ಕತ್ತಲಾಗುತ್ತಿದ್ದಂತೆ ಕೈಯಲ್ಲಿ ತಲ್ವಾರ ಹಿಡಿದು ತಿರುಗ್ತಾರೆ ಖದೀಮರು; ಕಳ್ಳರ ಹಾವಳಿಗೆ ಬೆಚ್ಚಿಬಿದ್ದ ಚಿಕ್ಕೋಡಿ ಜನರು!

Published : Mar 22, 2024, 11:31 PM IST
ಕತ್ತಲಾಗುತ್ತಿದ್ದಂತೆ ಕೈಯಲ್ಲಿ ತಲ್ವಾರ ಹಿಡಿದು ತಿರುಗ್ತಾರೆ ಖದೀಮರು; ಕಳ್ಳರ ಹಾವಳಿಗೆ ಬೆಚ್ಚಿಬಿದ್ದ ಚಿಕ್ಕೋಡಿ ಜನರು!

ಸಾರಾಂಶ

ಚಿಕ್ಕೋಡಿಯಲ್ಲಿ ಕಳ್ಳರ ಹಾವಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ರಾತ್ರಿಯಾದರೆ ಸಾಕು ಕೈಯಲ್ಲಿ ತಲ್ವಾರ ಹಿಡಿದು ರಸ್ತೆಗಿಳಿಯುತ್ತಿದ್ದ ಖದೀಮರು. ಸಿಕ್ಕ ಸಿಕ್ಕವರನ್ನ ಬೆದರಿಸಿ, ಒಂಟಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕೋಡಿ (ಮಾ.22): ಚಿಕ್ಕೋಡಿಯಲ್ಲಿ ಕಳ್ಳರ ಹಾವಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ರಾತ್ರಿಯಾದರೆ ಸಾಕು ಕೈಯಲ್ಲಿ ತಲ್ವಾರ ಹಿಡಿದು ರಸ್ತೆಗಿಳಿಯುತ್ತಿದ್ದ ಖದೀಮರು. ಸಿಕ್ಕ ಸಿಕ್ಕವರನ್ನ ಬೆದರಿಸಿ, ಒಂಟಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕೋಡಿ ಪಟ್ಟಣದ ಹಾಲಟ್ಟಿಯ ಬಸವನಗರದ ಮನೆಗಳ ಮುಂದೆ ಕಳ್ಳರ ಸಂಚಾರ ಹಲವು ಗಲ್ಲಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಗ್ಯಾಂಗ್. ತಡರಾತ್ರಿ ಕೈಯಲ್ಲಿ ಮಚ್ಚು ಹಿಡಿದು ಗಲ್ಲಿ ಗಲ್ಲಿ ಸಂಚರಿಸುತ್ತಿರುವ ಕಳ್ಳರ ಚಲನವಲನಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಬ್ಬರು ಪುರುಷರು ಓರ್ವ ಮಹಿಳೆಯ ಓಡಾಡುತ್ತಿದ್ದಾರೆ. ಕೆಲ ಮನೆಗಳ ಕಿಟಕಿಗಳಲ್ಲಿ ಇಣುಕಿ ಹೊಂಚು ಹಾಕಲು ಯತ್ನಿಸಿರುವುದು ಕಂಡುಬಂದಿದೆ.

ವಿಜಯಪುರ: ಚಲಿಸುವ ರೈಲಿಗೆ ಬಿದ್ದು ಯುವಕ ಆತ್ಮಹತ್ಯೆ!

ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಕಳ್ಳರ ಹಾವಳಿಗೆ ಚಿಕ್ಕೋಡಿ ಪಟ್ಟಣದ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ರಾತ್ರಿಯಾದರೆ ಒಂಟಿಯಾಗಿ ಓಡಾಡಲು ಭಯಪಡುತ್ತಿದ್ದಾರೆ. ಇನ್ನು ಒಂಟಿಯಾಗಿರುವ ಮನೆಗಳಲ್ಲಿ ಕಳ್ಳರ ಭಯದಲ್ಲಿ ಮಲಗುವಂತಾಗಿದೆ.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ