'ಅಂತರ್ಜಾಲ ಬಳಕೆಗೆ ಅಗತ್ಯ ಸಲಹೆ, ಮಾರ್ಗದರ್ಶನ ಅತ್ಯವಶ್ಯಕ'

Published : Jun 19, 2021, 11:02 PM IST
'ಅಂತರ್ಜಾಲ ಬಳಕೆಗೆ ಅಗತ್ಯ ಸಲಹೆ, ಮಾರ್ಗದರ್ಶನ ಅತ್ಯವಶ್ಯಕ'

ಸಾರಾಂಶ

* ಅಂತರ್ಜಾಲ ಬಳಕೆಗೆ ಅಗತ್ಯ ಸಲಹೆ, ಮಾರ್ಗದರ್ಶನ ಅತ್ಯವಶ್ಯಕ * ವೃತ್ತಿ ಅಭಿವೃದ್ಧಿಗಾಗಿ ಮುಕ್ತ ಶಿಕ್ಷಣ ಸಂಪನ್ಮೂಲಗಳ ಪಾತ್ರ ಕುರಿತಾದ ರಾಷ್ಟ್ರೀಯ ವೆಬಿನಾರ್‌ನಲ್ಲಿ ಗ್ರಂಥಪಾಲಕ ಅರುಣ ಅಡ್ರಕಟ್ಟಿ ಸಲಹೆ *  ಒಡಿಶಾದ ಬೆರ್ಹಾಂಪುರನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ಅಸಿಸಂಟ್ ಲೈಬ್ರರಿಯನ್ ಅರುಣ ಅಡ್ರಕಟ್ಟಿ  

 ಬೆಳಗಾವಿ, (ಜೂನ್.19): ಈಗಾಗಲೇ ಮುಕ್ತಶಿಕ್ಷಣದ ಮೂಲಕ ಉನ್ನತ ಶಿಕ್ಷಣ ಮುಂದುವರಿಸುವ ಎಲ್ಲ ಅವಕಾಶಗಳಿದ್ದು, ಆಳ ಜ್ಞಾನ, ಶೋಧನೆ ಹಾಗೂ ಸಂಗ್ರಹಕ್ಕೆ ಪಠ್ಯಕ್ರಮಕ್ಕೆ ಪೂರಕವಾದ ಮಾಹಿತಿ ಹಾಗೂ ವಿವರಗಳನ್ನು ಪಡೆಯಲು ಅನೇಕ ಮುಕ್ತ ಪಠ್ಯಕ್ರಮಗಳು ಅಂತರ್ಜಾಲದಲ್ಲಿ ಲಭ್ಯವಿದೆ. ಅವುಗಳ ಬಳಕೆಯನ್ನು ಸಾಮಾನ್ಯ ಜ್ಞಾನದಿಂದ ಮುಕ್ತವಾಗಿ ಬಳಸಿಕೊಳ್ಳಬೇಕು ಎಂದು ಒಡಿಶಾದ ಬೆರ್ಹಾಂಪುರನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ಅಸಿಸಂಟ್ ಲೈಬ್ರರಿಯನ್ ಅರುಣ ಅಡ್ರಕಟ್ಟಿ ಹೇಳಿದರು.

ನಿಪ್ಪಾಣಿಯ ಕೆಎಲ್‌ಇ ಸಂಸ್ಥೆಯ ಜಿ.ಇ.ಬಾಗೇವಾಡಿ ಆರ್ಟ್ಸ್, ಸೈನ್ಸ್ ಆ್ಯಂಡ್ ಕಾಮರ್ಸ್‌ ಕಾಲೇಜಿನ ಗ್ರಂಥಾಲಯ ವಿಭಾಗದವರು ಶನಿವಾರ ಹಮ್ಮಿಕೊಂಡ ರಾಷ್ಟ್ರೀಯ ವೆಬಿನಾರ್‌ನಲ್ಲಿ ‘ವೃತ್ತಿ ಅಭಿವೃದ್ಧಿಗಾಗಿ ಮುಕ್ತ ಶಿಕ್ಷಣ ಸಂಪನ್ಮೂಲಗಳ ಪಾತ್ರ’ ಕುರಿತು ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಆರ್ಟ್ಸ್, ಸೈನ್ಸ್ ಸೇರಿದಂತೆ ಕಾಮರ್ಸ್  ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ನಿಗದಿತ ಪಠ್ಯಕ್ರಮಗಳಿಗೆ ಅನುಗುಣವಾದ ಪುಸ್ತಕಗಳಿದ್ದು, ಇದರ ಹೊರತಾಗಿ ವಿಷಯಕ್ಕೆ ಸಂಬಂಧಿಸಿತ ಹಾಗೂ ಪೂರಕವಾದ ಯೋಗ್ಯ ಮಾಹಿತಿಗಳು ಅಂತರ್ಜಾಲದಲ್ಲಿ ಈಗಾಗಲೇ ಲಭ್ಯ ಇದೆ. ಆದರೆ, ಅವುಗಳನ್ನು ಬಳಕೆ ಮಾಡುವ ವಿಧಾನ ಸೇರಿದಂತೆ ಅದರ ನಿಖರತೆ ಬಗ್ಗೆ ಖಚಿತತೆ ಪಡೆದುಕೊಳ್ಳುವ ಮೂಲಕ ಅಧ್ಯಯ ಮುಂದುವರಿಸಲು ಬೇಕಾದ ಮಾಹಿತಿ ಹಾಗೂ ಅಗತ್ಯ ಎಚ್ಚರಿಕೆ ಕುರಿತು ವಿವರಿಸಿದರು.

ಅಧಿಕೃತ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ಅನಿವಾರ‌್ಯವಾಗಿದ್ದು, ಮೂಲ ವೆಬ್‌ಸೈಟ್‌ಗಳನ್ನು ಬಳಸಿ ಓದುವ ಜವಾಬ್ದಾರಿ ಪ್ರತಿ ಓದುಗನಿಗೆ ಇದ್ದು, ವಿಷಯ ತಜ್ಞರ ಅಗತ್ಯ ಸಲಹೆ ಹಾಗೂ ಸಹಾಯದೊಂದಿಗೆ ಉನ್ನತ ಜ್ಞಾನ ಸಂಪಾದನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ವೃತ್ತಿಗೆ ಸಂಬಂಧಿಸಿದ ಅನೇಕ ಕೋರ್ಸ್‌ಗಳಿದ್ದು, ತರಬೇತಿಯ ಹೊರತಾಗಿ  ಮುಕ್ತ ಸಂಪನ್ಮೂಲ ಬಳಕೆಗೆ ಪರಿಣಿತ ತಜ್ಞರ ಹಾಗೂ ಮಾರ್ಗದರ್ಶಕರ ಸಲಹೆ ಪಡೆದುಕೊಂಡು ಮಾಹಿತಿ ಸಂಗ್ರಹಕ್ಕೆ ಮುಂದಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಅವರದ್ದೇ ಆಧಾರ ಗ್ರಂಥಗಳ ಉಲ್ಲೇಖಗಳಿದ್ದು, ಅವುಗಳೇ ಉತ್ತರದಲ್ಲಿನ ಪ್ರಮುಖ ಅಂಶಗಳಾಗುತ್ತವೆ. ಹೀಗಾಗಿ ಅಂತರ್ಜಾಲದಲ್ಲಿರುವ ಎಲ್ಲ ಮಾಹಿತಿಗಳು ಅಧಿಕೃತವೆಂದಿನಸಲಾರದು. ಹೀಗಾಗಿಯೇ ಸೂಚಿತ ಪಠ್ಯಪುಸ್ತಗಳಲ್ಲಿನ ಮಾಹಿತಿಗಳೇ ಅಂಕ ಗಳಿಕೆಗೆ ಅಂತಿಮವಾಗುತ್ತವೆ ಎಂದು ಓಪನ್ ಟೆಕ್ಸ್ ಬುಕ್‌ಗಳ ಕುರಿತು ಲಾಗಿನ್‌ನಿಂದ ಹಿಡಿದು ಅದರ ಬಳಕೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಓಪನ್ ಎಜುಕೇಶನ್ ರಿಸೋರ್ಸ್‌ಗಳು ಹೆಚ್ಚಾನುಹೆಚ್ಚು ಇಂಗ್ಲಿಷ್ ಮಾಧ್ಯಮದಲ್ಲಿಯೇ ಇರುವುದರಿಂದ ಅವುಗಳ ಬಳಕೆಗೆ ಇಂಗ್ಲೀಷ ಭಾಷಾ ಜ್ಞಾನ ಕೊರತೆಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆಯಾಗುತ್ತಿದೆ. ಹೀಗಾಗಿಯೇ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡುವಂತ ಆ್ಯಪ್ ಸೇರಿದಂತೆ ಗೂಗಲ್ ಟ್ರಾನ್ಸ್‌ಲೇಟ್‌ಗಳನ್ನು ಸೂಕ್ತ ಮಾಹಿತಿ ಪಡೆದು ಮಾತೃಭಾಷೆಯಲ್ಲಿಯೇ ಅಧ್ಯಯನ ಮುಂದುವರಿಸಬಹುದು ಎಂದು ಉದಾಹರಣೆಯೊಂದಿಗೆ ಹೇಳಿದರು.

ಝೂಮ್ ಆ್ಯಪ್‌ನಲ್ಲಿ ಸುಮಾರು ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ವಿಶೇಷ ಪರಿಣಿತ ತಜ್ಞರು ನೋಂದಣಿ ಮಾಡಿಕೊಂಡಿದ್ದು, ಇದರೊಂದಿಗೆ ಪೇಸ್‌ಬುಕ್ ಹಾಗೂ ಯೂಟೂಬ್ ಲೈವ್ ಸೇರಿದಂತೆ ರಾಷ್ಟ್ರಾದ್ಯಂತ ಸಾವಿರಾರು ಆಸಕ್ತರು ಭಾಗವಹಿಸುವುದರೊಂದಿಗೆ ವೆಬಿನಾರ್‌ನನ್ನು ಯಶಸ್ವಿಗೊಳಿಸಿದರು.

ನಿಪ್ಪಾಣಿಯ ಕೆಎಲ್‌ಇ ಸಂಸ್ಥೆಯ ಜಿ.ಇ.ಬಾಗೇವಾಡಿ ಆರ್ಟ್ಸ್, ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಂ.ಹುರಳಿ ಅವರು ವೆಬಿನಾರ್ ಉದ್ಘಾಟಿಸಿದರು. ಐಕ್ಯೂಎಸಿ ಕೋ ಆರ್ಡಿನೆಟರ್ ಡಾ.ಬಿ.ಎಸ್.ಕಾಂಬ್ಳೆ ಸ್ವಾಗತಿಸಿದರು. ಕಾಲೇಜಿನ ಗ್ರಂಥಪಾಲಕ ಡಾ.ಆನಂದ ಕೆಂಚಕ್ಕನವರ ವೆಬಿನಾರ್‌ನ್ನು ಸಂಯೋಜಿಸಿದ್ದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC