ರಾಜೀನಾಮೆ ನೀಡಿ ಪೇಚಿಗೆ ಬಿದ್ರು ಬಿಎಸ್ಪಿಗರು..! ನೋಟಿಸ್ ಜಾರಿ

By Kannadaprabha News  |  First Published Mar 15, 2020, 3:10 PM IST

ಕೊಳ್ಳೇಗಾಲ ನಗರಸಭೆ ಮೀಸಲಾತಿ ಪಟ್ಟಿ ಹೊರ ಬೀಳುತ್ತಿದ್ದಂತೆ 6 ಮಂದಿ ಬಿಎಸ್‌ಪಿ ಚಿನ್ಹೆಯಡಿ ಆರಿಸಿ ಬಂದಿರುವ ನಗರಸಭಾ ಸದಸ್ಯರು ಬಿಎಸ್‌ಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆ ಕೈಗೊಳ್ಳುವ ಮೂಲಕ ನಾಟಕೀಯ ಬೆಳವಣಿಗೆ ಪ್ರದರ್ಶಿಸಲು ಹೋಗಿ ಈಗ ವಿವಾದಕ್ಕಿಡಾಗಿದ್ದಾರೆ.


ಚಾಮರಾಜನಗರ(ಮಾ.15): ಕೊಳ್ಳೇಗಾಲ ನಗರಸಭೆ ಮೀಸಲಾತಿ ಪಟ್ಟಿ ಹೊರ ಬೀಳುತ್ತಿದ್ದಂತೆ 6 ಮಂದಿ ಬಿಎಸ್‌ಪಿ ಚಿನ್ಹೆಯಡಿ ಆರಿಸಿ ಬಂದಿರುವ ನಗರಸಭಾ ಸದಸ್ಯರು ಬಿಎಸ್‌ಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆ ಕೈಗೊಳ್ಳುವ ಮೂಲಕ ನಾಟಕೀಯ ಬೆಳವಣಿಗೆ ಪ್ರದರ್ಶಿಸಲು ಹೋಗಿ ಈಗ ವಿವಾದಕ್ಕಿಡಾಗಿದ್ದಾರೆ.

ಶಂಕನಪುರ ಪ್ರಕಾಶ್, ರಾಮಕೃಷ್ಣ, ನಾಗಮಣಿ ಗೋಪಾಲ್, ನಾಗಸುಂದ್ರಮ್ಮ, ನಾಸೀರ್ ಷರೀಫ್ ಮತ್ತು ಪವಿತ್ರಾ ರಮೇಶ್ ಅವರು ನಗರಸಭಾ ಚುನಾಣೆಯಲ್ಲಿ ಬಿಎಸ್‌ಪಿ ಚಿನ್ಹೆಯಡಿ ಗುರುತಿಸಿಕೊಂಡಿದ್ದರು. ಆದರೆ ಶಾಸಕ ಮಹೇಶ್ ಅವರನ್ನು ಬಿಎಸ್‌ಪಿ ಉಚ್ಛಾಟಿಸಿದ ಬೆನ್ನಲ್ಲೆ ಶಾಸಕರ ಜೊತೆ ಈ ಆರು ಮಂದಿ ಗುರುತಿಸಿಕೊಂಡಿದ್ದರು. ಈಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾಧೆ ಮೀಸಲಾತಿ ಪ್ರಕಟಗೊಂಡ ಬಳಿಕ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷರಿಗೆ ಅಂಚೆ ಮೂಲಕ ಆರು ಮಂದಿಯೂ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

Tap to resize

Latest Videos

ಕೊರೋನಾ ಕಾಟ : ಉದ್ಯೋಗಿಗಳಿಗೆ ವೇತನ ಸಹಿತ ರಜೆ?

ಕ್ರಮಬದ್ದವಲ್ಲದ್ದರಿಂದ ಸ್ವೀಕರಿಸಿಲ್ಲ: ರಾಜೀನಾಮೆ ಪತ್ರ ಸಲ್ಲಿಸಿದ ಕೆಲ ದಿನಗಳಲ್ಲಿ ಈಗ ೬ ಮಂದಿ ಸದಸ್ಯರು ಈಗ ಬಿಎಸ್‌ಪಿ ರಾಜ್ಯ ಘಟಕ ನೊಟೀಸ್ ಜಾರಿ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಮಾತ್ರವಲ್ಲ ಜಿಲ್ಲಾಧಿಕಾರಿಗಳು ಪಕ್ಷದಿಂದ ಗೆದ್ದ ಇವರು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ರಾಜೀನಾಮೆ ಕ್ರಮಬದ್ದವಲ್ಲದ ಕಾರಣ ಸ್ವೀಕರಿಸಿಲ್ಲ. ಜಿಲ್ಲಾಧಿಕಾರಿಗಳು ಇವರ ಸದಸ್ಯತ್ವ ಪ್ರಮಾಣ ಬೋಧನೆ ತಡೆ ಹಿಡಿಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಬಿಎಸ್‌ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ದೂರು ನೀಡಿದ್ದಾರೆ. ವಾರದೊಳಗೆ ಸಹಿ ದೃಢಿಕರಿಸಲು ಸೂಚನೆ: ಸಹಿ ಮಾಡಿರುವ ಆರು ಮಂದಿ ನಗರಸಭಾ ಸದಸ್ಯರಿಗೂ ಸಹ ಬಿಎಸ್‌ಪಿ ರಾಜ್ಯ ಘಟಕ ನೋಟಿಸ್ ಜಾರಿ ಮಾಡಿದೆ.

ನಿಮ್ಮ ರಾಜೀನಾಮೆ ಕ್ರಮಬದ್ದವಾಗಿಲ್ಲ. ಸಹಿ ನಿಮ್ಮದೆ ಎಂಬುದಕ್ಕೆ ಯಾವುದೆ ದಾಖಲೆ ಇಲ್ಲ, ಪತ್ರದಲ್ಲಿ ದಿನಾಂಕ ಹಾಗೂ ಯಾರನ್ನು ಉದ್ದೇಶಿಸಿ ರಾಜೀನಾಮೆ ಸಲ್ಲಿಸಲಾಗಿದೆ ಎಂಬ ಸ್ಪಷ್ಟತೆ ಇಲ್ಲದ ಕಾರಣ ರಾಜೀನಾಮೆ ನೀಡಿವರೆಲ್ಲರೂ ನೋಟೀಸ್ ತಲುಪಿದ ೧ ವಾರದೊಳಗೆ ಕೇಂದ್ರ ಕಚೇರಿಗೆ ಆಗಮಿಸಿ ಸಹಿ ಮಾಡಿರುವುದು ನಾವೇ ಎಂಬುದರ ಕುರಿತು ಹೇಳಿಕೆ ನಮೂದಿಸಬೇಕು ಎಂದು ನಿರ್ದೇಶನ ನೀಡಿದೆ. ಹಾಗಾಗಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ೬ಮಂದಿಯೂ ಸಹಾ ಆಡ ಕತ್ತರಿಯಲ್ಲಿ   

click me!