ಕೋವಿಡ್‌ ಪರಿಹಾರ ನಿಧಿಗೆ ವೇತನ ನೀಡಿ ಮಾದರಿಯಾದ ಬಸ್‌ ಕಂಡಕ್ಟರ್‌..!

Kannadaprabha News   | Asianet News
Published : Apr 22, 2020, 07:50 AM IST
ಕೋವಿಡ್‌ ಪರಿಹಾರ ನಿಧಿಗೆ ವೇತನ ನೀಡಿ ಮಾದರಿಯಾದ ಬಸ್‌ ಕಂಡಕ್ಟರ್‌..!

ಸಾರಾಂಶ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ತಿಂಗಳ ವೇತನ 25 ಸಾವಿರ ರು. ನೀಡಿದ ನಿರ್ವಾಹಕ| ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ನೀಲಪ್ಪ ಗಾಣಿಗೇರ| ಜಿಲ್ಲಾಧಿಕಾರಿ ದೀಪಾ ಚೋಳನ್ ಮೂಲಕ ಚೆಕ್‌ ಅರ್ಪಿಸಿದ ಬಸವರಾಜ ನೀಲಪ್ಪ ಗಾಣಿಗೇರ|

ಧಾರವಾಡ(ಏ.22): ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ನಿರ್ವಾಹಕರೊಬ್ಬರು ತಮ್ಮ ಒಂದು ತಿಂಗಳ ವೇತನದ 25 ಸಾವಿರ ಮುಖ್ಯಮಂತ್ರಿಗಳ ಪರಿಹಾರ ನಿಧಿ (ಕೋವಿಡ್‌) ಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಬಸವರಾಜ ನೀಲಪ್ಪ ಗಾಣಿಗೇರ ಅವರು ಮಂಗಳವಾರ ತಮ್ಮ ನೆರವನ್ನು ಜಿಲ್ಲಾಧಿಕಾರಿ ಮೂಲಕ ಅರ್ಪಿಸಿದ್ದಾರೆ. ಚೆಕ್‌ ಸ್ವೀಕರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಸಾರಿಗೆ ಸಂಸ್ಥೆಯ ಕಂಡಕ್ಟರ್ಒಬ್ಬರು ಸ್ವಯಂಪ್ರೇರಣೆಯಿಂದ ತಮ್ಮ ಒಂದು ತಿಂಗಳ ವೇತನವನ್ನು ಈ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಕೋವಿಡ್ಪರಿಹಾರ ನಿಧಿಗೆ ನೀಡಿರುವುದು ಸಮಾಜಕ್ಕೆ ಮಾದರಿ. ಜಿಲ್ಲಾಡಳಿತ ಈ ಕಾರ್ಯವನ್ನು ಪ್ರಶಂಸೆ ಮಾಡುತ್ತದೆ ಎಂದರು.

ಕೊರೋನಾ ಸಂಕಷ್ಟದಲ್ಲೂ ವೃತ್ತಿ ದ್ರೋಹ ಬಗೆದ ಡಾಕ್ಟರ್‌..!

ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ವಿಶ್ವಜ್ಞ, ಹನುಮಂತ ಬೋಜೇದಾರ್, ಬಸವರಾಜ ಅವಾರಿ, ಎಂ.ಎಸ್. ರೋಣದ, ವೆಂಕಟೇಶ ಹರ್ತಿ, ಡಾ. ಪಿ.ವಿ. ಸವದಿ ಇದ್ದರು.
 

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ