ಕಾಫಿನಾಡಿಗೆ ಎಂಟ್ರಿ ಕೊಟ್ಟ ಬೀಟಮ್ಮ ಅಂಡ್ ಗ್ಯಾಂಗ್: ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು!

By Govindaraj S  |  First Published Jan 27, 2024, 11:59 PM IST

ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ದಾಂದಲೆ ನಡೆಸಿದ್ದ ಕಾಡಾನೆಗಳ ತಂಡ ಬೀಟಮ್ಮ ಗ್ಯಾಂಗ್ ಇಂದು ಸಂಜೆ ಕಾಫಿನಾಡು ತಾಲೂಕಿನ ಕೆ.ಆರ್. ಪೇಟೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿವೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.27): ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ದಾಂದಲೆ ನಡೆಸಿದ್ದ ಕಾಡಾನೆಗಳ ತಂಡ ಬೀಟಮ್ಮ ಗ್ಯಾಂಗ್ ಇಂದು ಸಂಜೆ ಕಾಫಿನಾಡು ತಾಲೂಕಿನ ಕೆ.ಆರ್. ಪೇಟೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿವೆ. ಹಾಸನ, ಚಿಕ್ಕಮಗಳೂರು ಜಿಲ್ಲೆಯ ಗಡಿ ಗ್ರಾಮದ ಮೂಲಕ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಮಕ್ಕೆ ಬೀಟಮ್ಮ ಗ್ಯಾಂಗ್ ಎಂಟ್ರಿಯಾಗಿದ್ದು ಚಿಕ್ಕಮಗಳೂರು ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇಷ್ಟು ದಿನ ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ ಭಾಗದಲ್ಲಿ ಬೀಡುಬಿಟ್ಟಿದ್ದ ಈ ಕಾಡಾನೆಗಳ ಹಿಂಡು ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಹಿಂಡು-ಹಿಂಡಾಗಿ ಬಂದಿರುವುದು ಕಾಫಿ ಹಾಗೂ ಅಡಿಕೆ ಬೆಳೆಗಾರರಲ್ಲಿ ಇನ್ನಿಲ್ಲದ ಆತಂಕ ತಂದಿದೆ. 

Latest Videos

undefined

ಹೊಲಗದ್ದೆ ತೋಟಗಳಿಗೆ ಹೋಗುವುದಕ್ಕೂ ಹಿಂದೇಟು: ಈ ಮೊದಲು ಹಲವರ ಸಾವಿಗೆ ಕಾರಣವಾಗಿದ್ದ ಭೀಮ ಎಂಬ ಪುಂಡನೆ ಈ 30 ಆನೆಗಳ ಗ್ಯಾಂಗ್ ಸೇರಿದ್ದು ಇನ್ನಷ್ಟು ಭೀತಿ ಸೃಷ್ಟಿಸಿದೆ. ಚಿಕ್ಕಮಗಳೂರು ತಾಲೂಕಿನ ಕೆ ಆರ್. ಪೇಟೆ ಸರ್ಕಾರಿ ಶಾಲೆ ಹಿಂಭಾಗದಲ್ಲೇ ಇರುವ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳು ಕಳೆದ ಎರಡು ತಿಂಗಳಿಂದ ಬೇಲೂರು, ಸಕಲೇಶಪುರ ಭಾಗದಲ್ಲಿ ದಾಂಧಲೆ ನಡೆಸಿ ಲಕ್ಷಾಂತರ ರೂಪಾಯಿ ಬೆಳೆ ನಾಶಕ್ಕೆ ಕಾರಣವಾಗಿದ್ದವು. 

ಕಾಂಗ್ರೆಸ್ ಗ್ಯಾರಂಟಿಗಳಿಂದ ಬಿಜೆಪಿಗೆ ಬಲ ಕುಗ್ಗಿದೆ: ಸಚಿವ ಎಂ.ಸಿ.ಸುಧಾಕರ್‌

ಇದೀಗ ಜನವಸತಿ ಪ್ರದೇಶದ ಕೂಗಳತೆ ದೂರದಲ್ಲೇ ಆನೆಗಳ ಟೀಮ್ ಬೀಡು ಬಿಟ್ಟಿರುವುದರಿಂದ ಮುನ್ನೆಚ್ಚರಿ ಕ್ರಮವಾಗಿ ಚಿಕ್ಕಮಗಳೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳ ಚಾಲನ ವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ ಆನೆ ಹಾವಳಿ ಅಷ್ಟಾಗಿ ಇರಲಿಲ್ಲ. ಇದೀಗ ನರಹಂತಕ ಭೀಮಾ ಸೇರಿದಂತೆ 30 ಆನೆಗಳ ತಂಡ ಕಾಫಿನಾಡಿಗೆ ಎಂಟ್ರಿ ಆಗಿರುವುದರಿಂದ ಜನ ಹೊಲಗದ್ದೆ ತೋಟಗಳಿಗೆ ಹೋಗುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. 30 ಆನೆಗಳ ತಂಡ ಬಂದಿರುವುದರಿಂದ ಅರಣ್ಯ ಇಲಾಖೆ ಕೂಡ ಹೈ ಅಲರ್ಟ್ ಘೋಷಿಸಿದೆ.

click me!