ಅಯೋಧ್ಯೆ ಮಂದಿರ ಮುಟ್ಟಲು ಪಿಎಫ್‌ಐ ಅಲ್ಲ, ರಾವಣ, ಜಿನ್ನಾ ವಂಶಸ್ಥರಿಂದಲೂ ಸಾಧ್ಯವಿಲ್ಲ; ಈಶ್ವರಪ್ಪ

By Kannadaprabha News  |  First Published Oct 21, 2022, 7:27 AM IST
  • ಅಯೋಧ್ಯೆ ಶ್ರೀರಾಮ ಮಂದಿರ ಮುಟ್ಟಲು ಪಿಎಫ್‌ಐ ಅಲ್ಲ, ರಾವಣ, ಜಿನ್ನಾ ವಂಶಸ್ಥರಿಂದಲೂ ಸಾಧ್ಯವಿಲ್ಲ
  • ಸ್ಫೋಟ ಸಂಚು ಹಿಂದೂ ಸಮಾಜಕ್ಕೆ ದೊಡ್ಡ ಆಘಾತದ ಸಂಗತಿ: ಕೆ.ಎಸ್‌.ಈಶ್ವರಪ್ಪ ಹೇಳಿಕೆ

ಶಿವಮೊಗ್ಗ (ಅ.21) : ಪಿಐಎಫ್‌ಐ ಸಂಘಟನೆಯು ಅಯೋಧ್ಯೆ ಶ್ರೀರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಪಿಎಫ್‌ಐ ಅಲ್ಲ, ರಾವಣನ ವಂಶಸ್ಥರು, ಜಿನ್ನಾ ವಂಶಸ್ಥರು ಬಂದರೂ ಅದು ಆಗಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹರಿಹಾಯ್ದರು.

ಅಯೋಧ್ಯೆ ಸ್ಫೋಟಿಸಲು ಪಿಎಫ್ಐ ಯೋಜನೆ, ಈಶ್ವರಪ್ಪ ಖಂಡನೆ

Tap to resize

Latest Videos

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ಬಹುದಿನದ ಹಿಂದು ಸಮಾಜದ ಕನಸು ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಬಹಳ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಮಮಂದಿರದ ಸ್ಫೋಟಕ್ಕೆ ಸಜ್ಜಾಗಿದ್ದ ರಾಷ್ಟ್ರದ್ರೋಹಿ ಸಂಘಟನೆ ಪಿಎಫ್‌ಐ ಅವರ ಪ್ರಯತ್ನ ಬೆಳಕಿಗೆ ಬಂದಿದೆ. ಇದು ಹಿಂದೂ ಸಮಾಜಕ್ಕೆ ದೊಡ್ಡ ಆಘಾತವಾಗಿದೆ ಎಂದರು.

ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ನಂಬಿಕೆ ಇರುವ ಪ್ರತಿಯೊಬ್ಬರೂ ಪಿಎಫ್‌ಐ ಹೇಳಿಕೆ ಖಂಡನೆ ಮಾಡಬೇಕು. ಕಾಂಗ್ರೆಸ್‌, ಜೆಡಿಎಸ್‌, ಕಮ್ಯುನಿಸ್ಟ್‌ ಎಲ್ಲರೂ ಖಂಡಿಸಬೇಕು. ಇದನ್ನು ಖಂಡಿಸದಿದ್ದರೆ ಅವರು ಅಯೋಗ್ಯರು. ಬಾಬ್ರಿ ಮಸೀದಿ ಗುಲಾಮಗಿರಿ ಸಂಕೇತದಂತಿತ್ತು. ಅಯೋಧ್ಯೆ ಶ್ರೀರಾಮ ಹುಟ್ಟಿದ ಜಾಗ. ಹೀಗಾಗಿಯೇ ಸುಪ್ರೀಂ ಕೋರ್ಚ್‌ ತೀರ್ಪು ನೀಡಿದೆ. ರಾಮ ಮಂದಿರ ಉದ್ಘಾಟನೆಯನ್ನು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಕೇವಲ ಜೈಲಿಗೆ ಕಳುಹಿಸುವುದಲ್ಲ. ಸಂವಿಧಾನ ತಿದ್ದುಪಡಿ ಮಾಡಿ ಸರಿಯಾದ ಶಿಕ್ಷೆ ಆಗಬೇಕು. ಅಂತಹ ಕಾನೂನು ತರಬೇಕು. ಈ ಬಗ್ಗೆ ಪ್ರಧಾನಿ ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಹೊಸ ರೂಪದ ಕಾನೂನು ತಂದು, ಭಯ ಹುಟ್ಟಿಸಬೇಕು. ಅಂತಹ ಕಾನೂನು ಜಾರಿಯಾಗಬೇಕು. ಒಂದೇ ಬುಲೆಟ್‌ನಲ್ಲಿ ನಾಲ್ಕು ಜನರನ್ನು ಸುಟ್ಟುಹಾಕಬೇಕು. ತಕ್ಷಣವೇ ನೇಣಿಗೆ ಏರಿಸಬೇಕು, ಅಂತಹ ಕಾನೂನು ತರಬೇಕು. ಇಂತಹವರನ್ನು ಹಾಗೆ ಬಿಟ್ಟರೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ. ಕೇಂದ್ರ ಸರ್ಕಾರ ತುರ್ತಾಗಿ ಕಾನೂನು ತರಬೇಕು. ತುರ್ತಾಗಿ ಲೋಕಸಭೆ ಅಧಿವೇಶನ ಕರೆದು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.

ಧರ್ಮದ ಬಗ್ಗೆ ಮಾತನಾಡಲು ಅವನ್ಯಾರು?:

‘ಕಾಂತಾರ’ ಸಿನಿಮಾ ಬಗ್ಗೆ ನಟ ಚೇತನ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು,ಚೇತನ್‌ ಯಾರು ಅಂತ ನನಗೆ ಗೊತ್ತಿಲ್ಲ. ಅವನ ಮುಖ ಅಲ್ಲ, ಅವನ ಯಾವ ಸಿನಿಮಾನೂ ನಾನು ನೋಡಿಲ್ಲ. ಹಿಂದು ಧರ್ಮದ ಬಗ್ಗೆ ಮಾತನಾಡಲು ಅವನು ಯಾವನು ಎಂದು ವಾಗ್ದಾಳಿ ನಡೆಸಿದರು.

‘ಎಲ್ಲೆ ಸ್ಪರ್ಧಿಸಿದರೂ ಸಿದ್ದರಾಮಯ್ಯ ಸೋಲ್ತಾರೆ’

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಎಲ್ಲಿಯೇ ನಿಂತರೂ ಸೋಲುತ್ತಾರೆ. ಅವರ ಕಾಲದಲ್ಲಿ ಸಾಕಷ್ಟುಹಿಂದು ಯುವಕರ ಕಗ್ಗೊಲೆ ನಡೆದಿದೆ. ಹಿಂದು ಧರ್ಮ ವಿರೋಧಿ ನೀತಿಯೇ ಅವರನ್ನು ಸೋಲಿಸುತ್ತದೆ. ಹಿಂದು ಧರ್ಮಕ್ಕೆ ದ್ರೋಹ ಮಾಡಿದ್ದೇನೆ ಎಂಬ ಬಗ್ಗೆ ಮೊದಲು ಕ್ಷಮೆ ಕೇಳಲಿ. ಕ್ಷಮೆ ಕೇಳಿದ ಬಳಿಕ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಟಾಂಗ್‌ ನೀಡಿದರು.

ಸಿದ್ದರಾಮಯ್ಯ ವಿರುದ್ಧ ಯಾವ ರೀತಿ ತನಿಖೆ ಮಾಡಬೇಕು ಎಂಬುದನ್ನು ಕುಮಾರಸ್ವಾಮಿ ನಮಗೆ ಹೇಳಿಕೊಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಏನು ಕ್ರಮ ಕೈಗೊಳ್ಳಬೇಕೋ ಆ ರೀತಿ ಕೈಗೊಳ್ಳುತ್ತದೆ. ಅವರು ಹೇಳಿದ ರೀತಿ ನಾವು ಮಾಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಹಲಾಲ್‌ ಕಟ್ಟೋ, ಹಲ್ಕಟ್ಟೋ ಗೊತ್ತಿಲ್ಲ, ಜೀವಮಾನದಲ್ಲಿ ತಿಂದಿಲ್ಲ: ಈಶ್ವರಪ್ಪ

ಕಾಂಗ್ರೆಸ್‌ಗೆ ವಿಪಕ್ಷದ ಸ್ಥಾನವಾದರೂ ಸಿಗಲಿ:

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯನ್ನು ಸ್ವಾಗತ ಮಾಡುತ್ತೇನೆ. ಅವರ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್‌ ಅಧಿಕೃತ ವಿರೋಧ ಪಕ್ಷವಾಗಿ ಬರುವ ದಿಕ್ಕಿನಲ್ಲಾದರೂ ಯಶಸ್ವಿಯಾಗಲಿ. ಅನುಭವಿ ರಾಜಕಾರಣಿ, ಹಲವು ಹುದ್ದೆ ಅಲಂಕರಿಸಿದ್ದಾರೆ. ಗಾಂಧಿ ಕುಟುಂಬಕ್ಕೆ ರಬ್ಬರ್‌ ಸ್ಟಾಂಪ್‌ ಆಗದೇ, ಸ್ವತಂತ್ರವಾಗಿ ಅಧಿಕಾರ ನಡೆಸಲಿ ಎಂದು ವ್ಯಂಗ್ಯವಾಡಿದರು.

click me!