* ಮೇ.16ರಂದು ಆದಾಯ ಸಂಗ್ರಹ
* ಸಿಬ್ಬಂದಿಗೆ ಸಿಹಿ ಹಂಚಿ ಅಭಿನಂದನೆ
* 6 ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿದ ವಾಯವ್ಯ ಸಾರಿಗೆ ಸಂಸ್ಥೆ
ಹುಬ್ಬಳ್ಳಿ(ಮೇ.18): ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ(NWKRTC) ಮೇ.16ರಂದು ಒಂದೇ ದಿನ 6.14 ಕೋಟಿ ಆದಾಯ(Income) ಸಂಗ್ರಹವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಅತಿ ಹೆಚ್ಚಿನ ಸಾರಿಗೆ ಆದಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯಾಪ್ತಿಯ ಎಲ್ಲ ಘಟಕಗಳಲ್ಲಿ ಸಿಬ್ಬಂದಿಗಳಿಗೆ ಅಧಿಕಾರಿ ವರ್ಗ ಸಿಹಿ ಹಂಚಿ ಅಭಿನಂದನೆ ಸಲ್ಲಿಸಿದೆ.
ವಾಯವ್ಯ ಸಾರಿಗೆ ಸಂಸ್ಥೆಯೂ 6 ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿದೆ. ಕೊರೋನಾದಿಂದಾಗಿ(Coronavirus) ಸಂಪೂರ್ಣ ಹಾನಿಗೊಳಲಾಗಿತ್ತು. ಸರ್ಕಾರದಿಂದ(Government of Karnataka) ಆರ್ಥಿಕ ನೆರವು ಪಡೆದು ಸಂಬಳ ನೀಡಿದ್ದುಂಟು. ಕೊರೋನಾ ಬಳಿಕ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಪೂರ್ಣ ಪ್ರಮಾಣದ ಸಾರಿಗೆ ಕಾರ್ಯಾಚರಣೆ ಆರಂಭಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಂಗ್ರಹವಾಗಿರಲಿಲ್ಲ. ಮೇ ತಿಂಗಳಲ್ಲಿ ಸಂಸ್ಥೆಯ ಆದಾಯ ಸರಾಸರಿ ಪ್ರತಿ ದಿನಕ್ಕೆ 5.22 ಕೋಟಿ ಗಳಷ್ಟಾಗಿತ್ತು. ಆದರೆ ಮೇ 16ರಂದು 6.14 ಕೋಟಿ ಆದಾಯ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣಿಭೂತರಾಗಿರುವ ಚಾಲನಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿಗಳಿಗೆ ಘಟಕ ವ್ಯವಸ್ಥಾಪಕರು ವಿಭಾಗದ ಅಧಿಕಾರಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಅಭಿನಂದನೆ ಸಲ್ಲಿಸಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ರಾಜ್ಯಾದ್ಯಂತ ರಿಯಾಯಿತಿ ದರದಲ್ಲಿ ಬಸ್ ಪಾಸ್!
ಈ ನಡುವೆ ಎಲ್ಲ ಘಟಕಗಳ ವ್ಯವಸ್ಥಾಪಕರು, ತಮ್ಮ ತಮ್ಮ ವಿಭಾಗಗಳ ಚಾಲನಾ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಸಿಹಿ ಹಂಚಿ ಅಭಿನಂದನೆ ಸಲ್ಲಿಸಿದರು.
ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಸಂಬಳ ಏರಿಕೆಗೆ ಮುಂದಾದ ಸರ್ಕಾರ
ಶಿರಸಿ: ಸಾರಿಗೆ ಸಂಸ್ಥೆ ನೌಕರರಿಗೆ ಸಾರಿಗೆ ಇಲಾಖೆ ಗುಡ್‌ನ್ಯೂಸ್ ನೀಡಲು ಮುಂದಾಗಿದೆ. ಸಾರಿಗೆ ನೌಕರರಿಗೆ ಶೀಘ್ರವೇ ವೇತನ ಹೆಚ್ಚಳ ಮಾಡಲು ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಲಾಗುವುದು ಎಂದು ಸಾರಿಗೆ ಸಚಿವ (Transport Minister) ಬಿ. ಶ್ರೀರಾಮುಲು ಭರವಸೆ ನೀಡಿದ್ದರು.
ಖಾಸಗಿ ಬಂಕ್‌ಗಳಲ್ಲಿ ಡೀಸೆಲ್ ಖರೀದಿ: ಕೆಎಸ್‌ಆರ್‌ಟಿಸಿಗೆ ಭರ್ಜರಿ ‘ಲಾಭ’
ಇತ್ತೀಚೆಗೆ ಉತ್ತರ ಕನ್ನಡದ (Uttara Kannda) ಶಿರಸಿಯಲ್ಲಿ ಶಿರಸಿ (Sirasi) ಬಸ್ ನಿಲ್ದಾಣದ (Busstand) ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನ ಹೆಚ್ಚಳದ ಬಗ್ಗೆ ಹಣಕಾಸು ಇಲಾಖೆ ಜೊತೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೇ ಸಾರಿಗೆ ನೌಕರರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗದೇ ಇರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಸಕಾಲಕ್ಕೆ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದರು.
ಡಿಸಿಎಂ ಹುದ್ದೆ ಆಸೆ ಕಮರಿಲ್ಲ
ಮನುಷ್ಯ ಅಂದ್ರೆ ಆಸೆ ಇದ್ದೇ ಇರುತ್ತೆ. ಆಸೆ ಇಲ್ಲದ ವ್ಯಕ್ತಿಗೆ ಮನುಷ್ಯ ಅನ್ನಲ್ಲ ಅನ್ನೋ ಮೂಲಕ ಡಿಸಿಎಂ ಹುದ್ದೆ ಮೇಲೆ ಆಸೆ ಕಮರಿಲ್ಲ ಅನ್ನೋ ಸಂದೇಶವನ್ನ ಸಚಿವ ಬಿ ಶ್ರೀರಾಮುಲು ( B sriramulu) ನೀಡಿದರು. ರಾಜ್ಯದಲ್ಲಿ ನಾಲ್ವರು ಡಿಸಿಎಂಗಳಾಗ್ತಾರೆ ಅನ್ನೋ ಚರ್ಚೆ ಚಾಲ್ತಿಯಲ್ಲಿರುವಾಗ್ಲೆ ರಾಮುಲು ಈ ಮಾತು ಹೇಳಿದ್ದಾರೆ. ಗದಗ (Gadaga) ನಗರದಲ್ಲಿ ಸುದ್ದಿಗಾರರ ಜೊತೆ ಮಾತ್ನಾಡಿದ ಅವರು, ಹುದ್ದೆ ಮೇಲೆ ಆಸೆ ಇರಬಹುದು ಆದ್ರೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದ್ರು. ಯಾರನ್ನ ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡ್ಬೇಕು ಅನ್ನೋದು ಪಾರ್ಟಿ ತೀರ್ಮಾನ ಮಾಡುತ್ತೆ. ಪಾರ್ಟಿ ತೀರ್ಮಾನವೇ ಅಂತಿಮ. ಆಸೆ ಇರಬಹುದು, ಆದ್ರೆ ಪಾರ್ಟಿ ಅನ್ನೋ ಸಿಸ್ಟಮ್ ಇದೆ. ನಮ್ಮದು ರಾಷ್ಟ್ರೀಯ ಪಕ್ಷ, ಮುಂದಿನ ತೀರ್ಮಾನವನ್ನ ಪಾರ್ಟಿ ತೆಗೆದುಕೊಳ್ಳುತ್ತದೆ ಎಂದ್ರು. ಜೊತೆ ಪಾರ್ಟಿ ಏನೇ ಜವಾಬ್ದಾರಿ ಕೊಟ್ಟರೂ ನಿಬಾಯಿಸುತ್ತೇನೆ ಅನ್ನೋ ಮೂಲಕ ಡಿಸಿಎಂ ಜವಾಬ್ದಾರಿ ನೀಡಿದ್ರೆ ನಿಭಾಯಿಸುತ್ತೇನೆ ಎನ್ನುವ ಸಂದೇಶ ನೀಡಿದ್ದಾರೆ. ಡಿಸಿಎಂ ಯಾರಾಗ್ಬೇಕು ಅನ್ನೋದನ್ನ ಪಾರ್ಟಿ ನಿರ್ಧರಿಸಲಿದೆ ಎಂದ್ರು. ಅಲ್ದೆ, ಪಾರ್ಟಿ ಬಿಟ್ಟು ಬೇರೇನೂ ಇಲ್ಲ. ಎಲ್ಲವೂ ಪಾರ್ಟಿ ತೀರ್ಮಾನ ಮಾಡುತ್ತೆ ಅಂತ ಹೇಳಿದ್ದರು.