ಲಿ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ 1 ನಿಮಿಷ ಮೌನಚಾರಣೆ ಮಾಡಲಾಯಿತು. ಅವರ ಕುಟುಂಬಕ್ಕೆ ಆ ದೇವರು ದುಃಖ ಸಹಿಸಿಕೊಳ್ಳಲು ಶಕ್ತಿ ನೀಡಲೆಂದು ಪ್ರಾರ್ಥಿಸಲಾಯಿತು.

ಬಿಜೆಪಿ ಸರ್ಕಾರದ ಅರಣ್ಯ ಅಕ್ರಮ ತನಿಖೆ: ಸಚಿವ ಈಶ್ವರ ಖಂಡ್ರೆ

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಮೃತರಾವ ಚಿಮಕೊಡೆ, ಹಿರಿಯ ಪತ್ರಕರ್ತರಾದ ಶಿವಶರಣಪ್ಪಾ ವಾಲಿ, ಆನಂದ ದೇವಪ್ಪಾ, ಎಂ.ಎ. ಸಮೀ, ದತ್ತಾತ್ರಿ ಮೂಲಗೆ, ಸಿದ್ರಾಮಯ್ಯಾ ಸ್ವಾಮಿ, ಪರವೇಜ್‌ ಕಮಾಲ್‌, ಬಸವರಾಜ ಭತಮುರ್ಗೆ, ಬಬಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

click me!