ಸಚಿವ ಸ್ಥಾನಕ್ಕಾಗಿ ಹರಕೆ: 1001 ಕಾಯಿ ಒಡೆದ ಸಚಿವ

Suvarna News   | Asianet News
Published : Mar 15, 2020, 02:49 PM IST
ಸಚಿವ ಸ್ಥಾನಕ್ಕಾಗಿ ಹರಕೆ: 1001 ಕಾಯಿ ಒಡೆದ ಸಚಿವ

ಸಾರಾಂಶ

ಆಹಾರ ಸಚಿವ ಕೆ. ಗೋಪಾಲಯ್ಯ ಅವರು ಮಂಡ್ಯದಲ್ಲಿ ಹದ್ದಿನಕಲ್ಲು ಹನುಮಂತರಾಯಸ್ವಾಮಿಗೆ ಹರಕೆ ತೀರಿಸಿದ್ದಾರೆ. ಸಚಿವ ಸ್ಥಾನ ಸಿಗಲು ಅವರು ಹರಕೆ ಹೇಳಿಕೊಂಡಿದ್ದರು. ಸಚಿವರು ಹೇಳಿದ್ದ ಹರಕೆಯನ್ನು ಶನಿವಾರ ತೀರಿಸಿದ್ದಾರೆ.  

ಮಂಡ್ಯ(ಮಾ.15): ಆಹಾರ ಸಚಿವ ಕೆ. ಗೋಪಾಲಯ್ಯ ಅವರು ಮಂಡ್ಯದಲ್ಲಿ ಹದ್ದಿನಕಲ್ಲು ಹನುಮಂತರಾಯಸ್ವಾಮಿಗೆ ಹರಕೆ ತೀರಿಸಿದ್ದಾರೆ. ಸಚಿವ ಸ್ಥಾನ ಸಿಗಲು ಅವರು ಹರಕೆ ಹೇಳಿಕೊಂಡಿದ್ದರು. ಸಚಿವರು ಹೇಳಿದ್ದ ಹರಕೆಯನ್ನು ಶನಿವಾರ ತೀರಿಸಿದ್ದಾರೆ.

ಹರಕೆ ತೀರಿಸಿದ ಸಚಿವ ಹದ್ದಿನಕಲ್ಲು ಹನುಮಂತರಾಯಸ್ವಾಮಿಗೆ 1001 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ. ಆಹಾರ ಸಚಿವ ಕೆ.ಗೋಪಾಲಯ್ಯ, ಸಚಿವ ಸ್ಥಾನಕ್ಕಾಗಿ ಹರಕೆ ಹೇಳಿಕೊಂಡಿದ್ದರು.

ಕೊಡಗಿನಲ್ಲಿ ಸೆರೆಯಾಯ್ತು ಹೆಬ್ಬುಲಿ

ನಾಗಮಂಗಲ ತಾಲೂಕಿನ ಭೈರಸಂದ್ರ ಗ್ರಾಮದಲ್ಲಿರುವ ಹದ್ದಿನಕಲ್ಲು ಹನುಮಂತರಾಯಸ್ವಾಮಿ ದೇವಾಲಯಕ್ಕೆ ಶನಿವಾರ ಕುಟುಂಬ ಸಮೇತ ಆಗಮಿಸಿ ಹರಕೆ ತೀರಿಸಿದ್ದಾರೆ. ಹದ್ದಿನಕಲ್ಲು ಬೆಟ್ಟದ ತಪ್ಪಲಿನಲ್ಲಿರುವ ಹನುಮಂತದೇವರಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಸ್ವತಃ ಪ್ರಸಾದ ವಿತರಿಸಿದ್ದಾರೆ.

ಹರಕೆ ತೀರಿಸುವ ನಿಮಿತ್ತ ಆಗಮಿಸಿದ್ದೆ ಅಷ್ಟೆ. ಇದಕ್ಕೆ ಯಾವುದೇ ಪರ್ಯಾಯ ಅರ್ಥ ಕಲ್ಪಿಸುವುದು ಬೇಡ ಎಂದಿರುವ ಸಚಿವರು ಸುದ್ದಿಗಾರರೊಂದಿಗೆ ಹೆಚ್ಚು ಮಾತನಾಡಲು ನಿರಾಕರಿಸಿ ನಿರ್ಗಮಿಸಿದ್ದಾರೆ.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ