ಮೂಡುಬಿದಿರೆಯಲ್ಲಿ ಬೀದಿ ನಾಯಿಗಳಿಗೂ ಮೀನೂಟ

Kannadaprabha News   | Asianet News
Published : Apr 22, 2020, 07:35 AM IST
ಮೂಡುಬಿದಿರೆಯಲ್ಲಿ ಬೀದಿ ನಾಯಿಗಳಿಗೂ ಮೀನೂಟ

ಸಾರಾಂಶ

ಚಿಕನ್‌ ಸಾರು ಬೆರೆಸಿದ ಅನ್ನ ಜತೆಗೆ ಬೇಯಿಸಿದ ಒಣಮೀನಿನ ಊಟ ನಾಯಿಗಳ ಹಸಿವು ತಣಿಸುತ್ತಿದೆ. ಜವನೆರ್‌ ಬೆದ್ರ ತಂಡದ ಅಮರ್‌ ಕೋಟೆ ಬಳಗ ದಿನವೂ ರಾತ್ರಿ 7ರಿಂದ 9ರ ಹೊತ್ತಿಗೆ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ.  

ಮಂಗಳೂರು(ಏ.22): ಮೂಡುಬಿದಿರೆಯಲ್ಲಿ ಕ್ಲೀನಪ್‌ ಬೆದ್ರ ವಾರದ ಸ್ವಚ್ಛತಾ ಕಾರ್ಯಕ್ರಮಗಳ ಮೂಲಕ ಈಗಾಗಲೇ 107 ವಾರಗಳ ನಿರಂತರ ಸ್ವಚ್ಛತಾ ಕಾರ್ಯಕ್ರಮ ಪೂರೈಸಿರುವ ಜವನೆರ್‌ ಬೆದ್ರ ಸಂಘಟನೆ, ಪೇಟೆಯ ಹತ್ತಾರು ಕಡೆ ನೂರಾರು ಬೀದಿ ನಾಯಿಗಳಿಗೆ ಅನ್ನ ಹಾಕುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದೆ.

ಚಿಕನ್‌ ಸಾರು ಬೆರೆಸಿದ ಅನ್ನ ಜತೆಗೆ ಬೇಯಿಸಿದ ಒಣಮೀನಿನ ಊಟ ನಾಯಿಗಳ ಹಸಿವು ತಣಿಸುತ್ತಿದೆ. ಜವನೆರ್‌ ಬೆದ್ರ ತಂಡದ ಅಮರ್‌ ಕೋಟೆ ಬಳಗ ದಿನವೂ ರಾತ್ರಿ 7ರಿಂದ 9ರ ಹೊತ್ತಿಗೆ ಬಸ್‌ ಸ್ಟ್ಯಾಂಡ್, ಮಾರ್ಕೆಟ್‌, ಅರಮನೆ ಬಾಗಿಲು, ವಿಜಯನಗರ, ರಿಂಗ್‌ ರೋಡ್‌, ಜೈನ ಪೇಟೆ, ಮೆಸ್ಕಾಂ ಬಳಿ, ಹೀಗೆ ಹತ್ತಾರು ತಾಣಗಳನ್ನು ಗುರುತಿಸಿ ನಾಯಿಗಳಿಗೆ ಅನ್ನ ಹಾಕುತ್ತಿದೆ.

ಇಷ್ಟೂಸಾಲದೆಂಬಂತೆ ಅನಾಥ ಬೆಕ್ಕು- ಮರಿಗಳಿಗೂ ಈ ಊಟ ದೊರೆಯುತ್ತಿದೆ. ಅಮರ್‌ ಕೋಟೆ ಬಳಗ, ಮೂಡುಬಿದಿರೆಯಲ್ಲಿ ಅಗತ್ಯವಿರುವ 400ಕ್ಕೂ ಅಧಿಕ ಕುಟುಂಬಗಳಿಗೆ ಈಗಾಗಲೇ ದಿನಸಿ ಕಿಟ್‌ ವಿತರಿಸಿದೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ