ಯತ್ನಾಳ್‌ ಒಡೆತನದ ಸಕ್ಕರೆ ಕಾರ್ಖಾನೆ ಬಂದ್‌ಗೆ ಸೂಚನೆ

By Kannadaprabha News  |  First Published Jan 28, 2024, 5:57 AM IST

ಅಧಿಕೃತ ಪರವಾನಗಿ ಪಡೆಯದೆ ಲಕ್ಷಾಂತರ ಟನ್ ಕಬ್ಬು ನುರಿಸಿದ್ದಲ್ಲದೆ ಬಾಟ್ಲರ್ ಸಹ ಅಳವಡಿಸಿರುವುದರಿಂದ ನೋಟಿಸ್‌ ನೀಡಲಾಗಿದೆ. ನೋಟಿಸ್ ಬಳಿ ಕವೂ ಕಾರ್ಖಾನೆ ಮುಚ್ಚದಿದ್ದರೆ ಕ್ರಿಮಿನಲ್ ಕೇಸು ದಾಖಲಾಗಲಿದೆ ಎಂದ ಅರಣ್ಯ ಸಚಿವ ಈಶ್ವರ ಖಂಡ್ರೆ


ಚಿಂಚೋಳಿ(ಜ.28): ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿ ತಾಲೂಕಿನಲ್ಲಿ ಸ್ಥಾಪಿಸಿರುವ ಸಿದ್ದಸಿರಿ ಇಥೆನಾಲ್ ಮತ್ತು ಪವರ್ ಘಟಕವು ನಿಯಮಾವಳಿ ಗಳನ್ನು ಉಲ್ಲಂಘನೆ ಮಾಡಿರುವುದರಿಂದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿದ ಹಿನ್ನಲೆಯಲ್ಲಿ ಕಾರ್ಖಾನೆಗೆ ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಭೇಟಿ ನೀಡಿ ಕಾರ್ಖಾನೆ ಮುಚ್ಚುವಂತೆ ಸೂಚಿಸಿದ್ದಾರೆ.

ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಸಿದ್ದಸಿರಿ ಇಥೆನಾಲ್ ಪವರ್ ಘಟಕಕ್ಕೆ ಶನಿವಾರ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ-ನಿರ್ದೇಶಕ ಶಾಂತಗೌಡ, ಜಮಖಂಡಿ, ತಹಸೀಲ್ದಾರ ಸುಬ್ಬಣ್ಣ ಸಹಾಯಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಅಧಿಕಾರಿ ಶಾರದಾ ಅವರು ಭೇಟಿ ನೀಡಿ ಆಡಳಿತ ಮಂಡಳಿ ಸದಸ್ಯರೊಂದಿಗೆ ಮಾತನಾಡಿದರು.

Latest Videos

undefined

ಅಂಬೇಡ್ಕರ್ ಭಾವಚಿತ್ರದ ಪೂಜೆಗೆ ಒಲ್ಲೆ ಎಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಅಧಿಕೃತ ಪರವಾನಗಿ ಪಡೆಯದೆ ಲಕ್ಷಾಂತರ ಟನ್ ಕಬ್ಬು ನುರಿಸಿದ್ದಲ್ಲದೆ ಬಾಟ್ಲರ್ ಸಹ ಅಳವಡಿಸಿರುವುದರಿಂದ ನೋಟಿಸ್‌ ನೀಡಲಾಗಿದೆ. ನೋಟಿಸ್ ಬಳಿ ಕವೂ ಕಾರ್ಖಾನೆ ಮುಚ್ಚದಿದ್ದರೆ ಕ್ರಿಮಿನಲ್ ಕೇಸು ದಾಖಲಾಗಲಿದೆ ಎಂದರು.

click me!