ಜೂನ್ ಮುಗಿಯುತ್ತಾ ಬಂದರೂ ಹಾರಂಗಿ ಜಲಾಶಯದಲ್ಲಿ ನೀರೇ ಇಲ್ಲ!

Published : Jun 17, 2023, 09:44 PM IST
ಜೂನ್ ಮುಗಿಯುತ್ತಾ ಬಂದರೂ ಹಾರಂಗಿ ಜಲಾಶಯದಲ್ಲಿ ನೀರೇ ಇಲ್ಲ!

ಸಾರಾಂಶ

ಕೊಡಗಿನ  ಏಕೈಕ ಜಲಾಶಯ ಹಾರಂಗಿ ಈಗ ಬಹುತೇಕ ಖಾಲಿಯಾಗಿದೆ. ಮಳೆ ಬಾರದಿದ್ದರೆ, ಕುಡಿಯುವ ನೀರು, ರೈತರ ಕೃಷಿಗೂ ಸಂಕಷ್ಟ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.17): ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗು ಅಂದ್ರೆ ಸಹಜವಾಗಿಯೇ 6 ತಿಂಗಳ ಕಾಲ ಮಳೆ ಸುರಿಯುತ್ತದೆ ಎನ್ನುವುದು ಗೊತ್ತಿರುವ ವಿಷಯ. ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲೇ ಮಳೆಯ ತೀವ್ರ ಕೊರತೆ ಎದುರಾಗಿದೆ. ಪರಿಣಾಮ ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಈಗ ಬಹುತೇಕ ಖಾಲಿಯಾಗಿದೆ. ಇದರಿಂದ ಹಾರಂಗಿ ಜಲಾನಯನ ಪ್ರದೇಶದ ರೈತರು ಮತ್ತು ಹಾರಂಗಿ ಜಲಾಶಯದ ನೀರನ್ನು ಕುಡಿಯುವುದಕ್ಕೆ ಉಪಯೋಗಿಸುತ್ತಿದ್ದ ಜನರು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಬೇಸಿಗೆ ಸಮಯದಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿತ್ತು.

ಹೀಗಾಗಿ ಕಳೆದ ವರ್ಷ ಈ ಸಮಯಕ್ಕೆ ಹಾರಂಗಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿತ್ತು. ಆದ್ದರಿಂದ 2858 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 2851 ಅಡಿ ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ ಇನ್ನೂ ಕೂಡ 2818 ಅಡಿಯಷ್ಟು ಮಾತ್ರವೇ ನೀರಿದೆ. ಇದು 0.85 ಟಿಎಂಸಿ ಮಾತ್ರವೇ ನೀರಿದ್ದು, ಇದು ಉಪಯೋಗಕ್ಕೆ ಬಾರದ ನೀರು. ಆದರೆ ಕಳೆದ ವರ್ಷ ಒಟ್ಟು 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈ ವೇಳೆಗೆ 5 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು.

Madikeri Glass Skywalk Bridge: ಕರ್ನಾಟಕದ ಮೊದಲ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಆರಂಭ, ಪ್ರವಾಸಿಗರ

ಅದು ಈ ಬಾರಿ ಮಳೆಯೇ ಬಾರದ ಹಿನ್ನೆಲೆಯಲ್ಲಿ ಜಲಾಶಯ ಬಹುತೇಕ ಖಾಲಿಯಾಗಿದ್ದು ಡೆಡ್ ಸ್ಟೋರೇಜ್ ನೀರು ಮಾತ್ರವೇ ಸಂಗ್ರಹವಿದೆ. ಜಲಾಶಯದಲ್ಲಿ ಕ್ರೆಸ್ ಗೇಟಿನ ಮಟ್ಟಕ್ಕಿಂತಲೂ ನೀರು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಈ ನೀರನ್ನು ರೈತರ ಉಪಯೋಗಕ್ಕೆ ಬಳಸುವುದಕ್ಕಾಗಲಿ, ಇಲ್ಲ ಈಗಾಗಲೇ ಸೋಮವಾರಪೇಟೆ ನಾಗರಿಕರ ಬಳಕೆಗೆ ನೀಡುತ್ತಿರುವುದಾಗಲಿ ಅವರ ಬಳಕೆಗೆ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. ಜಲಾಶಯದ ತಳಭಾಗದಲ್ಲಿ ಮಾತ್ರ ಅಷ್ಟೇ ಸಲ್ಪ ನೀರು ಇದ್ದು ಅದರೊಳಗಿದ್ದ ಬಂಡೆಗಳೆಲ್ಲವೂ ಕಾಣಿಸುತ್ತಿವೆ.

BAGALKOTE: ಬಾರದ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ, ಊರ ತುಂಬ ಮೆರವಣಿಗೆ ಭರ್ಜರಿ ಊಟ!

ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಇಷ್ಟೊತ್ತಿಗೆ ಜಲಾಶಯ ಭರ್ತಿಯಾಗಿ ಜುಲೈ ತಿಂಗಳಲ್ಲಿ ಜಲಾಶಯಕ್ಕೆ ಭಾಗಿನ ಅರ್ಪಿಸಲಾಗುತಿತ್ತು. ಇದೀಗ ಜಲಾಶಯದ ಒಳಗೆ ಗಿಡಗಂಟಿಗಳು ಬೆಳೆಯುತ್ತಿವೆ. ಜೊತೆಗೆ ಜಲಾಶಯದ ಜಾಗದಲ್ಲಿ ಹುಲ್ಲು ಬೆಳೆದು ಸುತ್ತಮುತ್ತಲ ಬೀಡಾಡಿ ದನಗಳು ಓಡಾಡು ಮೇಯುತ್ತಿವೆ. ಹಾರಂಗಿ ಜಲಾಶಯದಲ್ಲಿ ಇರುವ ಒಂದಷ್ಟು ನೀರನ್ನು ಹೆಬ್ಬಾಲೆ, ಶಿರಂಗಾಲ, ತೊರೆನೂರು ಸೇರಿದಂತೆ ಮೈಸೂರು ಜಿಲ್ಲೆಯ ಪಿರಿಯಪಟ್ಟಣ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸಾಕಷ್ಟು ಹಳ್ಳಿಗಳ ಲಕ್ಷಾಂತರ ಎಕರೆ ಭೂಮಿಗೆ ನೀರು ಪೂರೈಸಲಾಗುತಿತ್ತು. ಜೊತೆಗೆ ಏತ ನೀರಾವರಿ ಮೂಲಕವೂ ಸಾಕಷ್ಟು ರೈತರ ಕೃಷಿ ಭೂಮಿಗೆ ಪೂರೈಸಲಾಗುತಿತ್ತು.

ರೈತರು ಕೂಡ ಜಲಾಶಯದಿಂದ ಸಿಗುವ ನೀರನ್ನು ಉಪಯೋಗಿಸಿಕೊಂಡು ಬೆಳೆ ಬೆಳೆಯುತ್ತಿದ್ದರು. ಈ ಬಾರಿಯೂ ಮಡಿಕೇರಿ, ಗಾಳಿಬೀಡು, ಮುಕ್ಕೋಡ್ಲು ಸೇರಿದಂತೆ ಸುತ್ತಮುತ್ತ ಒಳ್ಳೆಯ ಮಳೆಯಾಗಿ ಜಲಾಶಯಕ್ಕೆ ನೀರು ಬರುತ್ತದೆ. ಹೀಗಾಗಿ ಜಲಾಶದಿಂದ ನೀರು ಸಿಗುತ್ತದೆ ಎಂದು ಆರಂಭದಲ್ಲಿ ಸುರಿದ ಒಂದೆರಡು ಮಳೆಗೆ ರೈತರು ಬೆಳೆ ಹಾಕಿದ್ದರು. ಆದರೀಗ ನೀರಿಲ್ಲದೆ ಇರುವುದರಿಂದ ರೈತರ ಬೆಳೆ ಕೂಡ ಒಣಗಿ ಹೋಗುತ್ತಿವೆ. ಇನ್ನು ಇದೇ ರೀತಿ ಮಳೆ ಬಾರದಿದ್ದಲ್ಲಿ ಈ ಭಾಗದ ದನ ಕರುಗಳಿಗೂ, ಜನ ಜಾನುವಾರುಗಳಿಗೂ ಕುಡಿಯುವ ನೀರಿಗೂ ಆಹಾಕಾರ ಎದುರಾಗಲಿದೆ ಎಂದು ಹಾರಂಗಿ ಗ್ರಾಮದ ನಿವಾಸಿ ಭಾಸ್ಕರ್ ನಾಯಕ್ ಆತಂಕ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ