
ಚನ್ನಗಿರಿ [ಅ.02]: ತಾಲೂಕಿನ ಪಾಂಡೋಮಟ್ಟಿಗ್ರಾಮದ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಾಂಡೋಮಟ್ಟಿ ಲೋಕೇಶಣ್ಣ ಅವರ ಪುತ್ರ ಐಎಎಸ್ ಅಧಿಕಾರಿ ಜಿ.ಎಲ್.ಪ್ರವೀಣ್ ಕುಮಾರ್ (41) ಅವರು ಬೆಂಗಳೂರಿನ ಏಷಿಯಾ ಕೊಲಂಬಿಯಾ ಆಸ್ಫತ್ರೆಯಲ್ಲಿ ನಿಧನರಾದರು.
ಪ್ರವೀಣ್ ಕುಮಾರ್ 2006ರಲ್ಲಿ ಐಎಎಸ್ ಪರೀಕ್ಷೆ ಉತ್ತೀರ್ಣರಾಗಿ, ಉನ್ನತ ಮಟ್ಟದ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದು, ಪ್ರಸ್ತುತ ಬೆಂಗಳೂರಿನ ಕೆಪಿಟಿಸಿಎಲ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ 9 ದಿನಗಳ ಹಿಂದೆ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮಧ್ಯಾಹ್ನ 1ಗಂಟೆಯ ಸಮಯದಲ್ಲಿ ಅವರು ಮೃತರಾದರು. ಅವರ ಸ್ವಂತ ಗ್ರಾಮ ತಾಲೂಕಿನ ಪಾಂಡೋಮಟ್ಟಿ ತೋಟದಲ್ಲಿ ಬುಧುವಾರ ಮಧ್ಯಾಹ್ನ ಮೃತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಮಾಜಿ ಶಾಸಕ ವಡ್ನಾಳ್ ರಾಜಣ್ಣ, ತಾಪಂ ಸದಸ್ಯ ಎ.ಜಿ.ಜಗದೀಶ್ ಇತರರು ತೀವ್ರ ಸಂತಾಪ ಸೂಚಿಸಿದ್ದಾರೆ.