ಕೈ ಅಭ್ಯರ್ಥಿಗೆ ನನ್ನ ಬೆಂಬಲ ಇಲ್ಲ: ಕಾಂಗ್ರೆಸ್‌ ದುರೀಣ

By Kannadaprabha News  |  First Published Mar 23, 2024, 9:38 AM IST

 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ತಮ್ಮ ಪುತ್ರ ಎಚ್‌.ವಿ.ವೆಂಕಟೇಶ್‌ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಗುಂಪುಗಾರಿಕೆ ಮಾಡಿ ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡಿದ್ದ ಹಿನ್ನಲೆ ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಭೋವಿ ಸಮಾಜದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪರಿಗೆ ಬೆಂಬಲ ಇಲ್ಲ. ಇವರ ಪರ ಮತ ಹಾಕುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ದುರೀಣ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.


  ಪಾವಗಡ :   ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ತಮ್ಮ ಪುತ್ರ ಎಚ್‌.ವಿ.ವೆಂಕಟೇಶ್‌ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಗುಂಪುಗಾರಿಕೆ ಮಾಡಿ ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡಿದ್ದ ಹಿನ್ನಲೆ ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಭೋವಿ ಸಮಾಜದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪರಿಗೆ ಬೆಂಬಲ ಇಲ್ಲ. ಇವರ ಪರ ಮತ ಹಾಕುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ದುರೀಣ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.

ಅವರು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ,ಈ ಭಾಗದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಬಿ.ಎನ್‌.ಚಂದ್ರಪ್ಪ ಆಯ್ಕೆಗೊಳಿಸಿ ಹೈಕಮಾ₹ಡ್‌ ಆದೇಶ ಹೊರಡಿಸಿದೆ. ಈ ಭಾಗದಲ್ಲಿ ಭೋವಿ ಸಮಾಜಕ್ಕೆ ಅದ್ಯತೆ ನೀಡಿ, ಇಲ್ಲ ಚಂದ್ರಪ್ಪ ಹೊರತುಪಡಿಸಿ ಬೇರೆಯಾರಿಗಾದರೂ ನೀಡಿ ಎಂದು ರಾಜ್ಯ ಕಾಂಗ್ರೆಸ್‌ಗೆ ಬೇಡಿಕೆ ಇಡಲಾಗಿತ್ತು. ಇದ್ಯಾವುದನ್ನು ಪರಿಗಣಿಸಿಲ್ಲ. ಅಲ್ಲದೇ ಈ ಭಾಗದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎಚ್‌.ವಿ.ವೆಂಕಟೇಶ್‌ರಿಗೆ ಪಾವಗಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಲು ಆನೇಕ ರೀತಿಯ ಪ್ರಯತ್ನ ಪಟ್ಟಿದ್ದರು. ತಂದೆ,ಮಗನಿಗೆ ರಾಜಕೀಯ ಭವಿಷ್ಯವಿಲ್ಲ ಎಂದು ಇಲ್ಲ ಸಲ್ಲದ ಮಾಹಿತಿ ನೀಡಿದ್ದರು.

Tap to resize

Latest Videos

ಇಲ್ಲಿನ ನಮ್ಮ ಏಳೆಂಟು ಮಂದಿ ವಿರೋಧಿಗಳ ಗುಂಪು ಕಟ್ಟಿ ನಮ್ಮ ವಿರುದ್ಧ ಬುಗಿಲೆಬ್ಬಿಸಿದ್ದರು. ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಎಚ್‌.ವಿ.ವೆಂಕಟೇಶ್‌ ಅವರಿಗೆ ಇಲ್ಲಿನ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಿದ್ದಂತೆ ಬಿ.ಎನ್‌.ಚಂದ್ರಪ್ಪ ಸೇರಿ ಇವರ ಆನೇಕ ಮಂದಿ ಬೆಂಬಲಿಗರು ನಮ್ಮನ್ನು ಸೋಲಿಸಲು ಇಲ್ಲಿನ ಜನತಾದಳದ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಇವರು ಚುನಾವಣೆಯ ಕಣದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಲು ಏನೇ ಪ್ರಯತ್ನ ಪಟ್ಟರೂ ಮತದಾರರರು ಕೈಬಿಡಲಿಲ್ಲ. ಹೆಚ್ಚು ಮತಗಳಿಂದ ಎಚ್‌.ವಿ.ವೆಂಕಟೇಶ್‌ ಜಯಸಾಧಿಸಿದ್ದು, ಎಲ್ಲರಿಗೂ ಗೊತ್ತಿದೆ. ಹೀಗಾಗಿ ಭೋವಿ ಸಮಾಜದ ವತಿಯಿಂದ ಶೀಘ್ರ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮ ಜತೆ ಇತರೆ ಕೂರಚ, ಕೊರಮ ಇತರೆ ಸಮುದಾಯಗಳಿಗೂ ಚಂದ್ರಪ್ಪ ಪರ ಕೆಲಸ ಮಾಡದಂತೆ ಸಂದೇಶ ನೀಡಲಿದ್ದೇವೆ. ಈ ವಿಷಯದಲ್ಲಿ ಯಾವುದೇ ರಾಜಿ ಇರುವುದಿಲ್ಲ.ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ನಮ್ಮ ಮತದಾನ ಎಂಬುವುದು ಶೀಘ್ರದಲ್ಲಿ ತಿಳಿಸಲಿರುವುದಾಗಿ ಅವರು ಹೇಳಿದರು.

click me!