ಸಿದ್ಧಗಂಗಾ ಮಠಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ

By Kannadaprabha NewsFirst Published Jan 24, 2020, 10:33 AM IST
Highlights

ಸಿದ್ಧಗಂಗಾ ಮಠಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಬಳಿಕ 10 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಬಳಿಕ ಶಿವೈಕ್ಯ ಶ್ರೀಗಳ ಗದ್ದುಗೆ ನಿರ್ಮಾಣವಾದ ಮೇಲೆ ಅದರ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ತುಮಕೂರು(ಜ.24): ಸಿದ್ಧಗಂಗಾ ಮಠಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಬಳಿಕ 10 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಬಳಿಕ ಶಿವೈಕ್ಯ ಶ್ರೀಗಳ ಗದ್ದುಗೆ ನಿರ್ಮಾಣವಾದ ಮೇಲೆ ಅದರ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ದೂರ ದೂರುಗಳಿಂದ ಬರುವ ಭಕ್ತರು ಮೊದಲು ಗದ್ದುಗೆ ಬಳಿಕ ಸಿದ್ಧಲಿಂಗೇಶ್ವರ ಸ್ವಾಮೀಜಿ ನಂತರ ಸಿದ್ಧಗಂಗಾ ಮಠದ ಇತರೆ ಜಾಗಗಳನ್ನು ನೋಡಿ ಹೋಗುತ್ತಿದ್ದಾರೆ. ಪ್ರತಿ ತಿಂಗಳ ವಿಶೇಷ ಹಬ್ಬ, ಜಾತ್ರೆ, ವಿಶೇಷ ಪೂಜೆ, ವರ್ಷಾಂತ್ಯದಲ್ಲಿ ಶಾಲಾ ಮಕ್ಕಳ ಪ್ರವಾಸ ಸೇರಿ ಪ್ರತಿ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

ತುಮಕೂರು: ಗದ್ದುಗೆಯಲ್ಲಿ ಶ್ರೀಗಳ 50 ಕೆಜಿಯ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ಸಿದ್ಧಗಂಗಾ ಮಠದ ಬಳಿಕ ನಂತರ ಜಿಲ್ಲೆಯಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ, ಗೊರವನಹಳ್ಳಿ ಲಕ್ಷ್ಮೇ ಹಾಗೂ ದೇವರಾಯನದುರ್ಗಕ್ಕೂ ಹೆಚ್ಚು ಪ್ರವಾಸಿಗರ ಬರುತ್ತಾರೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.

ಅರಣ್ಯ ಇಲಾಖೆಗೆ ಚೆಳ್ಳೆಹಣ್ಣು ತಿನ್ನಿಸಿದ ಆಗಂತುಕ ಚಿರತೆ!

click me!