* ಪರೀಕ್ಷೆ-2ರಲ್ಲಿ ಹೆಚ್ಚಿನ ಅಂಕಗಳು, ಮೂಡಿದ ಅನುಮಾನಗಳು
* ಅಕ್ರಮ ತನಿಖೆಗೆ ಆಗ್ರಹಿಸಿ ಸಿಎಂ, ಗೃಹ ಸಚಿವರಿಗೆ ದೂರು
* ನೊಂದ ಅಭ್ಯರ್ಥಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ
ಆನಂದ್ ಎಂ. ಸೌದಿ
ಯಾದಗಿರಿ(ಫೆ.01): 545 ಪಿಎಸೈ-ಸಿವಿಲ್ ನೇಮಕಾತಿ(PSI Civil Recruitment) ಪರೀಕ್ಷೆ ಹಾಗೂ ಆಯ್ಕೆ ಪಟ್ಟಿಯಲ್ಲಿ ಅಕ್ರಮ(Illegal) ನಡೆದಿದೆ ಎಂಬ ಆರೋಪಗಳ ಕುರಿತ ಹಗರಣದ ಹೂರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿರುವಂತಿವೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಸಾಮಾಜಿಕ ಜಾಲತಾಣಗಳ ಈ ಕುರಿತು ಪ್ರಶ್ನಿಸುತ್ತಿರುವ ನೊಂದ ಅಭ್ಯರ್ಥಿಗಳು, ಅಕ್ರಮದ ಕುರಿತ ಅನುಮಾನಸ್ಪದ ಅಂಶಗಳುಳ್ಳ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
undefined
ಜ.19 ರಂದು ಬಿಡುಗಡೆಯಾದ ಆಯ್ಕೆ ಪಟ್ಟಿ ಪ್ರಕಟವಾದ ನಂತರ, ತಮ್ಮ ಹೆಸರಿಗಾಗಿ ಹುಡುಕಾಡಿದ ಪ್ರತಿಭಾವಂತರ ಪಡೆ ಕಂಗಾಲಾಗಿದೆ. ಅತೀ ಕ್ಲಿಷ್ಟಕರವಾದ ಎಂದೇ ವಿಶ್ಲೇಷಿಸಲ್ಪಟ್ಟ ಪರೀಕ್ಷೆಯಲ್ಲಿ(Exam) ಅರ್ಹತೆಗೆ ತಕ್ಕಂತೆ ಬರೆದ ಪ್ರತಿಭಾವಂತರು, ಹುದ್ದೆಗೆ ಆಯ್ಕೆಯಾಗುವುದು ಖಚಿತ ಎಂದೇ ನಂಬಿದ್ದರು. ಆದರೆ, ರ‍್ಯಾಂಕ್ ಪಟ್ಟಿ(Rank List) ಕಂಡೊಡನೆ ಅನೇಕರು ಹೌಹಾರಿದ್ದಾರೆ. ತಮ್ಮ ಹೆಸರುಗಳನ್ನೇ ಬರೆಯಲಿಕ್ಕೆ ಆಗದ ಕೆಲವರು ಪಟ್ಟಿಯ ಆರಂಭದ ಕ್ರಮಗಳಲ್ಲಿ ಹೆಸರು ಗಿಟ್ಟಿಸಿರುವುದು ಪ್ರತಿಭಾವಂತರ ಅಚ್ಚರಿ ಮೂಡಿಸಿದೆ. ಪರೀಕ್ಷೆ-1 ಹಾಗೂ ಪರೀಕ್ಷೆ-2 ರಲ್ಲಿ ಕೆಲವರ ಅಂಕಗಳು ಭಾರಿ ಸಂಶಯಕ್ಕೀಡಾಗಿಸಿದೆ.
PSI Recruitment: ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಸಿಎಂಗೆ ಶಾಸಕ ರಾಜೂಗೌಡ ಪತ್ರ
ಪೊಲೀಸ್ ಇಲಾಖೆಯಲ್ಲೇ(Police Department) ಕಳ್ಳಾಟ ನಡೆದಿರಬಹುದು ಎಂಬ ಬಲವಾದ ಶಂಕೆ ಮೂಡಿಸಿದ್ದರಿಂದ ಅನೇಕರು ತನಿಖೆಗೆ ಆಗ್ರಹಿಸುತ್ತಿದ್ದಾರೆ. ಇದಕ್ಕೆಂದೇ, ಸಾಮಾಜಿಕ ಜಾಲತಾಣಗಳಲ್ಲಿ(Social Media) ಎಲ್ಲ ದಾಖಲೆಗಳ ಸಮೇತ ಅನರ್ಹರ ಕುರಿತ ಚರ್ಚೆಗಳು ನಡೆಯುತ್ತಿವೆ. ಗೃಹ ಸಚಿವರು ಹಾಗೂ ಇಲಾಖೆಯ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿಯನ್ನೂ ನೀಡಲಾಗಿದೆಯಂತೆ.
ತನಿಖೆಗೆ ಆಗ್ರಹಿಸಿ ಸಿಎಂ, ಗೃಹ ಸಚಿವರಿಗೆ ಜಿಲ್ಲಾಡಳಿತ ಮೂಲಕ ದೂರು:
ಪಿಎಸೈ ನೇಮಕಾತಿ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ಭಾಗದ (ಕಲಂ 371 ಜೆ) ಅಭ್ಯರ್ಥಿಗಳಿಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಮಾಡಲಾಗಿದೆ. ಜೊತೆಗೇ, ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ನೊಂದ ಅಭ್ಯರ್ಥಿಯೊಬ್ಬರು ಯಾದಗಿರಿ(Yadgir) ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ.
ದೂರು ಪತ್ರದಲ್ಲಿ ಅಫ್ಜಲ್ಪೂರು ಮೂಲದ, ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಬಗ್ಗೆ ಉಲ್ಲೇಖಿಸಿ, ಅವರ ಮುಂತಾದ ವಿವರಗಳನ್ನು ನೀಡಿದ್ದಾರೆ. ಸದರಿ ವ್ಯಕ್ತಿಯ ಅನುಮಾನಾಸ್ಪದ ನಡೆಗಳ ಬಗ್ಗೆಯೂ ಈ ದೂರು ಪತ್ರದಲ್ಲಿ ತಿಳಿಸಲಾಗಿದ್ದು, ಬ್ಲೂಟೂತ್ ಅಥವಾ ಮತ್ತಿತರೆ ಅಕ್ರಮಗಳ ಮೂಲಕ ನಕಲು ಮಾಡಿ, ವಂಚಿಸಿರಬಹುದು ಎಂದು ಶಂಕಿಸಲಾಗಿದೆ. ಹಣ ಇದ್ದವರಿಗೆ ಮಾತ್ರ ಪಿಎಸೈ ಹುದ್ದೆ ಎನ್ನುವುದಾದರೆ, ಬಡ-ಪ್ರತಿಭಾವಂತರ ಗತಿಯೇನು ಎಂದು ದೂರಿನಲ್ಲಿ ಅಳಲು ತೋಡಿಕೊಂಡ ನೊಂದ ಅಭ್ಯರ್ಥಿ, ಈ ಕುರಿತು ತನಿಖೆ ನಡೆಸಿ ನ್ಯಾಯಕ್ಕೆ ಮನವಿ ಮಾಡಿದ್ದಾರೆ.
Yadgir: ಕೋವಿಡ್ ಪರಿಹಾರ ಚೆಕ್ ಬೌನ್ಸ್: ಗುರುಮಠಕಲ್, ಶಹಾಪುರದಲ್ಲೂ ಪತ್ತೆ..!
PSI Exam Scam: ಪಿಎಸೈ ಪರೀಕ್ಷೆ ಅಕ್ರಮ ಶಂಕೆ, ಯಾದಗಿರಿ ವ್ಯಕ್ತಿ ಸೂತ್ರಧಾರಿಯೇ?
ಯಾದಗಿರಿ: ಪೊಲೀಸ್ ಸಬ್‌ಇನ್ಸಪೆಕ್ಟರ್ (PSI Civil) ನೇಮಕಾತಿ ಪರೀಕ್ಷೆಯಲ್ಲಿ(Exam) ಭಾರಿ ಅಕ್ರಮ ನಡೆದಿದೆ ಎಂಬ ಆರೋಪಗಳು ಇಲ್ಲೀಗ ಪ್ರತಿಧ್ವನಿಸುತ್ತಿವೆ. ಜ.19 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾದ ನಂತರ ಇಂತಹ ಅನುಮಾನಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ರಾಜ್ಯದಾದ್ಯಂತ 545 ಹುದ್ದೆಗಳಿಗಾಗಿ ಕಳೆದ ವರ್ಷ (2021) ಅಕ್ಟೋಬರ್ 4 ರಂದು ಪರೀಕ್ಷೆಯಲ್ಲಿ ಅಕ್ರಮದ ಶಂಕೆ ಮೂಡಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆ ವ್ಯಕ್ತಿ ಭಾಗಿಯಾಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿತ್ತು.
ಆಯ್ಕೆ ಪಟ್ಟಿ ಬಿಡುಗಡೆ ನಂತರ ಪರೀಕ್ಷೆ-1 ಮತ್ತು ಪರೀಕ್ಷೆ-2 ರಲ್ಲಿ ಕೆಲವೆಡೆಯ ಅಭ್ಯರ್ಥಿಗಳು(Candidates) ಪಡೆದುಕೊಂಡ ಅಂಕಗಳು ಅಕ್ರಮದ(Scam) ವಾಸನೆಗೆ ಕಾರಣವಾಗಿದೆ. ಅದರಲ್ಲೂ, ಕಲಬುರಗಿ(Kalaburagi) ಜಿಲ್ಲೆಯ ಅಫಜಲ್ಪೂರ ತಾಲೂಕುವೊಂದರಲ್ಲೇ ಹೆಚ್ಚಿನ ಸಂಖ್ಯೆಯ (43ಕ್ಕೂ ಹೆಚ್ಚು ಎನ್ನಲಾಗಿದೆ) ಅಭ್ಯರ್ಥಿಗಳು ಆಯ್ಕೆಯಾಗಿರುವುದು ಅನುಮಾನ ಮೂಡಿಸಿದೆ ಎಂದು ಹೆಸರೇಳಲಿಚ್ಛಿಸದ ನೊಂದ ಅಭ್ಯರ್ಥಿಯೊಬ್ಬರು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿದ್ದರು. ಆಯ್ದ ಒಂದಿಷ್ಟು ಅಭ್ಯರ್ಥಿಗಳಿಗೆ ಈ ನೌಕರಿ ಕೊಡಿಸಲೆಂದೇ ಜಾಲವೊಂದು ಕೆಲಸ ಮಾಡಿದೆ. ಪ್ರತಿ ಹುದ್ದೆಗೆ ಸುಮಾರು 30 ಲಕ್ಷ ರು.ಗಳವರೆಗೆ ಹಣದ ವ್ಯವಹಾರ ನಡೆದಿರಬಹುದು ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದರು.