Mandya : ಮನೆಗಳು, ವಾಣಿಜ್ಯ ಕಟ್ಟಡಗಳ ತೆರವಿಗೆ ಅಡ್ಡಿ

By Kannadaprabha NewsFirst Published Oct 12, 2022, 5:05 AM IST
Highlights

ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ವೈಜ್ಞಾನಿಕ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಮನೆಗಳು, ವಾಣಿಜ್ಯ ಕಟ್ಟಡಗಳ ತೆರವಿಗೆ ಅಡ್ಡಿಪಡಿಸಿದ ಘಟನೆ ಮಂಗಳವಾರ ಇಂಡುವಾಳುವಿನಲ್ಲಿ ನಡೆಯಿತು.

  ಮಂಡ್ಯ (ಅ.12): ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ವೈಜ್ಞಾನಿಕ ಪರಿಹಾರ ನೀಡಿಲ್ಲವೆಂದು ಆರೋಪಿಸಿ ಮನೆಗಳು, ವಾಣಿಜ್ಯ ಕಟ್ಟಡಗಳ ತೆರವಿಗೆ ಅಡ್ಡಿಪಡಿಸಿದ ಘಟನೆ ಮಂಗಳವಾರ ಇಂಡುವಾಳುವಿನಲ್ಲಿ ನಡೆಯಿತು.

ಪೊಲೀಸ್‌ (Police)  ರಕ್ಷಣೆಯಲ್ಲಿ ಹೆದ್ದಾರಿ (Highway)  ಪಕ್ಕದಲ್ಲಿದ್ದ ವಾಣಿಜ್ಯ ಕಟ್ಟಡಗಳ ತೆರವಿಗೆ ಮುಂದಾದ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀ ರಂಗಪಟ್ಟಣ (Shrirangapattana) ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಅಧಿಕಾರಿಗಳು ಮತ್ತು ಸ್ಥಳೀಯರ ಜೊತೆ ಮಾತುಕತೆ ನಡೆಸಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.

Latest Videos

ಇಂಡುವಾಳು ಗ್ರಾಮದಲ್ಲಿದ್ದ ಅನೇಕ ಮನೆಗಳಿಗೆ ವೈಜ್ಞಾನಿಕ ಪರಿಹಾರವನ್ನೂ ನಿಗದಿಪಡಿಸಿಲ್ಲ, ಪೂರ್ಣ ಪ್ರಮಾಣದ ಪರಿಹಾರವನ್ನೂ ಕೊಟ್ಟಿಲ್ಲ. ಅದೇ ರೀತಿ ವಾಣಿಜ್ಯ ಕಟ್ಟಡಗಳಿಗೆ ಪೂರಕವಾಗಿ ಪರಿಹಾರ ನಿಗದಿಪಡಿಸದೆ ಏಕಾಏಕಿ ಮನೆಗಳು ಹಾಗೂ ವಾಣಿಜ್ಯ ಕಟ್ಟಡ ತೆರವಿಗೆ ಮುಂದಾದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದರು.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಣ ಕೊಟ್ಟವರಿಗೆ ಆರ್‌ಟಿಸಿ ಜಮೀನನ್ನು ಅನ್ಯಕ್ರಾಂತ ಜಮೀನೆಂದು ಹೆಚ್ಚು ಪರಿಹಾರ ನಿಗದಿಪಡಿಸಿ ಒಂದಕ್ಕೆ ಮೂರು ಪಟ್ಟು ಹಣ ನೀಡಿದ್ದಾರೆ. ಬಡವರಿಗೆ ವೈಜ್ಞಾನಿಕ ಪರಿಹಾರವನ್ನು ನೀಡದೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ಪ್ರತಿ ಗ್ರಾಮಗಳಲ್ಲಿಯೂ ಇದೇ ರೀತಿಯ ವ್ಯತ್ಯಾಸಗಳು ನಡೆದಿವೆ ಎಂದು ಹರಿಹಾಯ್ದರು.

ಹೆದ್ದಾರಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಪೈಪ್‌ ಜೋಡಿಸಲಾಗಿದೆ. ರಸ್ತೆ ನಿರ್ಮಿಸಲಾಗಿದೆ. ಆದರೆ, ಪರಿಹಾರ ಮಾತ್ರ ನೀಡಿಲ್ಲ. ಇಂದಿಗೂ ಸಾವಿರಾರು ರೈತರು ಪರಿಹಾರಕ್ಕಾಗಿ ಪ್ರಾಧಿಕಾರದ ಕಚೇರಿಗೆ, ನ್ಯಾಯಕ್ಕಾಗಿ ಕೋರ್ಚ್‌ಗೆ ಅಲೆದಾಡುತ್ತಲೇ ಇದ್ದಾರೆ. ಲಂಚ ಕೊಟ್ಟವರಿಗೆ ಅಧಿಕಾರಿಗಳು ಒಂದು ರೀತಿಯ ಪರಿಹಾರ ನಿಗದಿಪಡಿಸುತ್ತಿದ್ದರೆ, ಲಂಚ ಕೊಡದವರಿಗೆ ಮತ್ತೊಂದು ರೀತಿಯಲ್ಲಿ ಪರಿಹಾರ ನಿಗದಿಪಡಿಸಿ ತಾರತಮ್ಯವೆಸಗುತ್ತಿದ್ದಾರೆ. ಭೂ ಪರಿಹಾರ ಪ್ರಕರಣಗಳಲ್ಲಿ ಸಾಕಷ್ಟುಅನ್ಯಾಯ-ಅಕ್ರಮಗಳು ನಡೆದಿದ್ದು ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಪಡಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಕುಂಞ ಅಹಮದ್‌, ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಲೋಕೇಶ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಾಳೇಗೌಡ, ರೈತ ಮುಖಂಡ ಚಂದ್ರಶೇಖರ್‌, ಇಂಡುವಾಳು ಸಿದ್ದೇಗೌಡ ಇತರರಿದ್ದರು.

ಕಾರವಾರದಲ್ಲಿ ಮತ್ತೆ ಭೂ ಸ್ವಾದೀನ

 

ಕಾರವಾರ(ಅ.07):  ರಾಜ್ಯದ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಏಳೆಂಟು ವರ್ಷದಿಂದ ಕುಂಟುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಖಡಕ್ ಸೂಚನೆ ಬೆನ್ನಲ್ಲೇ ಐಆರ್ ಬಿ ಕಂಪೆನಿ ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಮುಂದಾಗಿದೆ. ಆದರೆ, ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಹಿಂದೊಮ್ಮೆ ಸರ್ವೇ ನಡೆಸಿದ್ದರೂ, ಇದೀಗ ಮತ್ತೆ ಐಆರ್‌ಬಿ ಕಂಪನಿಯವರು ಹೆದ್ದಾರಿಯ ಸೆಂಟರ್ ಲೈನ್ ಬದಲಿಸಿ ಮತ್ತೊಮ್ಮೆ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಇದು ಹೆದ್ದಾರಿಯಂಚಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ. ಈ‌ ಕುರಿತ ಒಂದು ವರದಿ ಇಲ್ಲಿದೆ‌ ನೋಡಿ...

ಹೌದು, ಮಹಾರಾಷ್ಟ್ರದ ಪನ್ವೇಲ್‌ನಿಂದ ಕನ್ಯಾಕುಮಾರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯದ ಪಶ್ಚಿಮ‌ ಘಟ್ಟಗಳ ಅಂಚಿನಲ್ಲಿ ಹಾದು ಹೋಗುತ್ತದೆ. ಎಲ್ಲಾ ಕಡೆ ಬಹುತೇಕ ಕಾಮಗಾರಿ ಮುಕ್ತಾಯವಾಗಿದೆಯಾದ್ರೂ ಕರ್ನಾಟಕದಲ್ಲಿ ಮಾತ್ರ ಕುಂಟುತ್ತಾ ಸಾಗುತ್ತಿದೆ. ಅದರಲ್ಲಿಯೂ ಉತ್ತರ ಕನ್ನಡದ ಕರಾವಳಿಯುದ್ದಕ್ಕೂ ಅರೆಬರೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇತ್ತೀಚೆಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ಬಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. 

ದಾಂಡೇಲಿಯಲ್ಲಿ ಜಿ+2 ಮಾದರಿ ಮನೆ ನನೆಗುದಿಗೆ

ಇದೀಗ ಕಾಮಗಾರಿಗೆ ವೇಗ ನೀಡಲು ಮುಂದಾಗಿರುವ ಐಆರ್‌ಬಿ ಕಂಪೆನಿ ಕೆಲವೆಡೆ ಸೆಂಟರ್ ಲೈನ್ ಬದಲಿಸಿ ಕಾಮಗಾರಿಗೆ ಮುಂದಾಗಿದೆ.‌ ಇದರಿಂದ ಈ ಹಿಂದೆ ಸರ್ವೆ ಮಾಡಿದ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದ ಭೂಮಿ ಹೋಗುತ್ತಿದೆ. ಆದರೆ, ಸಂತ್ರಸ್ಥರಿಗೆ ಈ ಹಿಂದೆ ನಿಗದಿ ಮಾಡಿದಷ್ಟು ಜಮೀನಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಸೆಂಟರ್ ಲೈನ್ ಬದಲಿಸುವ ಅಧಿಕಾರ ಇಲ್ಲದಿದ್ದರೂ ಈ ರೀತಿ ಮಾಡಲಾಗುತ್ತಿದ್ದು, ಸರ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮಾಜಾಳಿ ನಿವಾಸಿ ಬಿ.ಜಿ. ಸಾವಂತ ಆಗ್ರಹಿಸಿದ್ದಾರೆ.

ಇನ್ನು ಕಾರವಾರದ ಮಾಜಾಳಿಯ ಭಾಗದಲ್ಲಿ ಹೆದ್ದಾರಿಗಾಗಿ ಕೆಲವರ ಮನೆಗಳು ಹಾಗೂ ಜಮೀನುಗಳು ಶೇ. 90 ರಷ್ಟು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಸ್ವಾಧೀನ ಭೂಮಿಯ ಶೇ.15 ರಷ್ಟು ಮಾತ್ರ ಪರಿಹಾರ ನೀಡಿದ್ದಾರೆ. ಪರಿಹಾರ ನೀಡುವ ಕುರಿತು ಜಮೀನು ಮಾಲೀಕರನ್ನು ಕೇಳದೆ ನೇರವಾಗಿ ನ್ಯಾಯಾಲಯಕ್ಕೆ ಠೇವಣಿ ಮಾಡಿದ್ದಾರೆ. ಈ ಬಗ್ಗೆ ಜಮೀನು ಮಾಲೀಕರಿಗೆ ತಿಳಿದು ಕಂಗಲಾಗಿದ್ದಾರೆ. 

click me!