* ದಾವಣಗೆರೆಯಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ
* ನೆಲಕಚ್ಚಿದ ನೂರಾರು ಎಕರೆ ಭತ್ತದ ಪೈರು
* ಸಂತ್ರಸ್ತರಿಗೆ ಪರಿಹಾರ ಭರವಸೆ ನೀಡದ ಜಿಲ್ಲಾಧಿಕಾರಿ
ವರದಿ: ವರದರಾಜ್
ದಾವಣಗೆರೆ, (ಮೇ.17): ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಮುಂದುವರೆದಿದೆ. ಇದರಿಂದ ಭತ್ತ ಬೆಳೆಗಾರರು ಕಂಗಲಾಗಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗಾಳಿ ಮಳೆಯಾಗಿದ್ದು, ನೂರಾರು ಎಕರೆ ಭತ್ತದ ಪೈರು ನೆಲಕಚ್ಚಿದೆ.
ಹರಿಹರ ತಾಲ್ಲೂಕಿನಲ್ಲಿ ದಾಖಲೆಯ 30 ಮಿ.ಮೀ ಮಳೆಯಾಗಿದೆ. ನಿನ್ನೆ ಸಂಜೆ, ತಡ ರಾತ್ರಿ ವರೆಗೆ ಮಳೆಗೆ ಆಪಾರ ಪ್ರಮಾಣ ಬೆಳೆಹಾನಿ ಆಗಿದೆ. ಜಿಲ್ಲೆಯಲ್ಲಿ ಒಟ್ಟು 24.9 ಮಿ.ಮೀ. ಸರಾಸರಿ ಮಳೆಯಾಗಿದ್ದು. 55.16 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದ್ದು ಹಾನಿ ಪ್ರಮಾಣ ಇನ್ನು ಹೆಚ್ಚುವ ಸಾಧ್ಯತೆ ಇದೆ.
undefined
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟ ಪೌರ ಕಾರ್ಮಿಕರ ಸಂಘ
ಚನ್ನಗಿರಿ 27.3 ಮಿ.ಮೀ, ದಾವಣಗೆರೆ 24.7, ಹರಿಹರ 30.6 ಮಿ.ಮೀ, ಹೊನ್ನಾಳಿ 28.0 ಮಿ.ಮೀ ಮಳೆಯಾಗಿದೆ. ಜಗಳೂರು 8.5 ಮಿ.ಮೀ, ನ್ಯಾಮತಿಯಲ್ಲಿ 48.8 ಮಿ.ಮೀ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 02 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ 60 ಸಾವಿರ ಮತ್ತು 205-00 ಎಕರೆ ಭತ್ತದ ಬೆಳೆ ಹಾಗೂ 20 ಗುಂಟೆ ಅಡಿಕೆ ಬೆಳೆ ಹಾನಿಯಾಗಿದ್ದು, ರೂ.4.40 ಲಕ್ಷ, ಒಂದು ಜಾನುವಾರು ಮೃತಪಟ್ಟಿದ್ದು ರೂ.30 ಸಾವಿರ ಸೇರಿ ಒಟ್ಟು ರೂ.5.30 ಲಕ್ಷ ನಷ್ಟ ಸಂಭವಿಸಿದೆ.
ಹರಿಹರ ತಾಲ್ಲೂಕಿನಲ್ಲಿ 05 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ 1.10 ಲಕ್ಷ ಮತ್ತು 285-00 ಎಕರೆ ಭತ್ತದ ಬೆಳೆ ಮತ್ತು 1 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, ರೂ.17.61 ಲಕ್ಷ, ಒಂದು ಕುರಿ ಮೃತಪಟ್ಟಿದ್ದು ರೂ.5 ಸಾವಿರ ಸೇರಿ ಒಟ್ಟು ರೂ.18.76 ಲಕ್ಷ ನಷ್ಟ ಸಂಭವಿಸಿದೆ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಹಾನಿಯಾಗಿದ್ದು, ಅಂದಾಜು ರೂ 5.00 ಲಕ್ಷ, 40 ಎಕರೆ ಭತ್ತದ ಬೆಳೆ ಹಾಗೂ 16 ಎಕರೆ ಭತ್ತ ಮತ್ತು ಅಡಿಕೆ ಬೆಳೆ ಹಾನಿಯಾಗಿದ್ದು, ಒಟ್ಟು ರೂ.18.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಚನ್ನಗಿರಿ ತಾಲ್ಲೂಕ್ ನಲ್ಲಿ 2 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.00 ಲಕ್ಷ ಹಾಗೂ 1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 50 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ. 1 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ. 50 ಸಾವಿರ, ಒಟ್ಟು 2.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. 6.30 ಎಕರೆ ಪಪ್ಪಾಯಿ ಬೆಳೆ, 3.00 ಎಕರೆ ಎಲೆಬಳ್ಳಿ, 2.00 ಎಕರೆ ಟೋಮಾಟೋ ಹಾನಿಯಾಗಿದ್ದು, ರೂ.50 ಸಾವಿರ ಸೇರಿ, ಒಟ್ಟು 10.90 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಹರಿಹರ, ದಾವಣಗೆರೆ ತಹಶೀಲ್ದಾರ್ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ರೂ55.16 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.