ರಾಜ್ಯದಲ್ಲಿ ಅಕಾಲಿಕ ಮಳೆ : ರೈತರು ಕಂಗಾಲು

By Suvarna News  |  First Published Dec 9, 2020, 12:15 PM IST

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಸುರಿದಿದ್ದು ಇದರಿಂದ ರೈತ ಸಮುದಾಯ ಆತಂಕಗೊಂಡಿದೆ. ವಿವಿಧ ರೀತಿಯ ಬೆಳೆಗಳು ಕೊಯ್ಲಿಗೆ ಬಂದಿದ್ದು ಮಳೆಯಿಂದ ಬೆಳೆಗಳು ಹಾಳಾಗುವ ಆತಂಕ ಎದುರಾಗಿದೆ. 


ಚಿಕ್ಕಮಗಳೂರು (ಡಿ.09): ಚಂಡಮಾರುತದ ಪ್ರಭಾವದಿಂದಾಗಿ ಮೋಡದ ವಾತಾವರಣ ಮುಂದುವರಿದ್ದು,   ಸಣ್ಣ ಮಳೆಯೂ ಬಂದಿರುವುದರಿಂದ ಭತ್ತದ ಗದ್ದೆ ಕೊಯ್ಲು, ಅಡಕೆ ಕೊಯ್ಲು ಮಾಡುತ್ತಿರುವ ರೈತರು ಕಂಗಾಲಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು ರೈತರನ್ನು ಚಿಂತೆಗೀಡುಮಾಡಿದೆ. 

  ಬೆಳಗ್ಗೆಯಿಂದ ಸಂಜೆಯವರೆಗೂ ಆಗಾಗ್ಗೆ ಬಿಸಿಲು, ಮೋಡದ ವಾತಾವರಣ ಮುಂದುವರಿದಿದೆ.  ಈಗ ಭತ್ತದ ಗದ್ದೆ ಕೊಯ್ಲಿನ ಸಮಯವಾಗಿದೆ. ಈಗಾಗಲೇ ರೈತರು ಅಲ್ಪ ಕೊಯ್ಲು ಮುಗಿಸಿದ್ದಾರೆ. ಆದರೆ, ಇನ್ನೂ ಅತ್ಯಧಿಕ ಪ್ರಮಾಣ ಕೊಯ್ಲು ಬಾಕಿ ಇದೆ.  ತೆನೆಗಳು ಹಣ್ಣಾಗಿ ಗದ್ದೆಕೊಯ್ಲಿಗೆ ರೆಡಿಯಾಗಿದೆ. ಕೆಲವು ಗದ್ದೆಗಳಲ್ಲಿ ಗಾಳಿಯಿಂದಾಗಿ ಬತ್ತದ ಪೈರು ನೆಲಕ್ಕೆ ಹಾಸಿಬಿದ್ದಿದೆ. ಮೋಡ ಮುಂದುವರಿಯುತ್ತಿರುವುದರಿಂದ ಗದ್ದೆ ಕೊಯ್ಲು ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ.

Tap to resize

Latest Videos

ಈ ಬಾರಿ ಕರ್ನಾಟಕದಲ್ಲಿ ಕಡಿಮೆ ಹಿಂಗಾರು ಮಳೆ? ...

ಅಡಕೆ ಕೊಯ್ಲಿಗೆ ತೊಂದರೆ:  ಈಗಾಗಲೇ ಅಡಕೆ ಕೊಯ್ಲು ಬಿರುಸಿನಿಂದ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಚಂಡಮಾರುತ ಇದ್ದರೂ ಮಳೆ ಬಾರದೇ ಬಿಸಿಲು ಕಾಣಿಸಿಕೊಂಡಿದ್ದರಿಂದ ಅಡಕೆ ಕೊಯ್ಲಿಗೆ ತೊಂದರೆ ಆಗಿರಲಿಲ್ಲ. ಆದರೆ, ಸೋಮವಾರ, ಮಂಗಳವಾರ ಮೋಡದ ವಾತಾವರಣ ಇರುವುದರಿಂದ ಬಿಸಿಲು ಕಡಿಮೆಯಾಗಿ ಸಂಸ್ಕೃರಣೆ ಮಾಡಿದ ಅಡಕೆ ಒಣಗುತ್ತಿಲ್ಲ.

ಇದರಿಂದ ಅಡಕೆ ಕೊಯ್ಲು ಮಾಡಲು ತೊಂದರೆ ಆಗುತ್ತಿದೆ. ಮೋಡದ ವಾತಾವರಣ, ಮಳೆ ಬಂದರೆ ಅಡಕೆಗೆ ಬೂಸ್ಟ್‌ ಬಂದು ಅಡಕೆ ಹಾಳಾಗಲಿದೆ ಎಂಬುದು ಅಡಕೆ ಬೆಳೆಗಾರರ ಕಳವಳಕ್ಕೆ ಕಾರಣವಾಗಿದೆ.

click me!