ಹಾಸನ : ಗಣನೀಯವಾಗಿ ಇಳಿಕೆಯಾದ ಸೋಂಕು

By Kannadaprabha NewsFirst Published May 12, 2021, 1:34 PM IST
Highlights
  • ಹಾಸನದಲ್ಲಿ ಗಣನೀಯವಾಗಿ ಇಳಿದ ಕೋವಿಡ್ ಪ್ರಕರಣಗಳು
  • ಇಳಿಯದ ಕೋವಿಡ್ ಸೋಂಕಿತರ ಮರಣ ಪ್ರಮಾಣ
  • ಜಿಲ್ಲೆಯಲ್ಲಿ ಸದ್ಯ 16,224   ಸಕ್ರೀಯ ಸೋಂಕಿತರು 

ಹಾಸನ (ಮೇ.12): ಜಿಲ್ಲೆಯಲ್ಲಿ ಕೊರೋನಾ ಪ್ರಕರಣ  ಗಣನೀಯವಾಗಿ ಇಳಿಕೆಯಾಗಿದ್ದು  ಮಂಗಳವಾರ 170 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಆದರೆ ಸಾವಿನ ಪ್ರಮಾಣ ಇನ್ನೂ ಇಳಿಕೆಯಾಗಿಲ್ಲ. ಒಂದೇ ದಿನ 16 ಮಂದಿ ಬಲಿಯಾಗಿದ್ದಾರೆ. 

ವರದಿ ಪ್ರಕಾರ ಮೃತಪಟ್ಟವರಲ್ಲಿ ಹಾಸನ ತಾಲೂಕಿನಲ್ಲಿ 5, ಅರಕಲಗೂಡಲ್ಲಿ 1, ಅರಸೀಕೆರೆ 3,  ಬೇಲೂರು 1, ಚನ್ನರಾಯಪಟ್ಟಣ ತಾಲೂಕಿನಲ್ಲಿ 2 ಮಂದಿ. ಹೊಳೆನರಸೀಪುರದಲ್ಲಿ 1, ಸಕಲೇಶಪುರ ತಾಲೂಕಿನಲ್ಲಿ ಒಬ್ಬರು ಮತ್ತು ಇತರೆ ಜಿಲ್ಲೆಯವರಾದ 2 ಮಂದಿ ಮೃತಪಟ್ಟಿದ್ದಾರೆ.  ಒಟ್ಟರೆ ಜಿಲ್ಲೆಯಲ್ಲಿ ಇದುವರೆಗೆ 719ಕ್ಕೆ ಕೋವಿಡ್ ಸಾವಿನ ಸಂಖ್ಯೆ ಏರಿಕೆಯಾಗಿದೆ. 

ಹಾಸನದಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆ: ಸುಧಾಕರ್ ಜೊತೆ ದೇವೇಗೌಡರ ಚರ್ಚೆ ...

ಒಟ್ಟರೆ ಸೋಂಕಿತರ ಸಂಖ್ಯೆ 56,0011ಕ್ಕ ಏರಿಕೆಯಾಗಿದೆ. ಜಿಲ್ಲೆಯಲ್ಲಿ 16,224   ಸಕ್ರೀಯ ಸೋಂಕಿತರು  ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತೀವ್ರ ನಿಗಾ ಘಟಕದಲ್ಲಿ 125 ನಣದು ಚಿಕಿತ್ಸೆ ಪಡೆಯುತ್ತಿದ್ದರೆ. ಒಟ್ಟರೆ ಈವರೆಗೆ ಕೋವಿಡ್ ಸಾವಿನ ಸಂಖ್ಯೆ 719ಕ್ಕೆ ಏರಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!